ಕರ್ನಾಟಕ

karnataka

ETV Bharat / sports

198 ರನ್​ಗಳ ಬೃಹತ್​ ಅಂತರದಿಂದ ಕಿವೀಸ್​ ಬಗ್ಗುಬಡಿದ ಹರಿಣ ಪಡೆ: ಸರಣಿ ಸಮಬಲ - ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್

ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್​ ಹಾಗೂ 276 ರನ್​ಗಳ ಹೀನಾಯ ಸೋಲು ಕಂಡಿದ್ದ ದಕ್ಷಿಣ ಆಫ್ರಿಕಾ ತಂಡ 2ನೇ ಟೆಸ್ಟ್​ನಲ್ಲಿ ಅದ್ಭುತವಾಗಿ ತಿರುಗಿಬಿದ್ದು, ಸಂಘಟಿತ ಪ್ರದರ್ಶನ ತೋರಿ ಜಯ ಸಾಧಿಸಿದೆ.

South Africa beats New Zealand by 198 runs, splits series
198 ರನ್​ಗಳ ಬೃಹತ್​ ಅಂತರದಿಂದ ಕಿವೀಸ್​ ಬಗ್ಗುಬಡಿದ ಹರಿಣ ಪಡೆ

By

Published : Mar 1, 2022, 9:33 PM IST

ಕ್ರೈಸ್ಟ್​ಚರ್ಚ್​: ಹಾಲಿ ವಿಶ್ವ ಟೆಸ್ಟ್​ ಚಾಂಪಿಯನ್ ನ್ಯೂಜಿಲ್ಯಾಂಡ್​ ತಂಡವನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 198ರನ್​ಗಳಿಂದ ಮಣಿಸುವ ಮೂಲಕ 2 ಪಂದ್ಯಗಳ ಟೆಸ್ಟ್​ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.

ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್​ ಹಾಗೂ 276 ರನ್​ಗಳ ಹೀನಾಯ ಸೋಲು ಕಂಡಿದ್ದ ದಕ್ಷಿಣ ಆಫ್ರಿಕಾ ತಂಡ 2ನೇ ಟೆಸ್ಟ್​ನಲ್ಲಿ ಅದ್ಭುತವಾಗಿ ತಿರುಗಿಬಿದ್ದು, ಸಂಘಟಿತ ಪ್ರದರ್ಶನ ತೋರಿ ಜಯ ಸಾಧಿಸಿದೆ.

2ನೇ ಟೆಸ್ಟ್​ ಟೆಸ್ಟ್​ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ದಕ್ಷಿಣ ಆಫ್ರಿಕಾ ಅತಿಥೇಯ ತಂಡದೆದುರು 4ನೇ ದಿನವೇ ಗೆಲುವನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. ಬರೋಬ್ಬರಿ 426 ರನ್​ಗಳ ಟಾರ್ಗೆಟ್​ ನೀಡಿದ್ದ ಎಲ್ಗರ್ ಬಳಗ 4ನೇ ದಿನವೇ ಎದುರಾಳಿಯ 4 ವಿಕೆಟ್​ ಪಡೆದು ಗೆಲುವಿನ ಸನಿಹ ಬಂದಿತ್ತು.

5ನೇ ದಿನ 94 ರನ್​ಗಳೊಂದಿಗೆ ಇನ್ನಿಂಗ್ಸ್​ ಆರಂಭಿಸಿದ್ದ ಕಿವೀಸ್​ ಆಫ್ರಿಕನ್ ಬೌಲರ್​ಗಳ ದಾಳಿಗೆ ಸಿಲುಕಿ 227 ರನ್​ಗಳಿಗೆ ಸರ್ವಪತನ ಕಂಡಿತು. 92 ರನ್​ಗಳಿಸಿದ ಡಿವೋನ್ ಕಾನ್ವೆ ಸೋಲು ತಪ್ಪಿಸಲು ಹರಸಾಹಸ ಪಟ್ಟರಾದರೂ ಸಾಧ್ಯವಾಗಲಿಲ್ಲ. ಇವರನ್ನು ಹೊರತುಪಡಿಸಿದರೆ ವಿಕೆಟ್ ಕೀಪರ್ 44 ರನ್​ಗಳಿಸಿ 2ನೇ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ ಪಡೆದಿದ್ದ ರಬಾಡ ಮತ್ತೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್​ ನೀಡಿದ ಮಾರ್ಕೊ ಜಾನ್ಸನ್​ 3 ವಿಕೆಟ್ ಮತ್ತು ಕೇಶವ್ ಮಹಾರಾಜ್ 3 ವಿಕೆಟ್​ ಪಡೆದರು. ಜಾನ್ಸನ್ ಮೊದಲ ಇನ್ನಿಂಗ್ಸ್​ನಲ್ಲೂ 4 ವಿಕೆಟ್ ಪಡೆದಿದ್ದರು.

ಮೊದಲ ಇನ್ನಿಂಗ್ಸ್​ನಲ್ಲಿ ದಕ್ಷಿಣ ಆಫ್ರಿಕಾ ಸರೆಲ್ ಇರ್ನಿನ್(108) ಶತಕದ ನೆರವಿನಿಂದ 364 ರನ್​ಗಳಿಸಿದರೆ, ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್​ 296ರನ್​ಗಳಿಸಿತ್ತು. ಕಾಲಿನ್​ ಡಿ ಗ್ರ್ಯಾಂಡ್​​ಹೋಮ್ 120 ರನ್​ಗಳಿಸಿದ್ದರು. 68 ರನ್​ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ದ. ಆಫ್ರಿಕಾ 2ನೇ ಇನ್ನಿಂಗ್ಸ್​ನಲ್ಲಿ ಕೈಲ್ ವೆರೆನ್ನೆ ಅವರ ಅಜೇಯ 136 ರನ್​ಗಳೊಂದಿಗೆ 354-9 ರನ್​ಗಳಿಸಿ ಡಿಕ್ಲೇರ್ ಘೋಷಿಸಿಕೊಂಡು ಕಿವೀಸ್​ಗೆ 426 ರನ್​ಗಳ ಬೃಹತ್​ ಗುರಿ ನೀಡಿತ್ತು.

ಇದನ್ನೂ ಓದಿ:ಗಲ್ಲಿ ಕ್ರಿಕೆಟ್​ to ರಣಜಿ ಟ್ರೋಫಿ.. ಗುಡಿಸಲಿನಲ್ಲಿ ಬೆಳೆದ ಹುಡುಗನ ಅದ್ಭುತ ಕ್ರಿಕೆಟ್​ ಪಯಣ

ABOUT THE AUTHOR

...view details