ಕರ್ನಾಟಕ

karnataka

ETV Bharat / sports

ಕ್ರಿಕೆಟಿಗ ರಿಷಬ್​ ಪಂತ್‌ರನ್ನು​ ಮುಂಬೈ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧಾರ - Rishabh Pant will be shifted to Mumbai

ರಸ್ತೆ ಅಪಘಾತದಲ್ಲಿ ಗಾಯಗೊಂಡ ಕ್ರಿಕೆಟಿಗ ರಿಷಬ್​ ಪಂತ್​ರನ್ನು ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಮೊಣಕಾಲಿನ ಅಸ್ತಿರಜ್ಜು ಹರಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದೆ.

rishabh-pant-will-be-shifted-to-mumbai
ಕ್ರಿಕೆಟಿಗ ರಿಷಬ್​ ಪಂತ್​ ಮುಂಬೈ ಆಸ್ಪತ್ರೆಗೆ ಸ್ಥಳಾಂತರ

By

Published : Jan 4, 2023, 2:10 PM IST

ಡೆಹ್ರಾಡೂನ್ (ಉತ್ತರಾಖಂಡ):ರಸ್ತೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಭಾರತದ ಕ್ರಿಕೆಟಿಗ ರಿಷಬ್​ ಪಂತ್​ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗುತ್ತಿದೆ. ಪಂತ್​ ಸದ್ಯ ಉತ್ತರಾಖಂಡದ ಡೆಹ್ರಾಡೂನ್​ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ಶ್ಯಾಮ್ ಶರ್ಮಾ, 'ಭಾರತದ ಯುವ ಕ್ರಿಕೆಟಿಗನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಆಟಗಾರ ಬೇಗನೇ ಗುಣಮುಖರಾಗಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ಅವರ ಕುಟುಂಬಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ' ಎಂದರು.

ಚಾಲಕ, ನಿರ್ವಾಹಕರಿಗೆ ಸರ್ಕಾರದಿಂದ ಗೌರವ: 'ರಿಷಬ್​ ಪಂತ್​ ಅಪಘಾತಕ್ಕೀಡಾಗಿದ್ದಾಗ ಆಪತ್ಬಾಂಧವರಂತೆ ಬಂದು ರಕ್ಷಿಸಿದ ಹರಿಯಾಣ ರೋಡ್​ವೇಸ್​ ಬಸ್​ ಚಾಲಕ ಸುಶೀಲ್​ಕುಮಾರ್​ ಮತ್ತು ನಿರ್ವಾಹಕ ಪರಮ್​ಜೀತ್​ ನೈನ್​ ಅವರನ್ನು ಸರ್ಕಾರ ಗೌರವಿಸಲಿದೆ. ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ' ಎಂದು ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ. ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರನ್ನು ಸತ್ಕರಿಸಲಾಗುವುದು. ತಮ್ಮ ಪ್ರಾಣ ಪಣಕ್ಕಿಟ್ಟು ಅವರು ಕ್ರಿಕೆಟಿಗನನ್ನು ರಕ್ಷಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಿದ ಅವರ ಕಾರ್ಯಕ್ಕೆ ಸಲಾಂ ಎಂದಿರುವ ಸಿಎಂ ಪುಷ್ಕರ್​ ಸಿಂಗ್​ ಧಾಮಿ, ಅವರನ್ನು ಗೌರವಿಸುವುದಾಗಿ ಭಾನುವಾರ ಘೋಷಿಸಿದ್ದರು. ಅಲ್ಲದೆ, ಯುವ ಕ್ರಿಕೆಟಿಗನ ಚಿಕಿತ್ಸೆಗೆ ರಾಜ್ಯ ಸರ್ಕಾರ ಎಲ್ಲ ನೆರವು ನೀಡಲಿದೆ ಎಂದೂ ಘೋಷಿಸಿದ್ದರು.

ಇದನ್ನೂ ಓದಿ:ಕಾರು ಅಪಘಾತ ಪ್ರಕರಣ: ಮುಂಬೈಗೆ ಕ್ರಿಕೆಟಿಗ ರಿಷಭ್​ ಪಂತ್​ ಶಿಫ್ಟ್​ ಸಾಧ್ಯತೆ

ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟಿಗ:ಡಿಸೆಂಬರ್​ 30 ರಂದು ತಮ್ಮ ತಾಯಿಗೆ ಅಚ್ಚರಿ ನೀಡಲು ಕ್ರಿಕೆಟಿಗ ರಿಷಬ್​ ಪಂತ್​ ತೆರಳುತ್ತಿದ್ದಾಗ ರೂರ್ಕಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಪಂತ್​ ಕಾರು ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದ ಪಂತ್​ ನಿದ್ರೆಯ ಮಂಪರಿನಲ್ಲಿ ಡಿವೈಡರ್​ಗೆ ರಭಸವಾಗಿ ಡಿಕ್ಕಿಯಾದ ಕಾರಣ ಕಾರು ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡಿತ್ತು.

ಇದೇ ಮಾರ್ಗವಾಗಿ ಬರುತ್ತಿದ್ದ ಬಸ್​ ಚಾಲಕ ಮತ್ತು ನಿರ್ವಾಹಕ ತಕ್ಷಣವೇ ಕಾರ್ಯಪ್ರವೃತ್ತರಾಗಿ ಪಂತ್​ರನ್ನು ಸಾವಿನ ದವಡೆಯಿಂದ ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದರು. ಅಪಘಾತದಲ್ಲಿ ಕ್ರಿಕೆಟಿಗ ಸುಟ್ಟ ಗಾಯಗಳೊಂದಿಗೆ ಬೆನ್ನು, ಹಣೆ, ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ ಪ್ಲಾಸ್ಟಿಕ್ ಸರ್ಜರಿ ನಡೆಸಬೇಕಿದ್ದು, ಮೊದಲು ದೆಹಲಿಗೆ ಸ್ಥಳಾಂತರಿಸುವ ಬಗ್ಗೆ ವರದಿಯಾಗಿತ್ತು. ಇದೀಗ ಮುಂಬೈಗೆ ಕರೆದೊಯ್ಯಲಾಗುತ್ತಿದೆ.

ಇದನ್ನೂ ಓದಿ:ನೀವೊಬ್ಬ ಫೈಟರ್​.. ಬೇಗ ಗುಣಮುಖರಾಗಿ ತಂಡ ಸೇರಿಕೊಳ್ಳುತ್ತೀರಿ.. ದ್ರಾವಿಡ್​ ಸೇರಿ ಕ್ರಿಕೆಟಿಗರ ಭಾವನಾತ್ಮಕ ನುಡಿ

ABOUT THE AUTHOR

...view details