ಕರ್ನಾಟಕ

karnataka

ETV Bharat / sports

2022ರ ಐಪಿಎಲ್​ ಮುನ್ನ ಹೊಸ ಜರ್ಸಿ ಬಿಡುಗಡೆ ಮಾಡಿದ ಆರ್​ಸಿಬಿ - ಇಂಡಿಯನ ಪ್ರೀಮಿಯರ್ ಲೀಗ್

ಜರ್ಸಿ ಬಿಡುಗಡೆ ಬಗ್ಗೆ ಮಾತನಾಡಿರುವ ವಿರಾಟ್​ ಕೊಹ್ಲಿ ಇದು ತಾವು ಇಲ್ಲಿಯವರೆಗೆ ಧರಿಸಿದ ಜರ್ಸಿಗಳಲ್ಲಿ ನನಗೆ ತುಂಬಾ ಇಷ್ಟವಾದ ಆರ್​ಸಿಬಿ ಜರ್ಸಿ . ಅತ್ಯುತ್ತಮ ಗುಣಮಟ್ಟ ಮತ್ತು ವಿನ್ಯಾಸವೂ ಅತ್ಯುತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RCB unveiled new jersey for  IPL 2022
2022ರ ಐಪಿಎಲ್​ ಮುನ್ನ ಹೊಸ ಜರ್ಸಿ ಬಿಡುಗಡೆ ಮಾಡಿದ ಆರ್​ಸಿಬಿ

By

Published : Mar 12, 2022, 8:55 PM IST

ಬೆಂಗಳೂರು: ಶನಿವಾರ ಫಾಫ್​ ಡು ಪ್ಲೆಸಿಸ್​ರನ್ನು ನಾಯಕನನ್ನಾಗಿ ನೇಮಕ ಮಾಡಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಇದೀಗ 2022ರ ಆವೃತ್ತಿಗೆ ನೂತನ ಜರ್ಸಿಯನ್ನು ಬಿಡುಗಡೆ ಮಾಡಿದೆ.

ಮೂರು ಬಾರಿಯ ರನ್ನರ್ ಅಪ್ ಆಗಿರುವ ಆರ್​ಸಿಬಿ ಈಬಾರಿ ಸಂಪೂರ್ಣ ಕೆಂಪು ಬಣ್ಣದ ಪ್ಯಾಂಟ್​ ಮತ್ತು ಕಪ್ಪು ಮತ್ತು ಕೆಂಪು ಬಣ್ಣದಿಂದ ವಿನ್ಯಾಸ ಮಾಡಿರುವ ಟಿ -ಶರ್ಟ್​ ಅನ್ನು ತೊಟ್ಟ ತಮ್ಮ ಮೊದಲ ಟ್ರೋಫಿಗಾಗಿ ಕಣಕ್ಕಿಳಿಯಲಿದೆ.

ಜರ್ಸಿ ಬಿಡುಗಡೆ ಬಗ್ಗೆ ಮಾತನಾಡಿರುವ ವಿರಾಟ್​ ಕೊಹ್ಲಿ ಇದು ತಾವು ಇಲ್ಲಿಯವರೆಗೆ ಧರಿಸಿದ ಜರ್ಸಿಗಳಲ್ಲಿ ನನಗೆ ತುಂಬಾ ಇಷ್ಟವಾದ ಆರ್​ಸಿಬಿ ಜರ್ಸಿ. ಅತ್ಯುತ್ತಮ ಗುಣಮಟ್ಟ ಮತ್ತು ವಿನ್ಯಾಸ ಸಹ ಅತ್ಯುತ್ತಮವಾಗಿದೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶನಿವಾರ ನಡೆದ ಆರ್​ಸಿಬಿ ಅನ್​ಬಾಕ್ಸ್ ಇವೆಂಟ್​ನಲ್ಲಿ ದಕ್ಷಿಣ ಆಫ್ರಿಕಾದ ಫಾಫ್​ ಡು ಪ್ಲೆಸಿಸ್​ರನ್ನು 2022ರ ಆವೃತ್ತಿಗೆ ನಾಯಕನನ್ನಾಗಿ ನೇಮಕ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹರ್ಷಲ್ ಪಟೇಲ್, ಡುಪ್ಲೆಸಿಸ್​, ದಿನೇಶ್ ಕಾರ್ತಿಕ್ ಭಾಗವಹಿಸಿದ್ದರು. ತಂಡದ ಸ್ಟಾರ್​ಗಳಾದ ವಿರಾಟ್ ಕೊಹ್ಲಿ ಮತ್ತು ಸಿರಾಜ್​ ಶ್ರೀಲಂಕಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಆಡುತ್ತಿರುವುದರಿಂದ ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು.

ವಿಶೇಷವೆಂದರೆ ಇಂದು ಕೇವಲ ಆರ್​ಸಿಬಿಯಲ್ಲದೆ ಮುಂಬೈ ಇಂಡಿಯನ್ಸ್​, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ಕೂಡ ತಮ್ಮ ನೂತನ ಜರ್ಸಿಯನ್ನು ಬಿಡುಗಡೆ ಮಾಡಿವೆ.

ಇದನ್ನೂ ಓದಿ:ಆರ್​ಸಿಬಿಗೆ ನೂತನ ಸಾರಥಿ.. ಫಾಫ್​ ಡು ಪ್ಲೆಸಿಸ್​ರನ್ನು ನಾಯಕನಾಗಿ ಘೋಷಿಸಿದ ರಾಯಲ್​ ಚಾಲೆಂಜರ್ಸ್​

ABOUT THE AUTHOR

...view details