ಹೈದರಾಬಾದ್(ಡೆಸ್ಕ್) :ನಾಯಕತ್ವ ಬಯಸಿ ಡೆಲ್ಲಿ ಕ್ಯಾಪಿಟಲ್ಸ್ನಿಂದ ಹೊರ ಬಂದಿರುವ ಭಾರತ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಮುಂಬರುವ ಮೆಗಾ ಹರಾಜಿನಲ್ಲಿ ದುಬಾರಿ ಆಟಗಾರನಾಗಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಇವರನ್ನು 2022ರ ಐಪಿಎಲ್ಗೆ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್,ಪ್ಯಾಟ್ ಕಮಿನ್ಸ್, ಕ್ವಿಂಟನ್ ಡಿಕಾಕ್, ಶಿಖರ್ ಧವನ್, ಫಾಫ್ ಡು ಪ್ಲೆಸಿಸ್, ಶ್ರೇಯಸ್ ಅಯ್ಯರ್, ಕಗಿಸೊ ರಬಾಡ ಮತ್ತು ಡೇವಿಡ್ ವಾರ್ನರ್ 2022ರ ಐಪಿಎಲ್ ಮೆಗಾ ಆ್ಯಕ್ಷನ್ನಲ್ಲಿ ಮಾರ್ಕ್ಯೂ ಆಟಗಾರರ ಪಟ್ಟಿಯಲ್ಲಿದ್ದಾರೆ.
ಭುಜದ ನೋವಿನ ಕಾರಣ 2021ರ ಮೊದಲಾರ್ಧದ ಐಪಿಎಲ್ ತಪ್ಪಿಸಿಸಕೊಂಡಿದ್ದ ಶ್ರೇಯಸ್ ಬದಲಿಗೆ ಪಂತ್ರನ್ನು ನಾಯಕನನ್ನಾಗಿ ಡೆಲ್ಲಿ ತಂಡ ನೇಮಿಸಿತ್ತು. ದ್ವಿತೀಯಾರ್ಧದಲ್ಲಿ ಅಯ್ಯರ್ ತಂಡಕ್ಕೆ ವಾಪಸಾದ ಬಳಿಕವೂ ಫ್ರಾಂಚೈಸಿ ಪಂತ್ ಅವರನ್ನೇ ನಾಯಕನನ್ನಾಗಿ ಮುಂದುವರಿಸಿತ್ತು.
ಇದೀಗ ಅಯ್ಯರ್ ಡೆಲ್ಲಿ ತಂಡದಿಂದ ಹೊರ ಬಂದಿರುವುದರಿಂದ ಅಕಾಶ್ ಚೋಪ್ರಾ ನಾಯಕತ್ವಕ್ಕಾಗಿ ಹುಡುಕುತ್ತಿರುವ ತಂಡಗಳಿಗೆ ಅಯ್ಯರ್ ಅತ್ಯುತ್ತಮ ಆಯ್ಕೆ ಎಂದಿದ್ದಾರೆ.