ಕರ್ನಾಟಕ

karnataka

ETV Bharat / sports

Sachin Tendulkar: ಮಾಸ್ಟ್​ ಬ್ಲಾಸ್ಟರ್​ಗೆ ಕೀನ್ಯಾದಲ್ಲಿ ಗಾರ್ಡ್ ಆಫ್ ಹಾನರ್ ಗೌರವ.. ಲಂಡನ್​ನಲ್ಲಿ ಅಗರ್ಕರ್​, ಯುವಿ ಜೊತೆ ಔತಣ ಕೂಟ

Sachin Tendulkar Receives Guard of Honor: ಇತ್ತೀಚೆಗೆ ಕೀನ್ಯಾ ಪ್ರವಾಸ ಮಾಡಿದ್ದ ಸಚಿನ್​ ತೆಂಡೂಲ್ಕರ್​ಗೆ ಮಸಾಯಿ ಮಾರಾದಲ್ಲಿ ಗಾರ್ಡ್ ಆಫ್ ಆನರ್ ಗೌರವ ನೀಡಲಾಯಿತು.

Sachin Tendulkar
Sachin Tendulkar

By

Published : Jul 5, 2023, 5:49 PM IST

ಸಚಿನ್ ತೆಂಡೂಲ್ಕರ್ ಅವರು ತಮ್ಮ ಕುಟುಂಬದೊಂದಿಗೆ ಸದ್ಯ ಲಂಡನ್‌ನಲ್ಲಿ ಕೆಲ ದಿನಗಳನ್ನು ಕಳೆಯುತ್ತಿದ್ದಾರೆ. ಅವರ ಜೊತೆಗೆ ಇಬ್ಬರು ಪ್ರಸಿದ್ಧ ಮಾಜಿ ಭಾರತ ತಂಡದ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಅಜಿತ್ ಅಗರ್ಕರ್ ಸೇರಿಕೊಂಡರು. ಸಚಿನ್​ ಇಬ್ಬರು ಆಟಗಾರರು ಮತ್ತು ಅವರ ಕುಟುಂಬದೊಂದಿಗೆ ಕಳೆದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕಿದ್ದಾರೆ. ಇಬ್ಬರು ಆಟಗಾರರ ಜೊತೆ ಕುಳಿತು ಊಟವನ್ನು ಸವಿದಿರುವುದಾಗಿ ಸಚಿನ್​ ಪೋಸ್ಟ್​​ನಲ್ಲಿ ಸೇರಿಸಿದ್ದಾರೆ.

ಕೀನ್ಯಾ ಪ್ರವಾಸ ಮಾಡಿದ್ದ ಸಚಿನ್​ ತೆಂಡೂಲ್ಕರ್​ಗೆ ಮಸಾಯಿ ಮಾರಾದಲ್ಲಿ ಗಾರ್ಡ್ ಆಫ್ ಆನರ್ ಗೌರವ

ಯುವರಾಜ್ ಸಿಂಗ್ ಮತ್ತು ಅಜಿತ್ ಅಗರ್ಕರ್ ಜೊತೆಗಿನ ಫೋಟೋಕ್ಕೆ "ನಮ್ಮನ್ನು ಹತ್ತಿರ ಇರುವ ಎರಡು ವಿಷಯಗಳು ಸ್ನೇಹ ಮತ್ತು ಆಹಾರ. ಅದ್ಭುತವಾದ ಊಟಕ್ಕಾಗಿ ಈ ಗುಂಪನ್ನು ಭೇಟಿಯಾದೆ" ಎಂದು ಶೀರ್ಷಿಕೆ ನೀಡಿದ್ದಾರೆ. ವಿಶೇಷ ಎಂದರೆ ಈ ಚಿತ್ರಕ್ಕೆ ದಿಗ್ಗಜ ಆಟಗಾರ ಬ್ರಿಯಾನ್​ ಲಾರಾ ಕಮೆಂಟ್​ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಲಾರಾ ಅವರು ಕಮೆಂಟ್​ನಲ್ಲಿ "ಇದು ನನಗೆ ಕೇವಲ ಹಾಯ್ ಮತ್ತು ಬೈ ಹುಡುಗರೇ!! ನೀವು ಅದೃಷ್ಟವಂತರು!! ನನ್ನ ಗಾಲ್ಫಿಂಗ್ ಸ್ನೇಹಿತರು ಆನಂದಿಸುತ್ತಾರೆ !!" ಎಂದು ಬರೆದುಕೊಂಡಿದ್ದಾರೆ.

ಮಸಾಯಿ ಮಾರಾದಲ್ಲಿ ನೃತ್ಯ ಮಾಡುತ್ತಿರುವ ಸಚಿನ್​

ಇತ್ತೀಚೆಗೆ ತೆಂಡೂಲ್ಕರ್ ಮತ್ತು ಲಾರಾ ಲಂಡನ್​ನಲ್ಲಿ ಭೇಟಿಯಾಗಿದ್ದರು. ಇದು ಸಹ ಸಾಮಾಜಿಕ ಜಾಲತಾಣದಲ್ಲಿದೆ. ಇದನ್ನು ನೆನಪಿಸಿ ಲಾರಾ ಕಮೆಂಟ್​ ಮಾಡಿದ್ದಾರೆ. ನಾನು ಕೇವಲ ಮಾರ್ಗದಲ್ಲಿ ಹಾಯ್​ ಬಾಯ್​ ಮಾಡಲು, ಯುವರಾಜ್​ ಮತ್ತು ಅಗರ್ಕರ್​ ನೀವೇ ಪುಣ್ಯವಂತರು. ಆತನೊಂದಿಗೆ ಊಟ ಮಾಡುತ್ತಿದ್ದೀರಿ ಎಂದಿದ್ದಾರೆ.

ಸಚಿನ್​ಗೆ ಮಸಾಯಿ ಮಾರಾದಲ್ಲಿ ಗಾರ್ಡ್ ಆಫ್ ಆನರ್: ಭಾರತದ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಇತ್ತೀಚಿನ ಕೀನ್ಯಾ ಪ್ರವಾಸದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. 50 ವರ್ಷದ ತೆಂಡೂಲ್ಕರ್ ಅವರು ಕ್ರಿಕೆಟ್ ಆಟಗಾರರಾಗಿ ಮಾಡಿದ ಸಾಧನೆಗಳನ್ನು ಗುರುತಿಸಿ ಕೀನ್ಯಾದ ಮಸಾಯಿ ಮಾರಾದಲ್ಲಿ ಅವರಿಗೆ ವಿಶೇಷ ಗೌರವ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಿಗೆ ಮಸಾಯಿ ಮಾರಾ ಜನರು ಗಾರ್ಡ್ ಆಫ್ ಆನರ್ ನೀಡಿ ಗೌರವಿಸಿದ್ದಾರೆ. ನಂತರ ಸಚಿನ್​ ಅಲ್ಲಿಯ ಜನರ ಜೊತೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಇನ್ಸ್​ಸ್ಟಾ ಖಾತೆಯಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿರುವ ಮಾಸ್ಟರ್​ ಬ್ಲಾಸ್ಟರ್​ ವಾರದ ಹಿಂದಿನ ಪ್ರವಾಸದ ಕ್ಷಣಗಳನ್ನು ನೆನೆದಿದ್ದಾರೆ.

ಇತ್ತೀಚೆಗೆ ಸಚಿನ್​ ತೆಂಡೂಲ್ಕರ್​​ ಕೀನ್ಯಾದ ಮಸಾಯಿ ಮಾರಾದಲ್ಲಿ ತಮ್ಮ ಪತ್ನಿ ಮತ್ತು ಮಗಳೊಂದಿಗೆ ರಜೆಯನ್ನು ಕಳೆದಿದ್ದಾರೆ. ಅಲ್ಲಿ ಸಫಾರಿ ಮಾಡಿದ ಫೋಟೋಗಳನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜಿರಾಫೆಗಳು, ಆಸ್ಟ್ರಿಚ್‌ಗಳು ಮತ್ತು ಚಿರತೆ ಸಚಿನ್​ ಅವರಿಗೆ ಸಫಾರಿ ವೇಳೆ ಎದುರಾಗಿವೆ.

ಅಗರ್ಕರ್​ಗೆ ಆಯ್ಕೆಗಾರನ ಸ್ಥಾನ:ಮತ್ತೊಂದೆಡೆ, ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಅಗರ್ಕರ್​​ ಕೋಚ್ ಮತ್ತು ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಅವರಿಗೆ ಬಿಸಿಸಿಐ ಆಯ್ಕೆಗಾರರ ಮುಖ್ಯಸ್ಥರಾಗಿ ನೇಮಕ ಮಾಡಿದೆ. ಈ ಮೂಲಕ ಅರ್ಗಕರ್​ ಹೊಸ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ಸುಲಕ್ಷಣಾ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಈ ಸ್ಥಾನಕ್ಕೆ ಹಲವಾರು ಅರ್ಜಿಗಳನ್ನು ಪರಿಶೀಲಿಸಿದ ನಂತರ ಭಾರತದ ಮಾಜಿ ಆಲ್‌ರೌಂಡರ್ ಹೆಸರನ್ನು ಶಿಫಾರಸು ಮಾಡಿದೆ.

ಇದನ್ನೂ ಓದಿ:Men's Emerging Asia Cup 2023: ಯಶ್ ಧುಲ್ ನಾಯಕತ್ವದಲ್ಲಿ ಉದಯೋನ್ಮುಖ ಏಷ್ಯಾ ಕಪ್ ತಂಡ.. ಐಪಿಎಲ್ ಪ್ರತಿಭೆಗಳಿಗೆ ಮಣೆ​

ABOUT THE AUTHOR

...view details