ಕರ್ನಾಟಕ

karnataka

ETV Bharat / sports

ಫ್ರಾಂಚೈಸಿ ನನ್ನ ಮೇಲೆ ನಂಬಿಕೆಯಟ್ಟರೆ ಐಪಿಎಲ್​ನಲ್ಲೂ ರನ್​ ಮಳೆ ಸುರಿಸುವೆ: ಸರ್ಫರಾಜ್ ಖಾನ್

2014 ಮತ್ತು 2016ರ ಅಂಡರ್​ 19 ವಿಶ್ವಕಪ್​ನಲ್ಲಿ ರಾರಾಜಿಸಿದ ಸರ್ಫರಾಜ್​ ಖಾನ್​ ಆರ್​ಸಿಬಿ ಮೂಲಕ ಐಪಿಎಲ್ ಪಯಣ ಆರಂಭಿಸಿದರು. ಆದರೆ ಅವರಿಗೆ ಲೀಗ್​ನಲ್ಲಿ ಯಶಸ್ಸು ಸಿಗಲಿಲ್ಲ. ಇದೀಗ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ 20 ಲಕ್ಷ ಮೂಲಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿರುವ ಅವರು ಫ್ರಾಂಚೈಸಿ ನನ್ನ ಮೇಲೆ ನಂಬಿಕೆಯಿಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Sarfaraz Khan Request  Delhi Capitals to show faith in him in IPL 2022
ಸರ್ಫರಾಜ್ ಖಾನ್

By

Published : Mar 13, 2022, 6:06 PM IST

ಮುಂಬೈ: ಪ್ರಸ್ತುತ ಚಾಲ್ತಿಯಲ್ಲಿರುವ ರಣಜಿ ಟ್ರೋಫಿಯಲ್ಲಿ 2ನೇ ಗರಿಷ್ಠ ಸ್ಕೋರರ್​ ಆಗಿರುವ ಮುಂಬೈ ತಂಡದ ಯುವ ಬ್ಯಾಟರ್​ ಸರ್ಫರಾಜ್​ ಖಾನ್​ ತಮ್ಮ ಮೇಲೆ ಡೆಲ್ಲಿ ಕ್ಯಾಪಿಟಲ್ಸ್​ ನಂಬಿಕೆಯಿಟ್ಟರೆ ನಾನು ಐಪಿಎಲ್​ನಲ್ಲೂ ರನ್​ಗಳಿಸಬಲ್ಲೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2014 ಮತ್ತು 2016ರ ಅಂಡರ್​ 19 ವಿಶ್ವಕಪ್​ನಲ್ಲಿ ರಾರಾಜಿಸಿದ ಸರ್ಫರಾಜ್​ ಖಾನ್​ ಆರ್​ಸಿಬಿ ಮೂಲಕ ಐಪಿಎಲ್ ಪಯಣ ಆರಂಭಿಸಿದರು. ಆದರೆ ಅವರಿಗೆ ಲೀಗ್​ನಲ್ಲಿ ಯಶಸ್ಸು ಸಿಗಲಿಲ್ಲ. ಇದೀಗ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ 20 ಲಕ್ಷ ಮೂಲಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿರುವ ಅವರು ಫ್ರಾಂಚೈಸಿ ನನ್ನ ಮೇಲೆ ನಂಬಿಕೆ ಇಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಯಾರಾದರೂ ನನಗೆ ವಿಶ್ವಾಸವನ್ನು ನೀಡಿದರೆ ಮತ್ತು ನನ್ನಲ್ಲಿ ನಂಬಿಕೆಯನ್ನಿಟ್ಟರೆ ನಾನು ಐಪಿಎಲ್​ನಲ್ಲೂ ಉತ್ತಮವಾಗಿ ಮಾಡಬಹುದು. ಮೊದಲು ನಾನು ರೆಡ್​ ಬಾಲ್​ ಕ್ರಿಕೆಟ್​ನಲ್ಲಿ ಆಡುತ್ತೇನೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ನನಗೆ ಅವಕಾಶ ಸಿಕ್ಕರೆ ನಾನು ಉತ್ತಮ ಪ್ರದರ್ಶನ ನೀಡಬಲ್ಲೆ ಎಂದು ನನಗೆ ತಿಳಿದಿತ್ತು, ಏಕೆಂದರೆ ನಾನು ಪ್ರಥಮ ದರ್ಜೆ ಕ್ರಿಕೆಟ್​ಗಾಗಿ ನಾಲ್ಕೈದು ವರ್ಷಗಳಿಂದ ಸಾಕಷ್ಟು ಶ್ರಮಿಸಿದ್ದೆ. ಅದೇ ರೀತಿ, ನನಗೆ ಐಪಿಎಲ್‌ನಲ್ಲೂ ರನ್​ಗಳಿಸುವ ದಿನಗಳು ಬಂದೇ ಬರುತ್ತದೆ ಎಂದು ಸರ್ಫರಾಜ್ ಖಾನ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸರ್ಫರಾಜ್ ಖಾನ್ ಐಪಿಎಲ್​ನಲ್ಲಿ 2015ರಿಂದ 2018 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು 2019ರಿಂದ 2021ರವರೆಗೆ ಪಂಜಾಬ್ ಕಿಂಗ್ಸ್​ ತಂಡದಲ್ಲಿ ಆಡಿದ್ದರು. ಒಟ್ಟು 40 ಪಂದ್ಯಗಳನ್ನಾಡಿರುವ ಅವರು 28 ಇನ್ನಿಂಗ್ಸ್​ಗಳಿಂದ ಏಕೈಕ ಅರ್ಧಶತಕ ಸೇರಿದಂತೆ 441 ರನ್​ಗಳಿಸಿದ್ದಾರೆ.

2021-22ರ ರಣಜಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಆಡಿರುವ 3 ಪಂದ್ಯಗಳಲ್ಲಿ 4 ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿ 2 ಶತಕಗಳ ಸಹಿತ 551 ರನ್​ಗಳಿಸಿದ್ದಾರೆ. ಒಟ್ಟಾರೆ ಕಳೆದ 12 ಇನ್ನಿಂಗ್ಸ್​ಗಳಲ್ಲಿ ಅವರು 165,48, 63,275, 6,177,78, 25,226,301,36 ಮತ್ತು 71 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಆರ್​ಸಿಬಿಗೆ ನೂತನ ಸಾರಥಿ.. ಫಾಫ್​ ಡು ಪ್ಲೆಸಿಸ್​ರನ್ನು ನಾಯಕನಾಗಿ ಘೋಷಿಸಿದ ರಾಯಲ್​ ಚಾಲೆಂಜರ್ಸ್​

ABOUT THE AUTHOR

...view details