ಕರ್ನಾಟಕ

karnataka

ETV Bharat / sports

ಕೊನೆ ಪಂದ್ಯ ಸೋತರೂ ಪ್ರೀ ಕ್ವಾರ್ಟರ್​ ಫೈನಲ್ ಪ್ರವೇಶಿಸಲು ಯಶಸ್ವಿಯಾದ ಕರ್ನಾಟಕ - ಕರ್ನಾಟಕ vs ರಾಜಸ್ಥಾನ ಪ್ರೀ ಕ್ವಾರ್ಟರ್ ಫೈನಲ್

ಕೇರಳ, ಸರ್ವೀಸಸ್​, ಸೌರಾಷ್ಟ್ರ, ಹಿಮಾಚಲ ಪ್ರದೇಶ, ತಮಿಳುನಾಡು ಈ ಐದು ತಂಡಗಳು ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಉಳಿದ ಮೂರು ಸ್ಥಾನಕ್ಕಾಗಿ ಕರ್ನಾಟಕ, ವಿದರ್ಭ, ಉತ್ತರಪ್ರದೇಶ, ರಾಜಸ್ಥಾನ ಮತ್ತು ತ್ರಿಪುರ ತಂಡಗಳು ಪೈಪೋಟಿ ನಡೆಸಲಿವೆ.

Vijay Hazare Trophy
ಪ್ರೀ ಕ್ವಾರ್ಟರ್​ ಫೈನಲ್ ಪ್ರವೇಶಿಸಲು ಯಶಸ್ವಿಯಾದ ಕರ್ನಾಟಕ

By

Published : Dec 14, 2021, 7:37 PM IST

Updated : Dec 14, 2021, 7:48 PM IST

ತಿರುವನಂತಪುರಂ: ವಿಜಯ ಹಜಾರೆ ಟ್ರೋಫಿಯ ಕೊನೆಯ ಲೀಗ್​ ಪಂದ್ಯದಲ್ಲಿ ಕರ್ನಾಟಕ ತಂಡ ಬೆಂಗಾಲ್​ ವಿರುದ್ಧ 4 ವಿಕೆಟ್​ಗಳ ಸೋಲು ಕಂಡಿದೆ. ಆದರೂ ರನ್​ರೇಟ್​ ಆಧಾರದ ಮೇಲೆ ಪ್ರೀ ಕ್ವಾರ್ಟರ್ ಫೈನಲ್ಸ್​ ತಲುಪುವಲ್ಲಿ ಯಶಸ್ವಿಯಾಗಿದೆ.

ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಮನೀಶ್ ಪಾಂಡೆ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 252 ರನ್​ ಗಳಿಸಿತ್ತು. ಪಾಂಡೆ 85 ಎಸೆತಗಳಲ್ಲಿ ತಲಾ 4 ಸಿಕ್ಸರ್​ ಮತ್ತು 4 ಬೌಂಡರಿಗಳ ನೆರವಿನಿಂದ 90 ರನ್​ಗಳಿಸಿದರು. ಪ್ರವೀಣ್ ದುಬೆ 37 ಮತ್ತು ರೋಹನ್ ಕಡಮ್​ 37 ರನ್​ಗಳಿಸಿ ಪಾಂಡೆಗೆ ಸಾಥ್ ನೀಡಿದ್ದರು.

253 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಬೆಂಗಾಲ್ 48.3 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಸುದೀಪ್ ಚಟರ್ಜಿ 63, ಅಭಿಷೇಕ್ ದಾಸ್​ 58, ರಿತ್ವಿಕ್ ಚೌಧರಿ 49 ರನ್​ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ನೇರವಾಗಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ ತಂಡಗಳು

ಕೇರಳ, ಸರ್ವೀಸಸ್​, ಸೌರಾಷ್ಟ್ರ, ಹಿಮಾಚಲ ಪ್ರದೇಶ, ತಮಿಳುನಾಡು ಈ ಐದು ತಂಡಗಳು ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಉಳಿದ ಮೂರು ಸ್ಥಾನಕ್ಕಾಗಿ ಕರ್ನಾಟಕ, ವಿದರ್ಭ, ಉತ್ತರಪ್ರದೇಶ, ರಾಜಸ್ಥಾನ ಮತ್ತು ತ್ರಿಪುರ ತಂಡಗಳು ಪೈಪೋಟಿ ನಡೆಸಲಿವೆ.

ಕರ್ನಾಟಕಕ್ಕೆ ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿ ರಾಜಸ್ಥಾನ ಎದುರಾಳಿ

ಬಿ ಗುಂಪಿನಲ್ಲಿ ತಮಿಳುನಾಡು 12 ಅಂಕ ಪಡೆದಿದ್ದರೂ ಲೀಗ್ ಹಂತದಲ್ಲಿ ಕರ್ನಾಟಕವನ್ನು ಮಣಿಸಿದ್ದರಿಂದ ಅಗ್ರಸ್ಥಾನಿಯಾಗಿ ನೇರವಾಗಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿತು. ಹಾಗಾಗಿ, ಕರ್ನಾಟಕ ಎ ಗುಂಪಿನಲ್ಲಿ 2ನೇ ಸ್ಥಾನ ಪಡೆದಿದ್ದ ರಾಜಸ್ಥಾನ್​ ತಂಡದ ವಿರುದ್ಧ ಫ್ರೀ ಕ್ವಾರ್ಟರ್ ಫೈನಲ್ ಆಡಲಿದೆ. ತ್ರಿಪುರ ವಿದರ್ಭ ತಂಡವನ್ನು ಮಧ್ಯಪ್ರದೇಶ, ಉತ್ತರಪದೇಶ ತಂಡವನ್ನೂ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಎದುರಿಸಲಿವೆ.

ಇದನ್ನೂ ಓದಿ:ಆಸ್ಟ್ರೇಲಿಯಾ ಅಂಡರ್​ 19 ತಂಡದಲ್ಲಿ ಅವಕಾಶ ಪಡೆದ ಭಾರತೀಯ ಮೂಲದ ಮಿಸ್ಟೆರಿ ಸ್ಪಿನ್ನರ್!

Last Updated : Dec 14, 2021, 7:48 PM IST

ABOUT THE AUTHOR

...view details