ಕರ್ನಾಟಕ

karnataka

ETV Bharat / sports

ಬಾಲ್​ಗೆ ಲಾಲಾರಸ ಹಚ್ಚಲು ಹೋಗಿ ಐಸಿಸಿ ನಿಯಮ ಉಲ್ಲಂಘಿಸಿದ್ರಾ ಕೊಹ್ಲಿ!?

ಐಪಿಎಲ್ 2020 ಟೂರ್ನಿಯಲ್ಲಿ ಕೆಲವು ಆಟಗಾರರು ಚೆಂಡಿಗೆ ಉಗುಳು ಹಚ್ಚಿ ತಪ್ಪು ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಕೂಡ ಇಂಥದ್ದೇ ತಪ್ಪು ಮಾಡುತ್ತಿದ್ದರು.

Watch: Kohli inadvertently applies saliva on ball, realises immediately
ಬಾಲ್​ಗೆ ಉಗುಳು ಹಚ್ಚಲು ಮುಂದಾದ ವಿರಾಟ್

By

Published : Oct 6, 2020, 8:47 AM IST

Updated : Oct 6, 2020, 9:20 AM IST

ದುಬೈ: ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಐಸಿಸಿ ಕೊವೀಡ್​ -19 ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದರು.

ಐಪಿಎಲ್ 2020 ಟೂರ್ನಿಯಲ್ಲಿ ಕೆಲವು ಆಟಗಾರರು ಚೆಂಡಿಗೆ ಉಗುಳು ಹಚ್ಚಿ ತಪ್ಪು ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಕೂಡ ಇಂಥದ್ದೇ ತಪ್ಪು ಮಾಡುತ್ತಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಎಚ್ಚೆತ್ತುಕೊಂಡರು. ಕೊಹ್ಲಿ ಅವರ ಈ ನಡೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಂದ್ಯದಲ್ಲಿ ಕವರ್ಸ್‌ ವಿಭಾಗದಲ್ಲಿ ಫೀಲ್ಡ್‌ ಮಾಡುತ್ತಿದ್ದ ವಿರಾಟ್‌ ಕೊಹ್ಲಿ, ಡೆಲ್ಲಿ ತಂಡದ ಪೃಥ್ವಿ ಶಾ ಹೊಡೆದ ಬಲವಾದ ಕವರ್‌ ಡ್ರೈವ್‌ ಹೊಡೆತವನ್ನು ಅದ್ಭುತ ರೀತಿಯಲ್ಲಿ ತಡೆದು ನಿಲ್ಲಿಸಿದ ಕೂಡಲೇ ಚೆಂಡಿಗೆ ಉಗುಳು ಹಚ್ಚಲು ಮುಂದಾಗಿದ್ದರು. ಉಗುಳು ಹಚ್ಚುವುದು ನಿಷೇಧಿಸಿರುವುದನ್ನು ಕೂಡಲೇ ಅರಿತು ಮುಗುಳುನಗೆ ಬೀರಿ ತಾವು ಹಚ್ಚಿಲ್ಲ ಎಂಬಂತೆ ಪ್ರತಿಕ್ರಿಯೆ ನೀಡಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಚಿನ್‌ ತೆಂಡೂಲ್ಕರ್​, "ಪೃಥ್ವಿ ಶಾ ಅದ್ಭುತ ಹೊಡೆತ ಹೊಡೆದರು. ಇನ್ನು ಸ್ವಲ್ಪದರಲ್ಲೇ ಚೆಂಡಿಗೆ ಉಗುಳು ಹಚ್ಚುವುದರಿಂದ ತಪ್ಪಿಸಿಕೊಂಡ ಕೊಹ್ಲಿ, ಮಿಲಿಯನ್‌ ಡಾಲರ್‌ ನಗೆ ಬೀರಿದರು. ಕೆಲವೊಮ್ಮೆ ಆಟಗಾರರು ಮೈ ಮರೆತು ತಮ್ಮ ಎಂದಿನ ಹವ್ಯಾಸಕ್ಕೆ ಮುಂದಾಗುವುದು ಸಹಜ," ಎಂದು ಸಚಿನ್‌ ಟ್ವೀಟ್‌ ಮಾಡಿದ್ದಾರೆ.

ಕಳೆದ ವಾರ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ‌ ರಾಯಲ್ಸ್‌ ತಂಡದ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಚೆಂಡಿಗೆ ಉಗುಳು ಹಚ್ಚಿದ್ದರು. ಇದೇ ವರ್ಷ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಚೆಂಡಿಗೆ ಉಗುಳು ಬಳಕೆಯನ್ನು ನಿಷೇಧ ಮಾಡಿದೆ.

Last Updated : Oct 6, 2020, 9:20 AM IST

ABOUT THE AUTHOR

...view details