ಇತ್ತೀಚೆಗೆ ಲೀಗ್ ಕ್ರಿಕೆಟ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚು ದೇಶಗಳು ಇಂಥ ಲೀಗ್ಗಳನ್ನು ನಡೆಸಿ ಚುಟುಕು ಕ್ರಿಕೆಟ್ ಎಂಜಾಯ್ ಮಾಡುತ್ತಿದ್ದಾರೆ. ಇದು ಟೆಸ್ಟ್ ಮತ್ತು ಏಕದಿನ ಮಾದರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಹಿರಿಯ ಆಟಗಾರರು ಹೇಳುತ್ತಿದ್ದಾರೆ. ಆದರೂ ಟಿ20 ಮಾದರಿಯ ಆಟ ನೋಡಲು ಜನ ಇಷ್ಟಪಡುತ್ತಾರೆ ಎಂಬುದೂ ಸತ್ಯ.
ಆದರೆ ಈಗ ಕ್ರಿಕೆಟ್ನಿಂದ ದೂರ ಉಳಿದಿದ್ದ ಅಮೆರಿಕ ಕೂಡ ಚುಟುಕು ಕ್ರಿಕೆಟ್ ಮಾರು ಹೋಗಿದೆ. ಮೇಜರ್ ಲೀಗ್ ಕ್ರಿಕೆಟ್ ನಡೆಸಲು ಮುಂದಾಗಿದೆ. 2022ರಲ್ಲಿ ಉದ್ಘಾಟನಾ ಲೀಗ್ ನಡೆದಿತ್ತು. 2023ರಲ್ಲಿ ಐಪಿಎಲ್ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳ ಫ್ರಾಂಚೈಸಿಯ ಲೀಗ್ ಆಯೋಜನೆ ಮಾಡುತ್ತಿದೆ. ಇದಕ್ಕೆ ಈಗಾಗಲೇ ಆರು ಫ್ರಾಂಚೈಸಿಗಳು ಸೇರಿಕೊಂಡಿವೆ. ಈ ಪೈಕಿ ಮೂರು ಭಾರತದ ಮೂಲದವು. ಚೆನ್ನೈ ಸೂಪರ್ ಕಿಂಗ್ಸ್ನ ಟೆಕ್ಸಾಸ್ ಸೂಪರ್ ಕಿಂಗ್ಸ್ (ಟಿಎಸ್ಕೆ), ಮುಂಬೈ ಇಂಡಿಯನ್ಸ್ನ MI ನ್ಯೂಯಾರ್ಕ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ನ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳು ಆಡಲಿವೆ. ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್, ಸಿಯಾಟಲ್ ಓರ್ಕಾಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ತಂಡಗಳಿವೆ.
ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಒಂದಾಗಿದೆ. ಐಪಿಎಲ್ನಲ್ಲಿ ಆರ್ಸಿಬಿಗೆ ಆಡುತ್ತಿರುವ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಈಗ ಟೆಕ್ಸಾಸ್ ಸೂಪರ್ ಕಿಂಗ್ಸ್ ಹಳದಿ ಜರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟೆಕ್ಸಾಸ್ ಸೂಪರ್ ಕಿಂಗ್ಸ್‌ಗೆ ಇವರೇ ನಾಯಕ ಕೂಡಾ.
ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಆಡುತ್ತಿದ್ದ ಆಟಗಾರರು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದಾಗಿದ್ದಾರೆ. ಫಾಫ್ ಡು ಪ್ಲೆಸಿಸ್, ಡ್ವೇನ್ ಬ್ರಾವೋ, ಅಂಬಟಿ ರಾಯುಡು, ಡೆವೊನ್ ಕಾನ್ವೆ, ಮಿಚೆಲ್ ಸ್ಯಾಂಟ್ನರ್ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡವರು. ಹಳೆಯ ಚೆನ್ನೈ ಸೂಪರ್ ಕಿಂಗ್ಸ್ನ ಆಟಗಾರರು ಒಂದೇ ತಂಡ ಸೇರಿಕೊಂಡಿದ್ದಾರೆ.