ಕರ್ನಾಟಕ

karnataka

ETV Bharat / sports

'ರಾವತ್​ ಭವಿಷ್ಯದ ಸ್ಟಾರ್'​: ಆರ್​ಸಿಬಿ ನಾಯಕ ಡುಪ್ಲೆಸಿಸ್​​ ಗುಣಗಾನ

ಎಡಗೈ ಬ್ಯಾಟರ್​ ರಾವತ್‌ ಅವರು ತಂಡದ ನಾಯಕ ಡುಪ್ಲೆಸಿಸ್​​ ಜೊತೆಗೆ ಆರ್​ಸಿಬಿ ಪರ ಈ ಆವೃತ್ತಿಯಲ್ಲಿ ಇನ್ನಿಂಗ್ಸ್​ ಆರಂಭಿಸುತ್ತಿದ್ದಾರೆ. ಆದರೆ ಅವರಿಂದ ಮೊದಲ ಮೂರು ಪಂದ್ಯಗಳಲ್ಲಿ ಹೇಳಿಕೊಳ್ಳುವ ಪ್ರದರ್ಶನ ಕಂಡುಬಂದಿರಲಿಲ್ಲ. ಆದರೆ,​ ಮುಂಬೈ ವಿರುದ್ಧ 47 ಎಸೆತಗಳಲ್ಲಿ 66 ರನ್​ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

Rawat a future star in making: Du Plessis
ಅನುಜ್ ರಾವತ್​ ಫಾಫ್​ ಡು ಪ್ಲೆಸಿಸ್​

By

Published : Apr 10, 2022, 5:36 PM IST

ಪುಣೆ:ಮುಂಬೈ ಇಂಡಿಯನ್ಸ್ ವಿರುದ್ದ ಶನಿವಾರ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಗೆಲುವಿಗೆ ನೆರವಾದ ಅನುಜ್​ ರಾವತ್​ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆರ್​ಸಿಬಿ ನಾಯಕ ಫಾಫ್ ಡು ಪ್ಲೆಸಿಸ್​, ಯುವ ವಿಕೆಟ್ ಕೀಪರ್ ಬ್ಯಾಟರ್​ ಭವಿಷ್ಯದ ಕ್ರಿಕೆಟ್​ ಸ್ಟಾರ್ ಎಂದು ಪ್ರಶಂಸಿಸಿದ್ದಾರೆ. ಎಡಗೈ ಬ್ಯಾಟರ್ ರಾವತ್‌ ನಾಯಕ ಡುಪ್ಲೆಸಿಸ್​​ ಜೊತೆಗೆ ಆರ್​ಸಿಬಿ ಪರ ಈ ಆವೃತ್ತಿಯಲ್ಲಿ ಇನ್ನಿಂಗ್ಸ್​ ಆರಂಭಿಸುತ್ತಿದ್ದಾರೆ. ಆದರೆ ಅವರಿಂದ ಮೊದಲ ಮೂರು ಪಂದ್ಯಗಳಲ್ಲಿ ಹೇಳಿಕೊಳ್ಳುವ ಪ್ರದರ್ಶನ ಕಂಡುಬಂದಿರಲಿಲ್ಲ.

ಆದರೆ, 22 ವರ್ಷದ ಯುವ ಕ್ರಿಕೆಟಿಗ​ ಮುಂಬೈ ವಿರುದ್ಧ 47 ಎಸೆತಗಳಲ್ಲಿ 66 ರನ್​ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಈ ವಿಚಾರವಾಗಿ ಮಾತನಾಡಿದ ಪ್ಲೆಸಿಸ್‌, ಅವರು (ಅನುಜ್) ಬ್ಯಾಟಿಂಗ್ ಮಾಡಿದ ರೀತಿ ತುಂಬಾ ಸುಂದರವಾಗಿತ್ತು. ಆತ ಭವಿಷ್ಯದ ಅತ್ಯುತ್ತಮ ಕ್ರಿಕೆಟಿಗ. ಆಟದಲ್ಲಿ ಉದ್ದೇಶವನ್ನು ತೋರುತ್ತಾರೆ, ಭವಿಷ್ಯಕ್ಕೆ ಉತ್ತಮ ಕ್ರಿಕೆಟಿಗ. ಪ್ರಸ್ತುತ ಅವರು ನಮಗೆ ಅತ್ಯುತ್ತಮ ಅಸ್ತ್ರವಾಗಿಯೂ ಕಾಣಿಸುತ್ತಿದ್ದಾರೆ ಎಂದರು.

ರಾವತ್,​ ಕಳೆದ ವರ್ಷ ರಾಜಸ್ಥಾನ್ ರಾಯಲ್ಸ್ ಪರ ಕೆಕೆಆರ್​ ವಿರುದ್ಧ ಪದಾರ್ಪಣೆ ಮಾಡಿ ಡಕ್​ ಔಟ್​ ಆಗಿದ್ದರು. ಅದು ಅವರ ಏಕೈಕ ಐಪಿಎಲ್ ಪಂದ್ಯವಾಗಿತ್ತು. 2017-18ರಲ್ಲಿ ಡೆಲ್ಲಿ ಪರ ರಣಜಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆದರೆ ಅವರ ನೈಜ ಪ್ರದರ್ಶನ ನಂತರದ ಆವೃತ್ತಿಯಲ್ಲಿ ಹೊರಬಂದಿತ್ತು. 183 ಎಸೆತಗಳಲ್ಲಿ 134 ರನ್​ ಸಿಡಿಸಿ ಡೆಲ್ಲಿ ಗೆಲುವಿಗೆ ನೆರವಾಗಿದ್ದರು. ಸಯ್ಯದ್ ಮುಸ್ತಾಕ್ ಅಲಿ ಮತ್ತು ವಿಜಯ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಕ್ಕೆ ಯುವ ಕ್ರಿಕೆಟಿಗನನ್ನು ಆರ್​ಸಿಬಿ ಮೆಗಾ ಹರಾಜಿನಲ್ಲಿ 3.4 ಕೋಟಿ ರೂಗಳಿಗೆ ಖರೀದಿಸಿತ್ತು.

ಇದನ್ನೂ ಓದಿ:ಕೊಹ್ಲಿ-ಪ್ಲೆಸಿಸ್‌ ಜೊತೆಗಿನ ಬ್ಯಾಟಿಂಗ್ ಆನಂದಿಸುವೆ: ಅನುಜ್ ರಾವತ್​

ABOUT THE AUTHOR

...view details