ಕರ್ನಾಟಕ

karnataka

ETV Bharat / sports

ಸ್ಮಿತ್​ ಜೊತೆ ಬಾಬರ್​ ಹೋಲಿಸುವುದು ಕೊಹ್ಲಿ ಜೊತೆಗೆ ಸ್ಮಿತ್​ ಹೋಲಿಸಿದಂತೆ: ಉಸ್ಮಾನ್ ಖವಾಜಾ

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಅವರು ಸ್ಟೀವನ್ ಸ್ಮಿತ್ ಮತ್ತು ಬಾಬರ್ ಅಜಮ್ ಆಟ ನೋಡಲು ರೋಮಾಂಚನಕಾರಿಯಾಗಿದೆ ಎಂದಿದ್ದಾರೆ.

ಸ್ಟೀವನ್ ಸ್ಮಿತ್, ವಿರಾಟ್​ ಕೊಹ್ಲಿ ಮತ್ತು ಬಾಬರ್ ಅಜಮ್
ಸ್ಟೀವನ್ ಸ್ಮಿತ್, ವಿರಾಟ್​ ಕೊಹ್ಲಿ ಮತ್ತು ಬಾಬರ್ ಅಜಮ್

By ETV Bharat Karnataka Team

Published : Nov 30, 2023, 6:25 PM IST

Updated : Nov 30, 2023, 6:43 PM IST

ಭಾರತದಲ್ಲಿ ನಡೆದ 2023ರ ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದ ಬಳಿಕ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಡಿಸೆಂಬರ್​ 14 ರಿಂದ 2024ರ ಜನವರಿ 7ರ ವರೆಗೆ ಮೂರು ಟೆಸ್ಟ್​ ಪಂದ್ಯಗಳನ್ನು ಒಳಗೊಂಡಂತೆ ಬೆನೌಡ್-ಖಾದಿರ್ ಸರಣಿ ಆಡಲಿದೆ. ಈ ಸರಣಿಗೂ ಮುನ್ನ ಆಸೀಸ್ ಎಡಗೈ ಆರಂಭಿಕ ಉಸ್ಮಾನ್ ಖವಾಜಾ ಪಾಕಿಸ್ತಾನ ತಂಡದ ಬ್ಯಾಟರ್​ ಬಾಬರ್​ ಅಜಮ್​ ಅವರನ್ನು ಹೊಗಳಿದ್ದಾರೆ.

ಸ್ಟೀವನ್ ಸ್ಮಿತ್ ಜೊತೆಗೆ ಬಾಬರ್​ ಹೋಲಿಸುವುದು, ಭಾರತ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಅವರೊಂದಿಗೆ ಸ್ಮಿತ್ ಹೋಲಿಸಿದಂತೆ ಎಂದು ಉಸ್ಮಾನ್ ಖವಾಜಾ ಹೇಳಿದ್ದಾರೆ. ಬಾಬರ್ ಅಜಮ್ ಎಲ್ಲಾ ಮೂರು ಮಾದರಿಗಳಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ನಮ್ಮ ಯುಗದ ಟೆಸ್ಟ್​ ಕ್ರಿಕೆಟ್​ನಲ್ಲಿ ಸ್ಮಿತ್​ ​ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದಾರೆ. ಹೀಗಾಗಿ ಬೆನೌಡ್-ಖಾದಿರ್ ಸರಣಿಯಲ್ಲಿ ಈ ಇಬ್ಬರು ಆಟಗಾರರ ಆಟವನ್ನು ನೋಡುವುದು ನಿಜಕ್ಕೂ ರೋಮಾಂಚನಕಾರಿಯಾಗಿದೆ. ಬಾಬರ್​​ ಬಗ್ಗೆ ಹೇಳಬೇಕಾದ ಒಂದು ವಿಷಯವೆಂದರೆ, ಕೇವಲ ಪಾಕ್​ನಲ್ಲಿ ರನ್​ ಗಳಿಸುವುದು ಮಾತ್ರವಲ್ಲದೆ, ವಿದೇಶದಲ್ಲಿಯೂ ರನ್ ಗಳಿಸುತ್ತಾರೆ. ಈ ಹಿಂದೆಯೂ ಇಲ್ಲಿ ಶತಕ ಬಾರಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಇತ್ತೀಚೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಪಾಕ್​ ತನ್ನ ಹಳೆ ಖಾದರ್​ ಅನ್ನು ಕಳೆದುಕೊಂಡಿದ್ದು, ದಾಖಲೆಗಳನ್ನು ಬರೆಯುವುದರಲ್ಲಿ ಪ್ರಭಾವಶಾಲಿಯಾಗಿಲ್ಲ. 1995ರಲ್ಲಿ ಆತಿಥೇಯರನ್ನು ಸಿಡ್ನಿಯಲ್ಲಿ 74 ರನ್‌ಗಳಿಂದ ಪಾಕ್​ ಸೋಲಿಸಿತ್ತು. ಬಳಿಕ ಕಾಂಗರೂ ನೆಲದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ನೂತನವಾಗಿ ಪಾಕ್​ ತಂಡದ ಟೆಸ್ಟ್​ ನಾಯಕತ್ವ ವಹಿಸಿಕೊಂಡಿರುವ ಶಾನ್ ಮಸೂದ್‌ ಅವರು ಸರಣಿ ಗೆದ್ದು ದಾಖಲೆ ನಿರ್ಮಿಸಲು ಎದುರು ನೋಡುತ್ತಿದ್ದಾರೆ.

ಪ್ರಸ್ತುತ ನಡೆದ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಪಾಕ್​ ಟೂರ್ನಿಯಿಂದ ಹೊರ ನಡೆದ ಮೇಲೆ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇದರೊಂದಿಗೆ ತಂಡದಲ್ಲಿ ಆನೇಕ ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಮುಖ್ಯವಾಗಿ ಎಲ್ಲಾ ಮಾದರಿ ಕ್ರಿಕೆಟ್​ನಿಂದ ಬಾಬರ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ.

ಬೆನೌಡ್-ಖಾದಿರ್ ಟೆಸ್ಟ್ ಸರಣಿ :​ ಬೆನೌಡ್-ಖಾದಿರ್​ ಟ್ರೋಫಿಯನ್ನು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡಗಳ ನಡುವೆ ಆಡಿಸಲಾಗುವ ಟೆಸ್ಟ್​ ಸರಣಿಯಾಗಿದೆ. ಇದನ್ನು ಕಳೆದ ವರ್ಷ ಪಾಕಿಸ್ತಾನ ಮಾರ್ಚ್ 2022ರಲ್ಲಿ ಆಸೀಸ್​ ಪ್ರವಾಸ ಕೈಗೊಂಡಿದ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು. ಬೆನೌಡ್ ಮತ್ತು ಖಾದಿರ್ ಆಸೀಸ್​ ಹಾಗು ಪಾಕ್​ ತಂಡದ ಮಾಜಿ ಲೆಗ್​ ಸ್ಪಿನ್​ ಬೌಲರ್ಸ್​ಗಳಾಗಿದ್ದು, ಈ ಇಬ್ಬರ ಹೆಸರನ್ನು ಸರಣಿಗೆ ಇಡಲಾಗಿದೆ.

ಇದನ್ನೂ ಓದಿ :ಯಾರ್ಕರ್​ ಸ್ಪೆಷಲಿಸ್ಟ್‌​ ಬುಮ್ರಾ ಪೋಸ್ಟ್​ ವೈರಲ್​: ಮಾಜಿ ಕ್ರಿಕೆಟಿಗ ಕೆ.ಶ್ರೀಕಾಂತ್ ಹೇಳಿದ್ದಿಷ್ಟು

Last Updated : Nov 30, 2023, 6:43 PM IST

ABOUT THE AUTHOR

...view details