ಮುಂಬೈ: ಭಾರತ ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್, ಸ್ಪಿನ್ನರ್ ಯುಜ್ವೇಂದ್ರ ಚಹಲ್, ಕೀಪರ್ ಇಶಾನ್ ಕಿಶನ್ ಹಾಗೂ ಡೇವಿಡ್ ವಾರ್ನರ್ ಮುಂಬರುವ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೊತ್ತ ಪಡೆಯುವ ನಿರೀಕ್ಷೆಯಿದೆ.
ಭಾರತ ಸೇರಿದಂತೆ 19 ರಾಷ್ಟ್ರಗಳ 1214 ಕ್ರಿಕೆಟಿಗರು 2022ರ ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 896 ಭಾರತೀಯ ಆಟಗಾರರಿದ್ದರೆ 318 ವಿದೇಶ ಆಟಗಾರರಿದ್ದಾರೆ. ಈಗಾಗಲೆ ಎಲ್ಲಾ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರಿಟೈನ್ ಮಾಡಿಕೊಂಡಿದ್ದು, ಉಳಿದ ಆಟಗಾರರನ್ನು ಫೆಬ್ರವರಿ 11 ಮ್ತು 12ರಂದು ಬೆಂಗಳೂರಿನಲ್ಲಿ ನಡಯುವ ಮೆಗಾ ಹರಾಜಿನಲ್ಲಿ ಖರೀದಿಸಲು ಎದುರು ನೋಡುತ್ತಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಭಾರತದ ಶ್ರೇಯಸ್ ಅಯ್ಯರ್ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಾಯಕತ್ವ ಪಡೆಯುವ ಆಟಗಾರರಾಗಿದ್ದು, ಕೆಕೆಆರ್,ಆರ್ಸಿಬಿ ಮತ್ತು ಪಂಜಾಬ್ ತಂಡಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಇವರ ಜೊತೆಗೆ ಇಶಾನ್ ಕಿಶನ್, ಯುಜ್ವೇಂದ್ರ ಚಹಲ್ ಶಿಖರ್ ಧವನ್, ಶಾರ್ದೂಲ್ ಠಾಕೂರ್ ಮತ್ತು ದೀಪಕ್ ಚಹರ್ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.