ಕರ್ನಾಟಕ

karnataka

ETV Bharat / sports

ಡಿಆರ್​​ಎಸ್​ ಪಡೆಯದೆ ಎಡವಿದ ಡೆಲ್ಲಿ: ನಿರ್ಧಾರದ ಹಿಂದಿನ ಕಾರಣ ತಿಳಿಸಿದ ಪಂತ್ - ಮುಂಬೈ ಇಂಡಿಯನ್ಸ್

ಮುಂಬೈ ವಿರುದ್ಧದ ಪಂದ್ಯದ 15ನೇ ಓವರ್​ನಲ್ಲಿ ಡಿಆರ್​ಎಸ್​ ತೆದುಕೊಳ್ಳುವಲ್ಲಿ ಎಡವಿದ ಡೆಲ್ಲಿ ನಾಯಕ ರಿಷಭ್​ ಪಂತ್, ಪಂದ್ಯದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Rishabh Pant Reveals Why He Decided To Not Take DRS Against Tim David
ಡೆಲ್ಲಿ ಕ್ಯಾಪಿಟಲ್ಸ್‌

By

Published : May 22, 2022, 8:35 AM IST

ಮುಂಬೈ:ಐಪಿಎಲ್ 2022ರ ಪ್ಲೇ ಆಫ್‌ ಪ್ರವೇಶಕ್ಕೆ ಶನಿವಾರ ಮುಂಬೈ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್‌ ನಿರಾಸೆಯೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. 159 ರನ್​ಗಳನ್ನು ಡಿಫೆಂಡ್​ ಮಾಡುವಲ್ಲಿ ಮುಗ್ಗರಿಸಿದ ಡೆಲ್ಲಿ, 15ನೇ ಓವರ್​ನಲ್ಲಿ ಅಂಪೈರ್ ನೀಡಿದ್ದ ನಾಟೌಟ್​​ ನಿರ್ಧಾರಕ್ಕೆ ನಾಯಕ ರಿಷಭ್​ ಪಂತ್​ ಡಿಆರ್​ಎಸ್ ಮೊರೆ ಹೋಗದಿರುವುದು ತಂಡ ದೊಡ್ಡ ಬೆಲೆ ತೆರುವಂತಾಯಿತು.

ಡೆವಾಲ್ಡ್​​ ಬ್ರೆವಿಸ್ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಬಂದ ಆಕ್ರಮಣಕಾರಿ ಆಟಗಾರ ಟಿಮ್​ ಡೇವಿಡ್​ ಮೊದಲ ಎಸೆತ ಎದುರಿಸುವಲ್ಲಿ ಸಫಲರಾಗಲಿಲ್ಲ. ಔಟ್​ ಎಂದು ಡೆಲ್ಲಿ ಆಟಗಾರರು ಮಾಡಿದ ಮನವಿಗೆ ಸೊಪ್ಪು ಹಾಕದ ಅಂಪೈರ್​ ನಾಟೌಟ್​ ಎಂದು ತೀರ್ಪು ನೀಡಿದರು. ಈ ನಿರ್ಧಾರದ ಬಗ್ಗೆ ಗೊಂದಲ ಹೊಂದಿದ್ದರೂ ಕೂಡಾ ರಿಷಭ್​ ಪಂತ್ ಡಿಆರ್​ಎಸ್ ತೆಗೆದುಕೊಳ್ಳಲಿಲ್ಲ. ಆದರೆ ಬಾಲ್​ ಬ್ಯಾಟ್​ಗೆ ತಗುಲಿ ಪಂತ್​ ಕೈಸೇರಿರುವುದು ಬಳಿಕ ರಿಪ್ಲೇಯಲ್ಲಿ ಸ್ಪಷ್ಟವಾಗಿತ್ತು. ಇದು ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಆಟಗಾರರ ನಿರಾಸೆಗೆ ಕಾರಣವಾಗಿದೆ.

ಡೇವಿಡ್​ ಮೈದಾನಕ್ಕಿಳಿದಾಗ 95 ರನ್​ಗೆ 3 ವಿಕೆಟ್​ ಕಳೆದುಕೊಂಡಿದ್ದ ಮುಂಬೈ ಗೆಲುವಿಗೆ 33 ಎಸೆತಗಳಲ್ಲಿ 65 ರನ್​ ಅಗತ್ಯವಿತ್ತು. ಪಂತ್​ ತಪ್ಪು ನಿರ್ಧಾರವನ್ನು ಸದ್ಬಳಕೆ ಮಾಡಿಕೊಂಡ ಡೇವಿಡ್ ಬಳಿಕ ಕೇವಲ 11 ಎಸೆತಗಳಲ್ಲಿ 34 ರನ್​ ಚಚ್ಚಿ ಪಂದ್ಯವನ್ನು ಡೆಲ್ಲಿ ಕೈಯಿಂದ ಕಸಿದುಕೊಂಡರು.

ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ರಿಷಭ್​ ಪಂತ್, 'ಬೌಲ್​ ಬ್ಯಾಟ್​​ಗೆ ತಗುಲಿರುವ ಬಗ್ಗೆ ನಮಗೆ ಅನುಮಾನವಿತ್ತು. ಅಲ್ಲದೆ, ನಾನು ಸಮೀಪದಲ್ಲಿ 30 ಯಾರ್ಡ್​ ಸರ್ಕಲ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದವರ ಬಳಿ ಕೇಳಿದರೂ ಕೂಡ, ಯಾರಿಗೂ ಸ್ಪಷ್ಟತೆ ಇರಲಿಲ್ಲ. ಹೀಗಾಗಿ ಡಿಆರ್​ಎಸ್​ ಮೊರೆ ಹೋಗಲಿಲ್ಲ' ಎಂದರು.

ಮುಂಬೈ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್​ಗಳಿಂದ ಸೋತ ಡೆಲ್ಲಿ ಕ್ಯಾಪಿಟಲ್ಸ್​ಗೆ ಮತ್ತೊಮ್ಮೆ ಐಪಿಎಲ್​ ಪ್ರಶಸ್ತಿ ಮರೀಚಿಕೆಯಾಗಿದೆ. ತಂಡವು ಕಳೆದ ಮೂರು ಸೀಸನ್‌ಗಳಲ್ಲಿ ಪ್ಲೇಆಫ್‌ಗೆ ತಲುಪಿದ್ದರೂ ಇನ್ನೂ ಕೂಡ ಐಪಿಎಲ್​ ಕಿರೀಟ ಗೆದ್ದಿಲ್ಲ. ಮುಂಬೈನ ಈ ಗೆಲುವಿನೊಂದಿಗೆ 16 ಅಂಕ ಹೊಂದಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ಲೇ ಆಫ್​ ತಲುಪಿದೆ.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​​ ವಿನ್​​... ಪ್ಲೇ ಆಫ್​​ಗೆ ಆರ್​ಸಿಬಿ ಲಗ್ಗೆ

ABOUT THE AUTHOR

...view details