ಕರ್ನಾಟಕ

karnataka

ETV Bharat / sports

1983ರ ವಿಶ್ವಕಪ್ ವಿಜಯೋತ್ಸವಕ್ಕೆ 39 ವರ್ಷಗಳು: ಇಡೀ ದೇಶಕ್ಕೆ ಯಾವತ್ತೂ ಅಳಿಸಲಾರದ ಇತಿಹಾಸ - Kapil Dev World Cup

1975 ಮತ್ತು 1979 ರಲ್ಲಿ ಹಿಂದಿನ ಎರಡು ವಿಶ್ವಕಪ್‌ಗಳನ್ನು ಗೆದ್ದ ವೆಸ್ಟ್ ಇಂಡೀಸ್ ಫೇವರಿಟ್‌ಗಳಾಗಿ ಫೈನಲ್‌ಗೆ ಹೋಗುತ್ತಿತ್ತು. ಆದರೆ, 1983ರಲ್ಲಿ ಭಾರತದ ವಿರುದ್ಧ ಸೋಲುನಭಿಸಿತು. ಈ ಅವಿಸ್ಮರಣೀಯ ಗೆಲುವಿಗೆ ಹಾಗೂ ಇತಿಹಾಸಕ್ಕೆ ಇಂದು ಬರೋಬ್ಬರಿ 39 ವರ್ಷ.

On this day in 1983, a defiant Team India captured its maiden Cricket World Cup title
On this day in 1983, a defiant Team India captured its maiden Cricket World Cup title

By

Published : Jun 25, 2022, 2:29 PM IST

Updated : Jun 25, 2022, 2:57 PM IST

ಲಂಡನ್:ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಎಂದಿಗೂ ಮರೆಯಲಾರದ ದಿನವಿದು. 1983ರ ಇದೇ ದಿನದಂದು ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 43 ರನ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ತನ್ನ ಮೊದಲ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ದಿನವಿದು. ಈ ಅವಿಸ್ಮರಣೀಯ ಗೆಲುವಿಗೆ ಹಾಗೂ ಇತಿಹಾಸಕ್ಕೆ ಇಂದು ಬರೋಬ್ಬರಿ 39 ವರ್ಷ.

1983ರ ಈ ದಿನದಂದು ಭಾರತೀಯ ಕ್ರಿಕೆಟ್ ತಂಡವು ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ದೈತ್ಯ ವೆಸ್ಟ್ ಇಂಡೀಸ್ ಅನ್ನು ಫೈನಲ್‌ನಲ್ಲಿ 43 ರನ್‌ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸವನ್ನು ನಿರ್ಮಿಸಿತು. ಇದಕ್ಕೂ ಮುನ್ನ ಭಾರತ ತಂಡವು 1975 ಮತ್ತು 1979ರಲ್ಲಿ ನಿರಾಶಾದಾಯಕವಾಗಿ ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ, 1983ರಲ್ಲಿ ವಿಶ್ವಕಪ್‌ಗೆ ಭಾರತ ಮುತ್ತಿಕ್ಕುವ ಮೂಲಕ ಕ್ರಿಕೆಟ್ ಲೋಕವನ್ನೇ ನಿಬ್ಬೆರಗಾಗಿಸುವಂತೆ ಮಾಡಿದ್ದು ಯಾವತ್ತೂ ಅಳಿಸಲಾರದ ಇತಿಹಾಸ.

ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿ ನಾಲ್ಕು ಗೆಲುವುಗಳು ಮತ್ತು ಎರಡು ಸೋಲುಗಳೊಂದಿಗೆ ಅವರು ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಅಲ್ಲದೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತ್ತು.

ಭಾರತವು "ಜೈಂಟ್ ಕಿಲ್ಲರ್' ಮೋಡ್‌ನಲ್ಲಿ ಫೈನಲ್‌ಗೆ ಬಂದಿತ್ತು ಮತ್ತು ಟ್ರೋಫಿಯನ್ನು ಪಡೆದುಕೊಳ್ಳಲು ಒಂದು ಅಂತಿಮ ಹಂತಕ್ಕೆ ಬಂದು ನಿಂತಿತ್ತು. 1975 ಮತ್ತು 1979ರಲ್ಲಿ ಹಿಂದಿನ ಎರಡು ವಿಶ್ವಕಪ್‌ಗಳನ್ನು ಗೆದ್ದ ವೆಸ್ಟ್ ಇಂಡೀಸ್ ಫೇವರಿಟ್ ಆಗಿ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಹಾಗಾಗಿ ವೆಸ್ಟ್ ಇಂಡೀಸ್ ಫೇವರಿಟ್‌ಗಳಾಗಿ ಫೈನಲ್‌ಗೆ ಹೋಗುತ್ತಿತ್ತು. ಅವರು ಐದು ಗೆಲುವುಗಳು ಮತ್ತು ಒಂದು ಸೋಲಿನೊಂದಿಗೆ ತಮ್ಮ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದಿದ್ದರು. ಆದರೆ, 1983ರಲ್ಲಿ ಭಾರತದ ವಿರುದ್ಧ ಸೋಲುನಭಿಸಿತು. ಇನ್ನು ಸೆಮಿಸ್‌ನಲ್ಲಿ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿದ್ದು ಸಹ ನೆನಪಿಸಿಕೊಳ್ಳಲೇಬೇಕು.

ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ತಮ್ಮ ಸ್ಟಾರ್ ಬ್ಯಾಟರ್ ಸುನಿಲ್ ಗವಾಸ್ಕರ್ ಅವರನ್ನು ಕೇವಲ 2 ರನ್‌ಗಳಿಗೆ ಕಳೆದುಕೊಂಡು ನಿರಾಶಾದಾಯಕ ಆರಂಭ ಹೊಂದಿತ್ತು. ನಂತರ, ಕ್ರಿಸ್ ಶ್ರೀಕಾಂತ್ ಮತ್ತು ಮೊಹಿಂದರ್ ಅಮರನಾಥ್ ಅವರು ಈ ಆರಂಭಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿದರು. ಇದು 57 ರನ್​ಗಳ ಜೊತೆಯಾಟವನ್ನು ರೂಪಿಸಿತು. ಶ್ರೀಕಾಂತ್ ಅವರನ್ನು 38 ರನ್​​ಗಳಿಗೆ ಔಟ್ ಮಾಡುವ ಮೂಲಕ ವೇಗಿ ಮಾಲ್ಕಮ್ ಮಾರ್ಷಲ್ ಈ ಜೋಡಿಗೆ ಕಂಠಕವಾದರು.

ಯಶಪಾಲ್ ಶರ್ಮಾ ಮತ್ತು ಅಮರನಾಥ್ ನಂತರ ಆಟ ಮುಂದುವರೆಸಿದರು. ಆದರೆ, ಅಮರನಾಥ್ ವೇಗಿ ಮೈಕಲ್ ಹೋಲ್ಡಿಂಗ್ ಅವರಿಂದ 26 ರನ್​ಗಳಿಗೆ ಔಟಾದರು. ಆ ಹಂತದಲ್ಲಿ ಭಾರತ 3/90 ಆಗಿತ್ತು. ಮಧ್ಯಂತರಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇದ್ದುದರಿಂದ ಭಾರತಕ್ಕೆ ದಿಕ್ಕುತೋಚದಂತಾಗಿತ್ತು.

ಆ ಸಮಯದಲ್ಲಿ ಸಂದೀಪ್ ಪಾಟೀಲ್ 27 ರನ್​ ಗಳಿಸಿ ಭಾರತವನ್ನು ಸ್ಥಿರವಾಗಿಡಲು ಪ್ರಯತ್ನಿಸಿದರು. ಅಲ್ಲದೆ, ನಾಯಕ ಕಪಿಲ್ ದೇವ್ (15), ಮದನ್ ಲಾಲ್ (17) ಮತ್ತು ಸೈಯದ್ ಕಿರ್ಮಾನಿ, ವಿಕೆಟ್ ಕೀಪರ್ (14) ಪಾಟೀಲ್ ಅವರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಕಿರ್ಮಾನಿ ಮತ್ತು ಬೌಲರ್ ಬಲ್ವಿಂದರ್ ಸಿಂಗ್ ಸಂಧು (11*) ಅಂತಿಮವಾಗಿ 30 ರನ್‌ಗಳ ಜೊತೆಯಾಟದ ಫಲವಾಗಿ 54.4 ಓವರ್‌ಗಳಲ್ಲಿ ಭಾರತವು ಕೇವಲ 184 ರನ್‌ ಗಳಿಸಲು ಮಾತ್ರ ಶಕ್ತವಾಯಿತು.

ವೇಗಿ ಆಂಡಿ ರಾಬರ್ಟ್ಸ್ (3/32) ಆ ದಿನ ವಿಂಡೀಸ್‌ನ ಬೌಲಿಂಗ್ ಪಟ್ಟಿಯಲ್ಲಿ ಗವಾಸ್ಕರ್, ಕೀರ್ತಿ ಆಜಾದ್ ಮತ್ತು ರೋಜರ್ ಬಿನ್ನಿ ಅವರ ವಿಕೆಟ್‌ಗಳನ್ನು ಕಬಳಿಸಿದರು. ಮಾಲ್ಕಮ್ ಮಾರ್ಷಲ್ (2/24) ಮತ್ತು ಮೈಕೆಲ್ ಹೋಲ್ಡಿಂಗ್ (2/26) ಕೂಡ ತಮ್ಮ ವೇಗದೊಂದಿಗೆ ಕೆಲವು ಗಮನಾರ್ಹ ಕೊಡುಗೆಗಳನ್ನು ನೀಡಿದರು. ಸ್ಪಿನ್ನರ್ ಲ್ಯಾರಿ ಗೋಮ್ಸ್ (2/49) ಕೂಡ ಗಟ್ಟಿಯಾದರು.

184 ರನ್‌ಗಳ ಸಾಧಾರಣ ಮೊತ್ತ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ವಿವಿಯನ್ ರಿಚರ್ಡ್ಸ್ ಅರ್ಧಶತಕ ಗಳಿಸುವ ಮುನ್ಸೂಚನೆ ನೀಡಿದ್ದರು. ಆದರೆ, ಕಪಿಲ್ ದೇವ್ ಅದ್ಭುತ ರನ್ ಕ್ಯಾಚ್ ಪಡೆದರು. ವಿವಿಯನ್ ರಿಚರ್ಡ್ಸ್ 33 ರನ್ ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದರು.

ನಂತರ ಜೆಫ್ ಡುಜಾನ್ 25 ರನ್ ಗಳಿಸಿದರು. ಆದರೆ, ಅಂತಿಮವಾಗಿ ವೆಸ್ಟ್ ಇಂಡೀಸ್ ಇನ್ನಿಂಗ್ಸ್ 140ಕ್ಕೆ ಆಲೌಟ್ ಆಯಿತು ಮತ್ತು ಭಾರತವು 43 ರನ್‌ಗಳ ಸಮಗ್ರ ಜಯವನ್ನು ದಾಖಲಿಸಿತು. ಭಾರತದ ಪರ ಮೊಹಿಂದರ್ ಅಮರನಾಥ್ ಮತ್ತು ಮದನ್ ಲಾಲ್ ತಲಾ ಮೂರು ವಿಕೆಟ್ ಪಡೆದರು. ಲಾಲಾ ಅಮರನಾಥ್ ಅವರು ಮೈಕಲ್‌ರನ್ನು ಎಲ್‌ಬಿಡಬ್ಲ್ಯೂ ಮಾಡುವ ಮೂಲಕ ವಿಕೆಟ್ ಹಿಡಿದುಕೊಂಡಿದ್ದು ಅಭಿಮಾನಿಗಳ ಮನದಲ್ಲಿ ಇನ್ನೂ ಅಚ್ಚೊತ್ತಿದೆ.

ಸಂಕ್ಷಿಪ್ತ ಸ್ಕೋರ್‌ಗಳು:ಭಾರತ 54.4 ಓವರ್‌ಗಳಲ್ಲಿ 183 (ಕ್ರಿಸ್ ಶ್ರೀಕಾಂತ್ 38, ಸಂದೀಪ್ ಪಾಟೀಲ್ 27, ಆಂಡಿ ರಾಬರ್ಟ್ಸ್ 3/32) ವೆಸ್ಟ್ ಇಂಡೀಸ್ 140 (ವಿವ್ ರಿಚರ್ಡ್ಸ್ 33, ಜೆಫ್ ಡುಜಾನ್ 25, ಮೊಹಿಂದರ್ ಅಮರನಾಥ್ 3/12) 43 ರನ್‌ಗಳಿಂದ ಸೋಲನುಭವಿಸಿದರು.

Last Updated : Jun 25, 2022, 2:57 PM IST

ABOUT THE AUTHOR

...view details