ನವದೆಹಲಿ:ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರವೀಂದ್ರ ಜಡೇಜಾ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್ ಹಾಲಿ ಚಾಂಪಿಯನ್ ತಂಡದ ಹೊಣೆ ಹೊತ್ತಿರುವ ಜಡ್ಡು, 'ಮಹತ್ತರ ಜವಾಬ್ದಾರಿ ನೀಡಿದ್ದಕ್ಕೆ ಭಾರಿ ಖುಷಿ ಇದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾರಿಯಲ್ಲಿ ಮುನ್ನಡೆಯುವೆ' ಎಂದು ಹೇಳಿದ್ದಾರೆ.
ಜಡೇಜಾ ನಾಯಕನಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ವಿಡಿಯೋವನ್ನು ಚೆನ್ನೈ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ತಮಗೆ ಸಿಕ್ಕ ಈ ಗೌರವ ತುಂಬಾ ದೊಡ್ಡದು. ಧೋನಿ ಭಾಯ್ ರೂಪಿಸಿರುವ ಪರಂಪರೆ ಮುಂದುವರಿಸಿಕೊಂಡು ಹೋಗಬೇಕಿದೆ. ಈ ಜವಾಬ್ದಾರಿ ಚಿಕ್ಕದಲ್ಲ ಎಂದರು.