ಸೇಲಂ(ತಮಿಳುನಾಡು): ಕಳೆದ ವರ್ಷ ಅನಿರೀಕ್ಷಿತವಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡಕ್ಕ ಪದಾರ್ಪಣೆ ಮಾಡಿದ್ದ ಎಡಗೈ ವೇಗಿ ಟಿ. ನಟರಾಜನ್ ತಮ್ಮ ಹಳ್ಳಿಯಲ್ಲಿ ಎಲ್ಲ ಸೌಲಭ್ಯವುಳ್ಳ ಒಂದು ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಿಸಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
ತಮಿಳುನಾಡಿನ ಸೇಲಂ ಬಳಿಯ ಚಿನ್ನಂಪಟ್ಟಿ ಗ್ರಾಮದಲ್ಲಿ ನಟರಾಜನ್ ಈ ಕ್ರಿಕೆಟ್ ಮೈದಾನ ನಿರ್ಮಿಸಿದ್ದಾರೆ. 2020ರ ಐಪಿಎಲ್ನಲ್ಲಿ ತಮ್ಮ ಕರಾರುವಕ್ ಯಾರ್ಕರ್ ದಾಳಿಯಿಂದ ದೇಶದ ಮನೆ ಮಾತಾಗಿದ್ದ ನಟರಾಜನ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅನಿರೀಕ್ಷಿತವಾಗಿ ಭಾರತ ತಂಡದಲ್ಲಿ ಅವಕಾಶ ಪಡೆದು ಮೂರೂ ಮಾದರಿಯಲ್ಲೂ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಗಾಯದ ಕಾರಣ ನಂತರ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ.
ಇನ್ನು ಬುಧವಾರ ತಮ್ಮ ಊರಿನಲ್ಲಿ ಮೈದಾನ ನಿರ್ಮಿಸಿರುವ ವಿಷಯವನ್ನು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ." ನನ್ನ ಹಳ್ಳಿಯಲ್ಲಿ ಎಲ್ಲ ರೀತಿಯ ಸೌಲಭ್ಯವುಳ್ಳ ಹೊಸ ಕ್ರಿಕೆಟ್ ಮೈದಾನವನ್ನು ನಿರ್ಮಿಸಿದ್ದೇನೆಂದು ಹೇಳುವುದಕ್ಕೆ ನನಗೆ ತುಂಬಾ ಖುಷಿಯಿದೆ. ಈ ಮೈದಾನಕ್ಕೆ ನಟರಾಜನ್ ಕ್ರಿಕೆಟ್ ಗ್ರೌಂಡ್(NCG) ಎಂದು ನಾಮಕರಣ ಮಾಡಿದ್ದೇನೆ. ಕನಸು ನನಸಾಗಿದೆ. ಕಳೆದ ವರ್ಷ ಡಿಸೆಂಬರ್ 1ರಂದು ನಾನು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೆ. ಈ ವರ್ಷ ಕ್ರಿಕೆಟ್ ಮೈದಾನವನ್ನು ನಿರ್ಮಿಸಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
ನಟರಾಜನ್ 2020ರ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ 16 ವಿಕೆಟ್ ಪಡೆದ ನಂತರ ಭಾರತದಾದ್ಯಂತ ಹೆಸರಾಗಿದ್ದರು.
ಇದನ್ನೂ ಓದಿ:ಮಹಿಳೆಯರ ಏಕದಿನ ವಿಶ್ವಕಪ್: ಭಾರತಕ್ಕೆ ಪಾಕಿಸ್ತಾನವೇ ಮೊದಲ ಎದುರಾಳಿ