ಮುಂಬೈ: ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರಲ್ಲಿ ಎಂ.ಎಸ್ ಧೋನಿ ಕೂಡಾ ಒಬ್ಬರು. ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 11 ವರ್ಷ ಕಳೆದಿದೆ. ಜುಲೈ 4, 2010ರಲ್ಲಿ ಧೋನಿ, ಸಾಕ್ಷಿ ರಾವತ್ ಅವರನ್ನು ಡೆಹರಾಡೂನ್ನಲ್ಲಿ ವಿವಾಹವಾಗಿದ್ದರು.
ಸಾಮಾಜಿಕ ಜಾಲಾತಾಣದಿಂದ ದೂರ ಉಳಿದಿರುವ ಧೋನಿ, ತಮ್ಮ ಯಾವುದೇ ಶುಭ ಸಮಾಚಾರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೂ ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, "ನಮ್ಮ ರಾಜ ಮತ್ತು ರಾಣಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು" ಎಂದಿದ್ದಾರೆ.
ಭಾರತದಾದ್ಯಂತ ಕೋಟ್ಯಂತರ ಅಭಿಮಾನಿ ಬಳಗ ಹೊಂದಿರುವ ಧೋನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಧೋನಿ ಆಗಸ್ಟ್ 15 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ. ಸದ್ಯ ಐಪಿಎಲ್ನಲ್ಲಿ ಮಾತ್ರ ಸಕ್ರಿಯರಾಗಿದ್ದು ಕೋವಿಡ್ನಿಂದ ಲೀಗ್ ಸ್ಥಗಿತಗೊಂಡ ನಂತರ ಯಾವುದೇ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ. ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಐಪಿಎಲ್ ಪುನರಾರಂಭಗೊಳ್ಳಲಿದ್ದು, ಧೋನಿಯನ್ನು ಮೈದಾನದಲ್ಲಿ ಕಾಣಲು ಅಭಿಮಾನಿಗಳು ಕಾತರರಾಗಿದ್ದಾರೆ.
ಇದನ್ನೂ ಓದಿ: ಕೊಹ್ಲಿ ವಿಭಿನ್ನ ರೀತಿಯ ನಾಯಕ.. ಧೋನಿಗೋಸ್ಕರ ಬುಲೆಟ್ಗೆ ಎದೆಯೊಡ್ಡಲು ಸಿದ್ಧ : ಕೆ ಎಲ್ ರಾಹುಲ್