ಮುಲ್ತಾನ್(ಪಾಕಿಸ್ತಾನ):ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಪಾಕಿಸ್ತಾನ ಪಾರಮ್ಯ ಮೆರೆದಿದ್ದು, ಬರೋಬ್ಬರಿ 120 ರನ್ಗಳ ಅಂತರದಿಂದ ಗೆಲುವು ದಾಖಲು ಮಾಡಿದೆ. ಈ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿ ಕೈವಶ ಮಾಡಿಕೊಂಡಿದೆ.
ಮುಲ್ತಾನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಇಮಾಮ್ ಉಲ್ ಹಕ್(72) ಹಾಗೂ ಕ್ಯಾಪ್ಟನ್ ಬಾಬರ್ ಆಜಮ್(77)ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ನಷ್ಟಕ್ಕೆ 275ರನ್ಗಳಿಕೆ ಮಾಡಿತು.
ಇದನ್ನೂ ಓದಿ:ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿ ಅಬ್ಬರ, ಕಿಂಗ್ ಕೊಹ್ಲಿ ದಾಖಲೆ ಮುರಿದ ಬಾಬರ್ ಆಜಂ
276 ರನ್ಗಳ ಟಾರ್ಗೆಟ್ ಬೆನತ್ತಿದ್ದ ವೆಸ್ಟ್ ಇಂಡೀಸ್ ತಂಡ ಪಾಕ್ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ, ಕೇವಲ 155 ರನ್ ಮಾತ್ರಗಳಿಕೆ ಮಾಡಿತು. ತಂಡದ ಪರ ಬ್ರೊಕ್ಸ್(42) ಹಾಗೂ ಮೈರ್ಸ್(33) ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು. ಪಾಕಿಸ್ತಾನದ ಪರ ಬೌಲಿಂಗ್ನಲ್ಲಿ ಮಿಂಚು ಹರಿಸಿದ ಮೊಹಮ್ಮದ್ ನವಾಜ್ 4 ವಿಕೆಟ್, ಮೊಹಮ್ಮದ್ ವಾಸೀಂ 3 ವಿಕೆಟ್, ಸಹ್ಬಾದ್ ಖಾನ್ 2 ವಿಕೆಟ್ ಪಡೆದರೆ, ಶಾಹೀನ್ ಆಫ್ರಿದಿ 1 ವಿಕೆಟ್ ಕಿತ್ತರು.
ಪಾಕ್ ಕ್ಯಾಪ್ಟನ್ ಬಾಬರ್ ದಾಖಲೆ:ಸಿಮೀತ್ ಓವರ್ಗಳ ಕ್ರಿಕೆಟ್ನಲ್ಲಿ ಮೇಲಿಂದ ಮೇಲೆ ಹೊಸ ದಾಖಲೆ ಸೃಷ್ಟಿ ಮಾಡುತ್ತಿರುವ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಮ್ ನಿನ್ನೆಯ ಪಂದ್ಯದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ(ಮೂರು ಮಾದರಿ) ಸತತವಾಗಿ 9 ಅರ್ಧಶತಕ ಸಿಡಿಸಿರುವ ಮೊದಲ ಬ್ಯಾಟರ್ ಆಗಿ ಬಾಬರ್ ಹೊರಹೊಮ್ಮಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆ ಬರೆದ ಪಾಕ್ ಕ್ಯಾಪ್ಟನ್ ಸಂಕ್ಷೀಪ್ತ ಸ್ಕೋರ್: ಪಾಕಿಸ್ತಾನ 275/8(ಬಾಬರ್ ಆಜಮ್ 77, ಇಮಾನ್ ಉಲ್ ಹಕ್ 72)
ವೆಸ್ಟ್ ಇಂಡೀಸ್ 155/10( ಬ್ರೊಕ್ಸ್ 42, ಮೈರ್ಸ್ 33)