ಕರ್ನಾಟಕ

karnataka

ETV Bharat / sports

ಕೋವಿಡ್​ಗೆ ಬಲಿಯಾದ ತಾಯಿ-ಸಹೋದರಿ ಕುರಿತು ಭಾವನಾತ್ಮಕ ಪತ್ರ ಬರೆದ ಕ್ರಿಕೆಟರ್‌ ವೇದಾ ಕೃಷ್ಣಮೂರ್ತಿ - ಕೋವಿಡ್ 19

ಎರಡು ವಾರಗಳ ಅಂತರದಲ್ಲಿ ತಮ್ಮ ಪ್ರೀತಿ ಪಾತ್ರರಾಗಿರುವ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ಆಘಾತದಲ್ಲಿರುವ ವೇದಾ ಕೃಷ್ಣಮೂರ್ತಿ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ತಾಯಿ ಮತ್ತು ಸಹೋದರಿ ಕುರಿತು ಭಾವನಾತ್ಮಕ ಪತ್ರದ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ತಾಯಿ-ಸಹೋದರಿ ಕುರಿತು ಭಾವನಾತ್ಮ ಪತ್ರ ಬರೆದ ವೇದಾ ಕೃಷ್ಣಮೂರ್ತಿ
ತಾಯಿ-ಸಹೋದರಿ ಕುರಿತು ಭಾವನಾತ್ಮ ಪತ್ರ ಬರೆದ ವೇದಾ ಕೃಷ್ಣಮೂರ್ತಿ

By

Published : May 10, 2021, 6:19 PM IST

Updated : May 10, 2021, 8:07 PM IST

ಚಿಕ್ಕಮಗಳೂರು : ಕೊರೊನಾ ಎರಡನೇ ಅಲೆ ಭಾರತದಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಬಡವರು-ಶ್ರೀಮಂತರೆಂಬ ಬೇಧವಿಲ್ಲದೆ ಪ್ರತಿದಿನ ಸಾವಿರಾರು ಮಂದಿಯನ್ನು ಬಲಿ ಪಡೆಯುತ್ತಿದೆ.

ಕೆಲವೊಂದು ಘಟನೆಯಲ್ಲಿ ಮನೆಮಂದಿಯಲ್ಲ ಈ ಮಾರಕ ರೋಗಕ್ಕೆ ಬಲಿಯಾದ ಉದಾಹರಣೆಗಳಿವೆ. ಭಾರತ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣ ಮೂರ್ತಿ ಮನೆಯಲ್ಲೂ ಸಹಾ ಎರಡು ವಾರದ ಅಂತರದಲ್ಲಿ ಇಬ್ಬರು ಕೊರೊನಾದಿಂದ ನಿಧನರಾಗಿದ್ದಾರೆ.

ಎರಡು ವಾರಗಳ ಅಂತರದಲ್ಲಿ ತಮ್ಮ ಪ್ರೀತಿ ಪಾತ್ರರಾಗಿರುವ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ಆಘಾತದಲ್ಲಿರುವ ವೇದಾ ಕೃಷ್ಣಮೂರ್ತಿ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ತಾಯಿ ಮತ್ತು ಸಹೋದರಿ ಕುರಿತು ಭಾವನಾತ್ಮಕ ಪತ್ರದ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ:ಕೋವಿಡ್​ ಹೋರಾಟಕ್ಕೆ 30 ಕೋಟಿ ರೂ ದೇಣಿಗೆ ನೀಡಿದ ಎಸ್​ಆರ್​​ಹೆಚ್​ ಸಂಸ್ಥೆ

Last Updated : May 10, 2021, 8:07 PM IST

ABOUT THE AUTHOR

...view details