ಪುಣೆ:ಆರ್ಸಿಬಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 5,000 ಎಸೆತಗಳನ್ನು ಎದುರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಅವರು ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡರು.
ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಈ ಮೈಲುಗಲ್ಲು ತಲುಪಿದರು. 15 ವರ್ಷಗಳ ಸುದೀರ್ಘ ಐಪಿಎಲ್ ಪಯಣದಲ್ಲಿ ವಿರಾಟ್ ಅಗ್ರಕ್ರಮಾಂಕ ಮತ್ತು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಇಷ್ಟು ಎಸೆತಗಳನ್ನು ಎದುರಿಸಲು ಸಾಧ್ಯವಾಗಿದೆ.
ಕೊಹ್ಲಿ ನಂತರದ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಶಿಖರ್ ಧವನ್ ಇದ್ದು, 4,810 ಎಸೆತಗಳನ್ನು ಎದುರಿಸಿದ್ದಾರೆ. 3ನೇ ಸ್ಥಾನದಲ್ಲಿ ರೋಹಿತ್ ಶರ್ಮಾ (4,429), 4ರಲ್ಲಿ ಡೇವಿಡ್ ವಾರ್ನರ್(4,062) ಇದ್ದಾರೆ. ವಾರ್ನರ್ 4,000ಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿರುವ ಏಕೈಕ ವಿದೇಶಿ ಬ್ಯಾಟರ್ ಆಗಿದ್ದಾರೆ.
ಕೊಹ್ಲಿ ತಮ್ಮ ಐಪಿಎಲ್ ಕರಿಯರ್ನಲ್ಲಿ 129ರ ಸ್ಟ್ರೈಕ್ರೇಟ್ನಲ್ಲಿ ಹತ್ತಿರತ್ತಿರ 6,500ರನ್ ಗಳಿಸಿದ್ದಾರೆ. ಆದರೆ ಪ್ರಸ್ತುತ ಐಪಿಎಲ್ನಲ್ಲಿ ಅವರದ್ದು ಕಳಪೆ ಫಾರ್ಮ್. ಏಕೆಂದರೆ, ತಾನಾಡಿದ 11 ಪಂದ್ಯಗಳಿಂದ ಕೇವಲ 219 ರನ್‌ಗಳನ್ನಷ್ಟೇ ಗಳಿಸಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ 33 ಎಸೆತಗಳಲ್ಲಿ 31 ಮತ್ತು 53 ಎಸೆತಗಳಲ್ಲಿ 58 ರನ್ಗಳಿಸಿದ್ದು,ನಿಧಾನಗತಿ ಆಟ ಟೀಕೆಗೆ ಗುರಿಯಾಗಿತ್ತು.
ಇದನ್ನೂ ಓದಿ:RCB vs CSK: ಟೂರ್ನಿಯಲ್ಲಿ ಸಿಕ್ಕಿರುವ ಅತ್ಯಂತ ಪ್ರಮುಖ ಗೆಲುವು- ಜೋಶ್ ಹೇಜಲ್ವುಡ್