ತಿರುವನಂತಪುರಂ:ವಿಜಯ ಹಜಾರೆ ಟ್ರೋಫಿಯಲ್ಲಿ ಬುಧವಾರ ಮೊದಲ ಪಂದ್ಯದಲ್ಲಿ 236 ರನ್ಗಳ ಬೃಹತ್ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಕರ್ನಾಟಕ ತಂಡ ಗುರುವಾರ ತನ್ನ 2ನೇ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 8 ವಿಕೆಟ್ಗಳ ಸೋಲು ಕಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ ಪಡೆ ತಮಿಳುನಾಡು ಬೌಲರ್ಗಳ ವಿರುದ್ಧ ಯಾವುದೇ ಪ್ರತಿರೋಧ ತೋರದೇ 36.3 ಓವರ್ಗಳಲ್ಲಿ ಕೇವಲ 122 ರನ್ಗಳಿಗೆ ಆಲೌಟ್ ಆಯಿತು. ನಾಯಕ ಮನೀಶ್ ಪಾಂಡೆ 40 ಮತ್ತು ರೋಹನ್ ಕಡಮ್ 37 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಮತ್ತು ಎರಡಂಕಿ ದಾಟಿದ ಬ್ಯಾಟರ್ ಎನಿಸಿಕೊಂಡರು.
ಉಳಿದಂತೆ ರವಿಕುಮಾರ್ ಸಮರ್ಥ್(0), ಕೆ. ಸಿದ್ಧಾರ್ಥ್(6), ಕರುಣ್ ನಾಯರ್(9), ಶ್ರೀನಿಆಸ್ ಶರತ್(3), ಜೆ ಸುಚೀತ್(0), ವೆಂಕಟೇಶ್ ಮುರಳೀಧರ(2), ವಿದ್ಯಾದರ್ ಪಾಟೀಲ್(1), ಕೆಸಿ ಕಾರಿಯಪ್ಪ(9) ವೈಫಲ್ಯ ಅನುಭವಿಸಿದರು.