ಕರ್ನಾಟಕ

karnataka

ETV Bharat / sports

ಪಂಜಾಬ್​ ವರ್ಸಸ್​ ಬೆಂಗಳೂರು: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಆರ್​​ಸಿಬಿ

ಇಂಡಿಯನ್​ ಪ್ರೀಮಿಯರ್ ಲೀಗ್​ನ 26ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​-ಕಿಂಗ್ಸ್ ಪಂಜಾಬ್ ಮುಖಾಮುಖಿಯಾಗಿದ್ದು, ನರೇಂದ್ರ ಮೋದಿ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.

Punjab vs Bangalore
Punjab vs Bangalore

By

Published : Apr 30, 2021, 7:20 PM IST

ಅಹಮದಾಬಾದ್​: ಇಂಡಿಯನ್​​ ಪ್ರೀಮಿಯರ್ ಲೀಗ್​ನ ಇಂದಿನ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು- ಕಿಂಗ್ಸ್ ಪಂಜಾಬ್​ ತಂಡ ಮುಖಾಮುಖಿಯಾಗಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಗೊಂಡಿದ್ದು, ಟಾಸ್​ ಗೆದ್ದ ಆರ್​ಸಿಬಿ ಬೌಲಿಂಗ್​​ ಆಯ್ದುಕೊಂಡಿದೆ.

ಆಡುವ 11 ಬಳಗ

ರಾಯಲ್​ ಚಾಲೆಂಜರ್ಸ್​ ಬೆಂಗಳೂರು:ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ದೇವದತ್ ಪಡಿಕ್ಕಲ್​, ರಜತ್​ ಪಟೀದಾರ್​, ಗ್ಲೇನ್​ ಮ್ಯಾಕ್ಸ್​ವೆಲ್​​, ಎಬಿ ಡಿವಿಲಿಯರ್ಸ್​​(ವಿ,ಕೀ), ಶಹ್ಬಾಜ್​​ ಅಹ್ಮದ್, ಡೇನಿಯಲ್​ ಸ್ಯಾಮ್ಸ್, ಕೈಲ್​ ಜೇಮಿಸನ್​, ಹರ್ಷಲ್ ಪಟೇಲ್​, ಮೊಹಮ್ಮದ್​ ಸಿರಾಜ್​, ಯಜುವೇಂದ್ರ ಚಹಲ್​

ಪಂಜಾಬ್​ ಕಿಂಗ್ಸ್​​:ಕೆ.ಎಲ್​ ರಾಹುಲ್​​(ಕ್ಯಾಪ್ಟನ್​, ವಿ,ಕೀ), ಕ್ರಿಸ್ ಗೇಲ್​, ದೀಪಕ್ ಹೂಡಾ, ನಿಕೂಲಸ್​ ಪೂರನ್​, ಪ್ರಭ್ಸಿಮ್ರಾನ್ ಸಿಂಗ್​, ಶಾರುಖ್​ ಖಾನ್​, ಕ್ರಿಸ್ ಜೋರ್ಡನ್, ಮೆರಿಡೆತ್​, ರವಿ ಬಿಷ್ಣೊಯ್​, ಮೊಹಮ್ಮದ್ ಶಮಿ, ಹರ್​ಪ್ರೀತ್​ ಬ್ರಾರ್​

ಇಂದಿನ ಪಂದ್ಯಕ್ಕಾಗಿ ಪಂಜಾಬ್ ತಂಡ ಪ್ರಮುಖ ಮೂರು ಬದಲಾವಣೆ ಮಾಡಿಕೊಂಡಿದೆ. ಹೆನ್ರಿಕೆನ್ಸ್​, ಅರ್ಷದೀಪ್​ ಹಾಗೂ ಮಯಾಂಕ್​ ಬದಲಿಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆರ್​ಸಿಬಿ ಸುಂದರ್​ ಸ್ಥಾನಕ್ಕೆ ಸಹ್ಬಾಜ್​ಗೆ ಅವಕಾಶ ನೀಡಿದೆ.

ಈ ಬಾರಿಯ ಐಪಿಎಲ್​ನಲ್ಲಿ ಸತತ 4 ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್​ನಲ್ಲಿರುವ ಆರ್​ಸಿಬಿ ತಂಡ ಆಡಿದ ಆರು ಪಂದ್ಯಗಳಲ್ಲಿ 5 ರಲ್ಲಿ ಗೆದ್ದು, ಒಂದರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಭಾರತದಲ್ಲಿ ಕೋವಿಡ್​ ಹೆಚ್ಚಾದ್ರೆ ವಿಶ್ವಕಪ್​ಗಾಗಿ ಪ್ಲಾನ್ 'ಬಿ'.. ಈ ದೇಶದಲ್ಲಿ ಟೂರ್ನಿ!?

ಇತ್ತ ಪಂಜಾಬ್​ ತಂಡ ಆಡಿದ ಆರು ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಗೆದ್ದು, ಗೆಲುವಿನ ಕಾತುರದಲ್ಲಿದೆ. ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಅನುಭವಿಸಿದ್ದ ಕೆ.ಎಲ್‌ ರಾಹುಲ್‌ ನೇತೃತ್ವದ ಪಂಜಾಬ್‌ ಕಿಂಗ್ಸ್ ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಉದ್ದೇಶದಿಂದ ಕಣಕ್ಕಿಳಿದಿವೆ.

ABOUT THE AUTHOR

...view details