ಲಾಹೋರ್: ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ತಾಯಿ ಶನಿವಾರ ಮೃತಪಟ್ಟಿದ್ದಾರೆಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರಿದಂತೆ ಕ್ರಿಕೆಟ್ ಬಳಗ ಪಾಕ್ ವೇಗಿ ಕುಟಂಬಕ್ಕೆ ಸಂತಾಪ ಸೂಚಿಸಿದೆ.
ವಿಶ್ವ ಕ್ರಿಕೆಟ್ನ ಅಗ್ರ ವೇಗಿಗಳಲ್ಲಿ ಒಬ್ಬರಾದ ಅಖ್ತರ್ ''ನನಗೆ ಎಲ್ಲವೂ ಆಗಿದ್ದ ನಮ್ಮ ತಾಯಿ ಅಲ್ಲಾನ ಇಚ್ಛೆಯೊಂದಿಗೆ ಸ್ವರ್ಗದ ವಾಸಕ್ಕೆ ತೆರಳಿದ್ದಾರೆ. ಅಂತಿಮ ಸಂಸ್ಕಾರ ಇಸ್ಲಾಮಬಾದ್ನಲ್ಲಿ ನಡೆಯಲಿದೆ'' ಎಂದು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಟ್ವಿಟರ್ನಲ್ಲಿ ಅಖ್ತರ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ."ಈ ಕಷ್ಟದ ಸಂದರ್ಭದಲ್ಲಿ ನಿಮಗೆ ನನ್ನ ಸಂತಾಪ ನಿಮ್ಮ ಜೊತೆಯಲ್ಲಿರಲಿದೆ ಎಂದು ತಿಳಿಸಲು ಬಯಸುತ್ತೇನೆ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ಈ ಸಂದರ್ಭದಲ್ಲಿ ಬಲಿಷ್ಠನಾಗಿರು ಸಹೋದರ'' ಎಂದು ಅಖ್ತರ್ ಟ್ವೀಟ್ಗೆ ಪ್ರತಿಕ್ರಿಯಿಸಿ ಸಂತಾಪ ಸೂಚಿಸಿದ್ದಾರೆ.
ಶೋಯಬ್ ಮಲಿಕ್, ಶಾಹೀದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಅಖ್ತರ್ ತಾಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಭಾರತ ವಿರುದ್ಧದ ಪಂದ್ಯದ ಹಿಂದಿನ ರಾತ್ರಿ ನಮಗೆ ನಿದ್ರೆ ಬರುತ್ತಿರಲಿಲ್ಲ: ಶಾಹೀದ್ ಅಫ್ರಿದಿ