ಅಹಮದಾಬಾದ್ (ಗುಜರಾತ್): ಭಾನುವಾರ ರಾತ್ರಿ ಇಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಆಘಾತಕಾರಿ ಸೋಲಿನ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳುವ ಚಿತ್ರವನ್ನು ಭಾರತದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಹಂಚಿಕೊಂಡಿದ್ದಾರೆ.
"ದುರದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ಪಂದ್ಯಾವಳಿ ಉದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ ಡ್ರೆಸ್ಸಿಂಗ್ ಕೋಣೆಗೆ ಬಂದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಾವು ಮತ್ತೆ ಪುಟಿದೇಳುತ್ತೇವೆ!" ಸೋಮವಾರ ಎಕ್ಸ್ ಆ್ಯಪ್ನಲ್ಲಿ ಶಮಿ ಪೋಸ್ಟ್ ಮಾಡಿದ್ದಾರೆ. ಮೋದಿ ಅಪ್ಪಿಕೊಂಡು ಸಾಂತ್ವನ ಹೇಳುತ್ತಿರುವ ಚಿತ್ರವನ್ನು ಪೋಸ್ಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸ್ಪಿನ್ನರ್ ರವೀಂದ್ರ ಜಡೇಜಾ ಅವರು ಆಟಗಾರರನ್ನು ಪ್ರೇರೇಪಿಸಲು ಪ್ರಧಾನಿ ಮೋದಿ ಭಾರತೀಯ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದ ಕ್ಷಣವನ್ನು ಹಂಚಿಕೊಂಡಿದ್ದಾರೆ. "ನಾವು ಉತ್ತಮ ಟೂರ್ನಿಯನ್ನು ಕಳೆದಿದ್ದೇವೆ, ಅದೀಗ ಕೊನೆಗೊಂಡಿದೆ. ನಾವೆಲ್ಲರೂ ಹೃದಯವಿದ್ರಾವಕರಾಗಿದ್ದೇವೆ, ಆದರೆ ನಮ್ಮ ಜನರ ಬೆಂಬಲವು ನಮಗೆ ಧೈರ್ಯ ತಂದಿದೆ. ನಿನ್ನೆ ಡ್ರೆಸ್ಸಿಂಗ್ ಕೋಣೆಗೆ ಪ್ರಧಾನಿ ಮೋದಿ ಅವರ ಭೇಟಿ ವಿಶೇಷ ಮತ್ತು ಬಹಳ ಪ್ರೇರಕವಾಗಿದೆ" ಎಂದು ಜಡೇಜಾ ಬರೆದಕೊಂಡಿದ್ದಾರೆ.