ನವದೆಹಲಿ :ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಸೇರಿರುವುದು ಪ್ರಶಸ್ತಿ ಎತ್ತಿ ಹಿಡಿಯುವ ತಂಡದ ಕನಸನ್ನು ಹೆಚ್ಚಿಸಿದೆ.
31 ವರ್ಷದ ಆಸೀಸ್ ಸ್ಟಾರ್ ಬ್ಯಾಟ್ಸ್ಮನ್ರನ್ನು ರಾಜಸ್ಥಾನ್ ರಾಯಲ್ಸ್ ಈ ಬಾರಿ ಹರಾಜಿಗೂ ಮುನ್ನ ಬಿಡುಗಡೆ ಮಾಡಿತ್ತು. ನಂತರ ಫೆಬ್ರವರಿ 19ರಂದು ನಡೆದ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2.2 ಕೋಟಿ ರೂ.ಗೆ ಖರೀದಿಸಿತ್ತು.
"ಈ ವರ್ಷ ಡೆಲ್ಲಿ ತಂಡ ಸೇರುವುದಕ್ಕೆ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ತಂಡ ಉತ್ತಮ ಆಟಗಾರರನ್ನು ಹೊಂದಿದೆ ಮತ್ತು ಉತ್ತಮ ಕೋಚ್ಗಳನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಆ ತಂಡಕ್ಕೆ ಸೇರಿ ಕೆಲವು ಅದ್ಭುತ ನೆನಪುಗಳನ್ನು ಸೃಷ್ಟಿಸಲು ನಾನು ಎದುರು ನೋಡುತ್ತಿದ್ದೇನೆ. ಆಶಾದಾಯಕವಾಗಿ, ಕಳೆದ ವರ್ಷಕ್ಕಿಂತ ತಂಡ ಉತ್ತಮ ಪ್ರದರ್ಶನ ತೋರಲು ನೆರವಾಗಲು ಸಹಾಯ ಮಾಡಲು ಬಯಸುತ್ತೇನೆ" ಎಂದು ಸ್ಮಿತ್ ಹೇಳಿದ್ದಾರೆ.