ನವದೆಹಲಿ:ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದುಬೈನಲ್ಲಿ ನಡೆದ ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪತ್ನಿ ಸಾಕ್ಷಿ, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ರ‍್ಯಾಪರ್ ಬಾದ್‌ಶಾ ಮತ್ತು ಇತರರೊಂದಿಗೆ ಡ್ಯಾನ್ಸ್ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಗೆಳೆಯನ ಹುಟ್ಟುಹಬ್ಬದ ಪಾರ್ಟಿ: ಧೋನಿ ಜತೆ ಡ್ಯಾನ್ಸ್ ಮಾಡಿದ ಹಾರ್ದಿಕ್ ಪಾಂಡ್ಯ - ಮಹೇಂದ್ರ ಸಿಂಗ್ ಧೋನಿ
ಗೆಳೆಯನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ, ಹಾರ್ದಿಕ್ ಪಾಂಡ್ಯ ಮತ್ತು ರ‍್ಯಾಪರ್ ಬಾದ್‌ಶಾ ಅವರೊಂದಿಗೆ ಮೋಜು-ಮಸ್ತಿ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧೋನಿ ಜತೆ ಡ್ಯಾನ್ಸ್ ಮಾಡಿದ ಹಾರ್ದಿಕ್ ಪಾಂಡ್ಯ
ವಿಡಿಯೋದಲ್ಲಿ, ಹಾರ್ದಿಕ್ ಮತ್ತು ಧೋನಿ ವೃತ್ತದಲ್ಲಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಬಾದ್‌ಶಾ ಅವರು ತಮ್ಮ ಎಂದಿನ ಕಪ್ಪು ಬಣ್ಣದ ಜಾಕೆಟ್ ಲುಕ್‌ನಲ್ಲಿದ್ದರೆ, ಹಾರ್ದಿಕ್ ರೇಷ್ಮೆ ಶರ್ಟ್ ಮತ್ತು ಪ್ಯಾಂಟ್‌ನಲ್ಲಿದ್ದರು. ಧೋನಿ ಕಪ್ಪು ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಫಿಫಾ ವಿಶ್ವಕಪ್ನಲ್ಲೂ ಧೋನಿ ಹವಾ.. ಹೇಗಿದೆ ನೋಡಿ ಅಭಿಮಾನ