ಹೈದರಾಬಾದ್:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ಗೋಸ್ಕರ ಎಲ್ಲ ಫ್ರಾಂಚೈಸಿಗಳು ತಮ್ಮಿಷ್ಟದ ಕೆಲ ಆಟಗಾರರಿಗೆ ರಿಟೈನ್ ಮಾಡಿಕೊಂಡಿವೆ. ಪ್ರಮಖವಾಗಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ನಾಲ್ವರು ಪ್ಲೇಯರ್ಸ್ಗೆ ತಂಡದಲ್ಲಿ ಉಳಿಸಿಕೊಂಡಿದೆ.
ಐಪಿಎಲ್ನಲ್ಲಿ ಅತಿ ಹೆಚ್ಚು ಸಲ ಚಾಂಪಿಯನ್ ಆಗಿ ಹೊರಹೊಮ್ಮಿರುವ ಚೆನ್ನೈ ಸೂಪರ್ ಕಿಂಗ್ಸ್ ಪರ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈ ಸಲ ಕೊನೆ ಐಪಿಎಲ್ ಆಡಲಿದ್ದು, ನಂತರ ನಿವೃತ್ತಿ ಪಡೆದುಕೊಳ್ಳಲಿದ್ದಾರೆಂಬ ಮಾತು ಕೇಳಿ ಬಂದಿದೆ. ಹೀಗಾಗಿ, ಮುಂದಿನ ಆವೃತ್ತಿಗೆ ನಾಯಕ ಯಾರು ಎಂಬ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.
ಖತರ್ನಾಕ್ ಪ್ಲೇಯರ್ಗೆ ಸಿಎಸ್ಕೆ ಮಣೆ
ಚೆನ್ನೈ ತಂಡದ ನಾಯಕನಾಗಲಿರುವ ರವೀಂದ್ರ ಜಡೇಜಾ ಮಹೇಂದ್ರ ಸಿಂಗ್ ಧೋನಿ ನಂತರ ಸಿಎಸ್ಕೆ ತಂಡದಲ್ಲಿರುವ ಆಲ್ರೌಂಡರ್ ರವೀಂದ್ರ ಜಡೇಜಾಗೆ ತಂಡ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಈ ಸಲದ ರಿಟೈನ್ ವೇಳೆ ಧೋನಿಗಿಂತಲೂ ಜಡೇಜಾಗೆ ಹೆಚ್ಚಿನ ಹಣ ನೀಡಿದೆ. ರಿಟೈನ್ ವೇಳೆ ಧೋನಿಗೆ 12 ಕೋಟಿ ರೂ. ನೀಡಿದ್ರೆ, ಆಲ್ರೌಂಡರ್ ಜಡೇಜಾಗೆ 16 ಕೋಟಿ ರೂ. ನೀಡಲಾಗಿದೆ.
ಅದ್ಭುತ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ನಿಂದಾಗಿ ಹೆಸರುವಾಸಿಯಾಗಿರುವ ಜಡೇಜಾ, ಫೀಲ್ಡಿಂಗ್ನಲ್ಲೂ ಮಿಂಚು ಹರಿಸಿದ್ದಾರೆ. 2021ರಲ್ಲಿ ಆರ್ಸಿಬಿ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಹರ್ಷಲ್ ಪಟೇಲ್ ಎಸೆದ ಓವರ್ವೊಂದರಲ್ಲಿ ದಾಖಲೆಯ 37ರನ್ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಐಪಿಎಲ್ನಲ್ಲಿ ಇಲ್ಲಿಯವರೆಗೆ 200 ಪಂದ್ಯಗಳಿಂದ 2,386 ರನ್ಗಳಿಸಿರುವ ಇವರು, 127 ವಿಕೆಟ್ ಪಡೆದು ಮಿಂಚಿದ್ದಾರೆ.
ಇದನ್ನೂ ಓದಿರಿ:BIG BREAKING: ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ಘೋಷಿಸಿದ ಕೊಹ್ಲಿ
ನಾಯಕನಾಗುವ ಎಲ್ಲ ರೀತಿಯ ಅರ್ಹತೆ ಹೊಂದಿರುವ ಜಡೇಜಾ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ತಂಡ ಸಂಕಷ್ಟಕ್ಕೆ ಸಿಲುಕಿದ ಅನೇಕ ಸಂದರ್ಭಗಳಲ್ಲಿ ಬಂಡೆಯಾಗಿ ನಿಂತು ಗೆಲುವಿನ ಕಾಣಿಕೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಸಿಎಸ್ಕೆ ಮುಂದಿನ ಕೆಲ ವರ್ಷಗಳ ಕಾಲ ತಂಡದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಧೋನಿ ಬಳಿಕ ನಾಯಕತ್ವ ಜವಾಬ್ದಾರಿ ನೀಡಲು ಮುಂದಾಗಿದೆ. 2012ರಿಂದಲೂ ಜಡೇಜಾ ಸಿಎಸ್ಕೆ ತಂಡದಲ್ಲಿ ಆಡುತ್ತಿದ್ದು, ಮೂರು ಸಲ ಟ್ರೋಫಿ ಗೆದ್ದಿದ್ದಾರೆ.
2022ರ ಟೂರ್ನಿಗಾಗಿ ತಂಡ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹಾಗೂ ಇಂಗ್ಲೆಂಡ್ನ ಮೊಯಿನ್ ಅಲಿಯನ್ನು ಉಳಿಸಿಕೊಂಡಿದೆ.