ಮೆಲ್ಬೋರ್ನ್:ಸ್ಪಿನ್ ಮಾಂತ್ರಿಕ ದಿವಂಗತ ಶೇನ್ ವಾರ್ನ್ ಅಗಲಿರುವುದು ಅಭಿಮಾನಿಗಳಲ್ಲಿ ದುಃಖಕ್ಕೆ ಕಾರಣವಾಗಿದೆ. ಇಂದು ಅವರು ಬದುಕಿದ್ದರೆ 53 ನೇ ಜನ್ಮದಿನದ ಸಂಭ್ರಮದಲ್ಲಿ ತೇಲುತ್ತಿದ್ದರು. ವಾರ್ನ್ ಬಿಟ್ಟು ಹೋದ ನೀರವತೆಯಲ್ಲಿ ಅಭಿಮಾನಿಗಳು ಅವರಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ಶೇನ್ ವಾರ್ನ್ ಇಹಲೋಕ ತ್ಯಜಿಸಿ 6 ತಿಂಗಳು ಕಳೆದಿದೆ. ಇಂದು ಅವರ ಜನ್ಮದಿನವಾಗಿದೆ. ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಅವರು ಎಂದಿಗೂ ಜೀವಂತ. ಆಸ್ಟ್ರೇಲಿಯಾ ಕ್ರಿಕೆಟ್ನ ದಂತಕಥೆ ವಾರ್ನ್ ಯುವಪೀಳಿಗೆಗೆ ಮಾದರಿಯಾಗಿದ್ದಾರೆ.
53ನೇ ಹುಟ್ಟುಹಬ್ಬದ ಕಾರಣ ಶೇನ್ ವಾರ್ನ್ ಅವರ ಟ್ವಿಟರ್ ಖಾತೆಯಲ್ಲಿ ಜನ್ಮದಿನದ ಶುಭ ಕೋರಿ ಪೋಸ್ಟ್ ಮಾಡಲಾಗಿದೆ. ಪರಂಪರೆಯು ನಿಮ್ಮನ್ನು ಎಂದಿಗೂ ನೆನಪಿಟ್ಟುಕೊಂಡಿರುತ್ತದೆ. ನಿಮ್ಮ ಬಗ್ಗೆ ಬೇರೆಯದೇ ದೃಷ್ಟಿಕೋನವಿದೆ. ಇದು ವ್ಯಕ್ತಿಯ ಜೀವನ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ. ಆತ ಏನು ಸಾಧಿಸಿದ್ದಾರೆ. ಜನರ ಮೇಲೆ ಬೀರಿದ ಪ್ರಭಾವ ಏನೆಂಬುದನ್ನು ಅದು ಪ್ರತಿನಿಧಿಸುತ್ತದೆ. ಶೇನ್ಸ್ ಪರಂಪರೆ ಎಂದಿಗೂ ಜೀವಂತ. ಜನ್ಮದಿನದ ಶುಭಾಶಯಗಳು, ನೀವು ಯಾವಾಗಲೂ ನಮ್ಮ ಹೃದಯದಲ್ಲಿರುತ್ತೀರಿ ಎಂದು ಟ್ವೀಟ್ ಮಾಡಲಾಗಿದೆ.
ಗಮನ ಸೆಳೆಯುತ್ತಿರುವ ಈ ಪೋಸ್ಟ್ ಬಳಿಕ ಸ್ಪಿನ್ ಮಾಂತ್ರಿಕನಿಗೆ ಅಭಿಮಾನಿಗಳು ಮತ್ತು ಹಿತೈಷಿಗಳು ಗೌರವ ಸಲ್ಲಿಸುತ್ತಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ವಾರ್ನ್ ಥಾಯ್ಲೆಂಡ್ನಲ್ಲಿ ಹೃದಯ ಸ್ತಂಭನದಿಂದ 6 ತಿಂಗಳ ಹಿಂದೆ ಮೃತಪಟ್ಟಿದ್ದರು.
ಓದಿ:ಏಷ್ಯಾ ಕಪ್ ದೊರೆಗಳ ಅದ್ಧೂರಿ ಮೆರವಣಿಗೆ.. ತಾಯ್ನಾಡಲ್ಲಿ ಅಭೂತಪೂರ್ವ ಸ್ವಾಗತ