ಮುಂಬೈ :90ರ ದಶಕದಲ್ಲಿ ಭಾರತ ಕಂಡಂತಹ ಶ್ರೇಷ್ಠ ವೇಗದ ಬೌಲರ್ಗಳಲ್ಲಿ ಒಬ್ಬರಾಗಿರುವಂತಹ ವೆಂಕಟೇಶ್ ಪ್ರಸಾದ್ ತಮ್ಮ ವೃತ್ತಿ ಜೀವನದಲ್ಲಿ ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಅವರಂತಹ ಐಕಾನಿಕ್ ನಾಯಕರ ನೇತೃತ್ವದಲ್ಲಿ ಆಡಿದ್ದು, ತಮ್ಮ ನೆಚ್ಚಿನ ನಾಯಕ ಅಜರುದ್ದೀನ್ ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಅಜರುದ್ಧೀನ್ ನಾಯಕರಾಗಿದ್ದಾಗ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಾಜಿ ವೇಗಿ, ಗಂಗೂಲಿ ನಾಯಕರಾಗಿದ್ದ ಸಂದರ್ಭದಲ್ಲಿ ವಿದಾಯ ಘೋಷಿಸಿದ್ದರು. ಅಜರುದ್ಧೀನ್ ಮತ್ತು ಗಂಗೂಲಿಯಲ್ಲದೆ ಸಚಿನ್ ತೆಂಡೂಲ್ಕರ್ ಅವಧಿಯಲ್ಲೂ ಭಾರತ ಕ್ರಿಕೆಟ್ನಲ್ಲಿ ಪ್ರಮುಖ ಭಾಗವಾಗಿದ್ದರು.
ಮೂರು ಲೆಜೆಂಡ್ಗಳ ನಾಯಕತ್ವದಲ್ಲಿ ಆಡಿದ್ದರೂ ಪ್ರಸಾದ್ ಅಜರುದ್ಧೀನ್ರನ್ನು ಅತ್ಯುತ್ತಮ ನಾಯಕ ಎಂದು 'ದಿ ಗ್ರೇಟ್ ಕ್ರಿಕೆಟರ್' ಪೋಡ್ಕಾಸ್ಟ್ ಸಂವಾದದಲ್ಲಿ ತಿಳಿಸಿದ್ದಾರೆ.