ಸೌತಾಂಪ್ಟನ್:ಮುಂಬರುವ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಸಜ್ಜುಗೊಳ್ಳಲು ಉತ್ತಮ ವೇದಿಕೆ ಎಂದು ಟಿಮ್ ಸೌಥಿ ಅಭಿಪ್ರಾಯಪಟ್ಟಿದ್ದಾರೆ.
ಲಾರ್ಡ್ಸ್ನಲ್ಲಿ ಜೂನ್ 2-6 ಮತ್ತು ಬರ್ಮಿಂಗ್ಹ್ಯಾಮ್ನಲ್ಲಿ ಜೂನ್ 10-14ರವರೆಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದ್ದು, ತದನಂತರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಜೂನ್ 18ರಿಂದ ಪ್ರಾರಂಭಗೊಳ್ಳಲಿದೆ.
ಇದೇ ವಿಚಾರವಾಗಿ ಮಾತನಾಡಿರುವ ನ್ಯೂಜಿಲ್ಯಾಂಡ್ ತಂಡದ ವೇಗದ ಬೌಲರ್ ಟಿಮ್ ಸೌಥಿ, ಎರಡು ಟೆಸ್ಟ್ ಪಂದ್ಯಗಳು ನಮಗೆ ತಯಾರಿ ನಡೆಸಲು ಉತ್ತಮ ವೇದಿಕೆಯಾಗಿವೆ ಎಂದಿದ್ದಾರೆ.
ಇದನ್ನೂ ಓದಿ: ವಿದೇಶಿ ಆಟಗಾರ್ತಿಯರ ರೀತಿ ನಮ್ಮ ಮಹಿಳಾ ಕ್ರಿಕೆಟರ್ಸ್ ಹೆಚ್ಚು ಬಲಶಾಲಿಗಳಲ್ಲ: ಅಭಯ್ ಶರ್ಮಾ
32 ವರ್ಷದ ಸೌಥಿ ಟೆಸ್ಟ್ನಲ್ಲಿ 302 ವಿಕೆಟ್ ಪಡೆದುಕೊಂಡಿದ್ದು, ಭಾರತದ ವಿರುದ್ಧ ದೊಡ್ಡ ಯುದ್ಧಕ್ಕೆ ಸಜ್ಜಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನ ಆಡುತ್ತಿರುವ ಕಾರಣ ಇದೊಂದು ರೋಮಾಂಚನಕಾರಿ ಅನುಭವವಾಗಲಿದೆ ಎಂದಿರುವ ಸೌಥಿ, ಇದೊಂದು ಭಾವನಾತ್ಮಕ ಪಂದ್ಯವಾಗಿರಲಿದೆ ಎಂದಿದ್ದಾರೆ.