ಪಲ್ಲೆಕೆಲೆ(ಶ್ರೀಲಂಕಾ):ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ಕೈವಶ ಮಾಡಿಕೊಂಡಿರುವ ಭಾರತದ ಮಹಿಳಾ ತಂಡ ಏಕದಿನ ಸರಣಿಯಲ್ಲೂ ಪಾರಮ್ಯ ಮುಂದುವರೆಸಿದೆ. ಪಲ್ಲೆಕೆಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಬಳಗ 4 ವಿಕೆಟ್ಗಳ ಅಂತರದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಮುಂದಾದ ಶ್ರೀಲಂಕಾ ತಂಡ ಭಾರತೀಯ ಬೌಲರ್ಗಳ ಮುಂದೆ ಮಂಡಿಯೂರಿತು. ಹೀಗಾಗಿ 48.2 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 171ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಪೆರೆರಾ(37), ಮಾದ್ವಿ(28) ಹಾಗೂ ಸಿಲ್ವಾ(43)ರನ್ಗಳಿಸಿದರು.
ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರಿಂಕು ಸಿಂಗ್, ದೀಪ್ತಿ ಶರ್ಮಾ ತಲಾ 3 ವಿಕೆಟ್ ಪಡೆದುಕೊಂಡರೆ, ಗಾಯಕ್ವಾಡ್, ಹರ್ಮನ್ಪ್ರೀತ್ ತಲಾ 1 ವಿಕೆಟ್ ಹಾಗೂ ಪೂಜಾ ವಸ್ತ್ರಕರ್ 2 ವಿಕೆಟ್ ಕಿತ್ತರು.