ಗಾಲೆ(ಶ್ರೀಲಂಕಾ): ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ 39 ರನ್ ಹಾಗೂ ಇನ್ನಿಂಗ್ಸ್ ಜಯ ಸಾಧಿಸಿದೆ. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿ 1-1 ಅಂತರದಲ್ಲಿ ಡ್ರಾಗೊಂಡು, ಮುಕ್ತಾಯವಾಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಿದ ಲಂಕಾ ಪಡೆ ಎದುರಾಳಿ ತಂಡದ ಮೇಲೆ ಸವಾರಿ ನಡೆಸಿತು.
ಶ್ರೀಲಂಕಾದ ಗಾಲೆ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ, ಮೊದಲ ಇನ್ನಿಂಗ್ಸ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 364 ರನ್ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಶ್ರೀಲಂಕಾ ತಂಡ ಚಂಡಿಮಾಲ್(206ರನ್) ಅಜೇಯ ರನ್ಗಳ ನೆರವಿನಿಂದ 10 ವಿಕೆಟ್ ಕಳೆದುಕೊಂಡು 554ರನ್ಗಳಿಕೆ ಮಾಡುವ ಮೂಲಕ 190ರನ್ಗಳ ಮುನ್ನಡೆ ಕಾಯ್ದುಕೊಂಡಿದೆ. ಈ ಟೆಸ್ಟ್ ಪಂದ್ಯದಲ್ಲಿ ಚಾಂಡಿಮಾನ್ ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ದ್ವಿಶತಕ ಸಾಧನೆ ಮಾಡಿದ್ದು, ಉಳಿದಂತೆ ಕರುಣರತ್ನೆ(86), ಕುಸಾಲ್ ಮೆಂಡಿಸ್(85), ಮ್ಯಾಥ್ಯೂಸ್(52) ಹಾಗೂ ಮೆಂಡಿಸ್(61)ರನ್ಗಳಿಕೆ ಮಾಡಿದರು.
190ರನ್ಗಳ ಹಿನ್ನಡೆ ಜೊತೆ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಬೌಲರ್ಗಳ ಎದುರು ಸಂಪೂರ್ಣವಾಗಿ ಮಂಡಿಯೂರಿದರು. 41 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 151ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಇನ್ನಿಂಗ್ಸ್ ಸೋಲು ಕಂಡಿದೆ.
ಇದನ್ನೂ ಓದಿರಿ:SL vs AUS 2nd Test: 1992ರ ಬಳಿಕ ಮೊದಲ ಸಲ ಆಸ್ಟ್ರೇಲಿಯಾ ವಿರುದ್ಧ 500+ ರನ್ಗಳಿಸಿದ ಲಂಕಾ