ಮೆಲ್ಬೋರ್ನ್:ಸ್ಪಿನ್ ಮಾಂತ್ರಿಕ, ಕ್ರಿಕೆಟ್ ದಂತಕತೆ ಶೇನ್ ವಾರ್ನ್ ನಿಧನವನ್ನು ಕ್ರಿಕೆಟ್ ಲೋಕಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಾರ್ನ್ ಸೇವೆ ಸ್ಮರಿಸಲು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದ ಒಂದು ಸ್ಟ್ಯಾಂಡ್ಗೆ ಅವರ ಹೆಸರನ್ನಿಡಲಾಗಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ಅವರ ಮಕ್ಕಳು 'ವಾರ್ನಿ ಸ್ಟ್ಯಾಂಡ್' ಅನ್ನು ಅನಾವರಣಗೊಳಿಸಿದರು.
ಶೇನ್ ವಾರ್ನ್ ಮಾರ್ಚ್ 4 ರಂದು ಥಾಯ್ಲೆಂಡ್‌ನಲ್ಲಿ ಹೃದಯಸ್ತಂಭನದಿಂದ ಮೃತಪಟ್ಟಿದ್ದರು. ಆ ಬಳಿಕ ಮೆಲ್ಬೋನ್ ಕ್ರೀಡಾಂಗಣದ ಒಂದು ಸ್ಟ್ಯಾಂಡ್ಗೆ ಶೇನ್ ವಾರ್ನ್ ಹೆಸರಿಡಲು ನಿರ್ಧರಿಸಲಾಗಿತ್ತು. ಅದರಂತೆ ಇಂದು 50 ಸಾವಿರ ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ವಾರ್ನ್ ಅವರ ಮಕ್ಕಳು ತಂದೆಯ ಹೆಸರಿನ ಸ್ಟ್ಯಾಂಡ್ ಉದ್ಘಾಟಿಸಿದರು.