ನವದೆಹಲಿ:ಅಕ್ಟೋಬರ್ 17ರಿಂದ ಯುಎಇಯಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ವಿಶ್ವಕಪ್ನಲ್ಲಿ ತಂಡದ ಪ್ರತಿಯೊಬ್ಬ ಸದಸ್ಯರೂ ಸೇರಿ 2007ರ ಟಿ20 ವಿಶ್ವಕಪ್ನಲ್ಲಿನ ತೋರಿದ ಚಮತ್ಕಾರವನ್ನು ಮತ್ತೆ ಸಂಭವಿಸುವಂತೆ ಮಾಡುತ್ತೇವೆ ಎಂದು ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2007ರ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಭಾರತದ ಮೂರು ಪಂದ್ಯಗಳನ್ನಾಡಿದ್ದರು. ಮೂರು ಪಂದ್ಯಗಳಲ್ಲೂ ಅಜೇಯರಾಗುಳಿದಿದ್ದ ಅವರು ಸೂಪರ್ 8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 50 ರನ್ಗಳಿಸಿ ಗೆಲುವಿನ ರೂವಾರಿ ಎನಿಸಿದ್ದರು.
"ಸೆಪ್ಟೆಂಬರ್ 24, 2007. ಜೋಹನ್ಸ್ ಬರ್ಗ್ನಲ್ಲಿ ನೂರು ಕೋಟಿ ಭಾರತೀಯರ ಕನಸು ನನಸಾದ ದಿನ. ಅಂದು ನಮ್ಮಂತಹ ಅನಾನುಭವಿಗಳ ತಂಡ ವಿಶ್ವಕಪ್ನಲ್ಲಿ ಆಡಿ ಇತಿಹಾಸ ನಿರ್ಮಿಸುತ್ತದೆ ಎಂದು ಯಾರು ಯೋಚಿಸಿದ್ದರು?. ಅದು ಸಂಭವಿಸಿ 14 ವರ್ಷಗಳಾಗಿವೆ. ನಾವು ಬಹಳ ದೂರ ಸಾಗಿದ್ದೇವೆ. ಸಾಕಷ್ಟು ಇತಿಹಾಸಗಳನ್ನು ನಿರ್ಮಿಸಿದ್ದೇವೆ. ನಾನು ಕೆಲವು ಹಿನ್ನಡೆಗಳನ್ನು ಹೊಂದಿದ್ದೇವೆ. ಕಷ್ಟಗಳನ್ನು ಅನುಭವಿಸಿದ್ದೇವೆ. ಆದರೆ ಅದು ಎಂದಿಗೂ ನಮ್ಮ ಉತ್ಸಾಹವನ್ನು ತಡೆಯಲಾಗಲಿಲ್ಲ. ಏಕೆಂದರೆ ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ವಿಜಯಕ್ಕಾಗಿ ನಮ್ಮಿಂದಾಗುವುದನ್ನೆಲ್ಲಾ ಮಾಡುತ್ತೇವೆ" ಎಂದು ರೋಹಿತ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.