ಪರ್ತ್ (ಆಸ್ಟ್ರೇಲಿಯಾ):ಪಾಕಿಸ್ತಾನ ತಂಡದ ವೇಗಿ ಹ್ಯಾರಿಸ್ ರವೂಫ್ ಮಾರಕ ಬೌಲಿಂಗ್ನಿಂದ ನೆದರ್ಲೆಂಡ್ ತಂಡದ ಬಾಸ್ ಡಿ ಲೈಡ್ ಗಂಭೀರವಾಗಿ ಗಾಯಗೊಂಡಿದ್ದಾರೆ. 140 ಕಿಮೀ ವೇಗದಲ್ಲಿ ಬಂದ ಚೆಂಡು ಕಣ್ಣಿಗೆ ಕೆಳ ಭಾಗಕ್ಕೆ ಬಡಿದಿದೆ.
ಆಸ್ಟ್ರೇಲಿಯಾದ ಪರ್ತ್ ಮೈದಾನದಲ್ಲಿ ಇಂದು ನಡೆದ ಟಿ20 ವಿಶ್ವಕಪ್ ಟೂರ್ನಿ ಸೂಪರ್-12ರ ಪಂದ್ಯದಲ್ಲಿ ನೆದರ್ಲೆಂಟ್ ವಿರುದ್ಧ ಪಾಕಿಸ್ತಾನ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಆದರೆ, ಈ ಪಂದ್ಯದಲ್ಲಿ ಪಾಕ್ ಬೌಲರ್ಗಳ ದಾಳಿಗೆ ನೆದರ್ಲೆಂಡ್ ಬ್ಯಾಟ್ಸ್ಮನ್ಗಳು ತತ್ತರಿಸಿ ಹೋಗಿದ್ದಾರೆ.
ಪಾಕಿಸ್ತಾನದ ಬೌಲರ್ ಬೆಂಕಿಯ ಚೆಂಡಿನಂತೆ ಬೌಲಿಂಗ್ಗೆ ನೆದರ್ಲೆಂಡ್ ಆಟಗಾರರ ಬ್ಯಾಟಿಂಗ್ ಕುಸಿದು ಹೋಗಿದೆ. ಇದರಿಂದ ನೆದರ್ಲೆಂಡ್ ತಂಡದ ಒಟ್ಟಾರೆ ಮೊತ್ತ ಮೂರಂಕಿ ಗಡಿ ದಾಡಲು ಸಹ ಸಾಧ್ಯವಾಗಲಿಲ್ಲ. ಇದಕ್ಕೆ ಉದಾಹರಣೆ ಬಾಸ್ ಡಿ ಲೈಡ್ ಗಂಭೀರವಾಗಿ ಗಾಯಗೊಂಡಿರುವುದೇ ಆಗಿದೆ.
ಪಾಕ್ ಬೌಲರ್ನ ಮಾರಕ ಬೌನ್ಸರ್: ನೆದರ್ಲೆಂಡ್ ಬ್ಯಾಟರ್ಗೆ ಗಂಭೀರ ಪೆಟ್ಟು ಟಾಸ್ ಗೆದ್ದಿದ್ದ ನೆದರ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೂರನೇ ಕ್ರಮದಲ್ಲಿ ಮೈದಾನಕ್ಕೆ ಇಳಿದ ಬಾಸ್ ಡಿ ಲೈಡ್ 16 ಎಸೆತಗಳಲ್ಲಿ 6 ರನ್ ಗಳಿಸಿದ್ದಾಗ ಹ್ಯಾರಿಸ್ ರವೂಫ್ ಅವರ ಬೌಲಿಂಗ್ನಲ್ಲಿ ಗಾಯಗೊಂಡರು.
ರವೂಫ್‌ನ ಮಾರಕ ಬೌನ್ಸರ್‌ನಲ್ಲಿ ಶಾಟ್ ಆಡಲು ಹೋದಾಗ ಬಾಸ್ ಡಿ ಲೈಡ್ ಮುಖಕ್ಕೆ ಚಂಡು ನೇರವಾಗಿ ಬಡಿಯಿತು. ಹೆಲ್ಮೆಟ್ ಧರಿಸಿದ್ದರೂ ಸಹ 140 ಕಿ.ಮೀ ವೇಗದಲ್ಲಿ ಚೆಂಡು ಬಾಸ್ ಡಿ ಲೈಡ್ ಕಣ್ಣಿನ ಕೆಳಗೆ ಪೆಟ್ಟು ಬಿದ್ದಿದೆ.
ಈ ಮಾರಕ ಬೌನ್ಸರ್‌ನಿಂದ ಹೆಲ್ಮೆಟ್ ಕೂಡ ಒಡೆದಿರುವುದು ಕಂಡು ಬಂದಿದೆ. ಅಲ್ಲದೇ, ಪೆಟ್ಟು ಬಿದ್ದು ಬಾಸ್ ಡಿ ಲೈಡ್ ಸ್ವಲ್ಪ ಹೊತ್ತು ಕ್ರೀಸ್ನಲ್ಲೇ ಕುಳಿತರು. ವೈದ್ಯರ ಸೂಚನೆಯಂತೆ ಮೈದಾನದಿಂದ ನಿರ್ಗಮಿಸಿದ ಬಾಸ್ ಡಿ ಲೈಡ್ ಮತ್ತೆ ಮೈದಾನಕ್ಕೆ ಬರಲೇ ಇಲ್ಲ. ಪಂದ್ಯದಿಂದ ನಿವೃತ್ತಿ ಹೊಂದಿದರು.
ಇದನ್ನೂ ಓದಿ:T20 World Cup: ನೆದರ್ಲೆಂಡ್ ವಿರುದ್ಧ ಪಾಕ್ಗೆ ಗೆಲುವು.. ಬಾಬರ್ ಟೀಂಗೆ ಟೂರ್ನಿಯಲ್ಲಿ ಮೊದಲ ಜಯ