ಕರ್ನಾಟಕ

karnataka

ETV Bharat / sports

ಶೇಷ ಭಾರತಕ್ಕೆ ಇರಾನಿ ಕಪ್​: ಪದಾರ್ಪಣೆ ಪಂದ್ಯದಲ್ಲೇ "ಜಯ"ಸ್ವಾಲ್​ ಸಾಧನೆ - ETV Bharath Kannada news

ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ರೆಸ್ಟ್ ಆಫ್ ಇಂಡಿಯಾಗೆ ಇರಾನಿ ಕಪ್ - ಮಧ್ಯಪ್ರದೇಶಕ್ಕೆ 238 ರನ್‌ಗಳ ಸೋಲು - ಹಿಮಾಂಶು ಮಂತ್ರಿ ತಂಡ 198ರನ್​ಗೆ ಆಲ್​ ಔಟ್​

Rest of India won Irani Cup 2023
ಶೇಷ ಭಾರತಕ್ಕೆ ಇರಾನಿ ಕಪ್​

By

Published : Mar 5, 2023, 5:12 PM IST

ನವದೆಹಲಿ: ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ರೆಸ್ಟ್ ಆಫ್ ಇಂಡಿಯಾ ಇರಾನಿ ಕಪ್ ಗೆದ್ದಿದೆ. ರೆಸ್ಟ್ ಆಫ್ ಇಂಡಿಯಾ ಹಿಂದಿನ ಋತುವಿನ ರಣಜಿ ಟ್ರೋಫಿ ಚಾಂಪಿಯನ್ ಮಧ್ಯಪ್ರದೇಶವನ್ನು 238 ರನ್‌ಗಳಿಂದ ಸೀಸನ್‌ನ ಅಂತಿಮ ದಿನದಂದು ಸೋಲಿಸಿತು. ಗ್ವಾಲಿಯರ್‌ನ ಕ್ಯಾಪ್ಟನ್ ರೂಪ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಮ್ಯಾಚ್​ನ ಐದನೇ ಮತ್ತು ಕೊನೆಯ ದಿನದಂದು ರೆಸ್ಟ್ ಆಫ್ ಇಂಡಿಯಾ ಬೌಲರ್‌ಗಳು ಆತಿಥೇಯ ಮಧ್ಯಪ್ರದೇಶವನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 198 ರನ್‌ಗಳಿಗೆ ಆಲೌಟ್ ಮಾಡಿದರು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ಶೇಷ ಭಾರತದ ನಾಯಕ ಮಯಾಂಕ್​ ಅಗರ್ವಾಲ್​ ನಿರ್ಣಯಕ್ಕೆ ತಂಡ ಸಾಥ್​ ನೀಡಿತು. ಮೊದಲ ಇನ್ನಿಂಗ್ಸ್​ನಲ್ಲಿ ಜೈಸ್ವಾಲ್​ (213) ದ್ವಿಶತಕ ಮತ್ತು ಅಭಿಮನ್ಯು ಈಶ್ವರನ್‌ (154) ಶತಕ ಹಾಗೂ ಯಶ್​ ಧುಳ್​ 55 ರನ್​ ಸಹಾಯದಿಂದ 484 ರನ್​ ಗಳಿಸಿತು. ಮಧ್ಯ ಪ್ರದೇಶ ಪ್ರಥಮ ಇನ್ನಿಂಗ್ಸ್​ನಲ್ಲಿ ಯಶ್‌ ದುಬೇ 109 ರನ್​ನ ಸಹಕಾರದಿಂದ 294 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಇದರಿಂದ 190 ರನ್​ಗಳ ಹಿನ್ನಡೆ ಅನುಭವಿಸಿತು.

190 ರನ್‌ ಮುನ್ನಡೆಯೊಂದಿಗೆ ರೆಸ್ಟ್‌ ಆಫ್‌ ಇಂಡಿಯಾ ಎರಡನೇ ಇನಿಂಗ್ಸ್‌ ಆರಂಭಿಸಿದ್ದು, ಮತ್ತೆ ಜೈಸ್ವಾಲ್​ ಅವರ ಬ್ಯಾಟ್​ನಿಂದ ಅಮೋಘ ಶತಕ (144) ದಾಖಲಾಯಿತು. ಈ ಶತಕದ ನೆರವಿನಿಂದ ಶೇಷ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ 246 ರನ್​ ದಾಖಲಿಸಿತು. ರಣಜಿ ಗೆದ್ದ ಮಧ್ಯ ಪ್ರದೇಶಕ್ಕೆ 436 ರನ್​ಗಳ ಗುರಿಯನ್ನು ನೀಡಿತು.

ಈ ಗುರಿಯನ್ನು ಬೆನ್ನು ಹತ್ತಿದ ರಣಜಿ ವಿಜೇತ ತಂಡಕ್ಕೆ ನಾಯಕ ಹಿಮಾಂಶು ಮಂತ್ರಿ 51 ರನ್​ ಮೂಲಕ ಆಸರೆ ಯಾದರು ಬಾಕಿ ಹರ್ಷ ಗಾವ್ಲಿ 48 ರನ್​ ಗಳಿಸಿದ್ದು ಬಿಟ್ಟರೆ ಮತ್ತಾರು ಗಮನಾರ್ಹ ಪ್ರದರ್ಶನ ನೀಡಲಿಲ್ಲ. ರೆಸ್ಟ್​ ಆಫ್​ ಇಂಡಿಯಾ ಪರವಾಗಿ ಸೌರಭ್ ಕುಮಾರ್ 3 ವಿಕೆಟ್​ ಮತ್ತು ಮುಖೇಶ್ ಕುಮಾರ್, ಪುಲ್ಕಿತ್ ನಾರಂಗ್, ಅತಿತ್ ಶೇತ್ ತಲಾ ಎರಡು ವಿಕೆಟ್​ ಹಾಗೇ ನವದೀಪ್ ಸೈನಿ ಒಂದು ವಿಕೆಟ್​ ಪಡೆದರು.

"ಜಯ"ಸ್ವಾಲ್​ ಸಾಧನೆ:ಯಶಸ್ವಿ ಇರಾನಿ ಟ್ರೋಫಿಯ 62 ವರ್ಷಗಳ ಇತಿಹಾಸದಲ್ಲಿ ಮೊದಲ ದ್ವಿಶತಕ ಮತ್ತು ಶತಕ ಸಾಧನೆಯನ್ನು ಜೈಸ್ವಾಲ್​ ಮಾಡಿದರು. ಇರಾನಿ ಕಪ್‌ ಟೂರ್ನಿಯ ಒಂದೇ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿದ ಮೊದಲ ಬ್ಯಾಟರ್‌ ಎನಿಸಿಕೊಂಡರು. ಜೊತೆಗೆ ಈ ಟೂರ್ನಿಯ ಒಂದೇ ಪಂದ್ಯದಲ್ಲಿ 357 ರನ್‌ ಗಳಿಸಿ ಅತೀ ಹೆಚ್ಚು ಅಂಕಗಳಿಸಿ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಈ ಹಿಂದೆ ಭಾರತ ತಂಡ ಆರಂಭಿಕ ಆಟಗಾರ ಶಿಖರ್‌ ಧವನ್‌ 332 ರನ್‌ ಗಳಿಸಿದ್ದರು.

ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಒಂದೇ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಗಳಿಸಿದ ಭಾರತದ 11ನೇ ಆಟಗಾರ ಎಂಬ ದಾಖಲೆ ಮಾಡಿದರು. ಕಳೆದ ವರ್ಷ ದುಲೀಪ್‌ ಟ್ರೋಫಿಯಲ್ಲಿ ಜೈಸ್ವಾಲ್‌ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ 227 ರನ್‌ ಗಳಿಸಿದ್ದರು. 2022ರಲ್ಲಿ 'ಭಾರತ ಎ' ತಂಡದ ಪರ ಬಾಂಗ್ಲಾದೇಶ ವಿರುದ್ಧ ಆಡಿದ ಪದಾರ್ಪಣೆ ಪಂದ್ಯದಲ್ಲಿಯೂ 146 ರನ್‌ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ:"ಸ್ವರ್ಗವನ್ನು ಇನ್ನಷ್ಟು ಆಕರ್ಷಕ ಮಾಡಿರುತ್ತೀರಿ" ಎಂದು ವಾರ್ನ್​ ನೆನಪಿಸಿಕೊಂಡ ಲಿಟಲ್​ ಮಾಸ್ಟರ್​

ABOUT THE AUTHOR

...view details