ಬೆಂಗಳೂರು: ಕಳೆದ 4 ವರ್ಷಗಳಲ್ಲಿ ಕೋಟಿಗಟ್ಟಲೆ ಹಣ ಬಾಚಿಕೊಂಡಿದ್ದ ಕನ್ನಡಿಗ ಕೃಷ್ಣಪ್ಪ ಗೌತಮ್ ಅವರನ್ನು 15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕೇವಲ 90 ಲಕ್ಷ ರೂಗಳಿಗೆ ಲಖನೌ ಸೂಪರ್ ಜೈಂಟ್ಸ್ ಖರೀದಿಸಿದೆ.
2021ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅವರನ್ನು ಬರೋಬ್ಬರಿ 9.27 ಕೋಟಿ ರೂಗಳಿಗೆ ಖರೀದಿಸಿತ್ತು. ಆದರೆ ಒಂದೇ ಒಂದು ಪಂದ್ಯದಲ್ಲಿ ಆಡಿಸಿರಲಿಲ್ಲ. ಅಲ್ಲದೆ ಈ ಬಾರಿ ದೇಶಿ ಕ್ರಿಕೆಟ್ನಲ್ಲೂ ಅವರು ಹೆಚ್ಚಿನ ಪಂದ್ಯಗಳಲ್ಲಿ ಆಡಿರದ ಕಾರಣ ಹರಾಜಿನಲ್ಲಿ ಆಕರ್ಷಣೆಯನ್ನು ಕಳೆದುಕೊಂಡಿದ್ದರು.
ಬೌಲಿಂಗ್ ಆಲ್ರೌಂಡರ್ ಆಗಿರುವ ಗೌತಮ್ 2017ರಲ್ಲಿ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. 2 ಕೋಟಿ ರೂ.ಗೆ ಮುಂಬೈ ಸೇರಿದ್ದ ಈ ಕ್ರಿಕೆಟಿಗ, ನಂತರ 2 ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ನಲ್ಲಿ 6.2 ಕೋಟಿ ರೂ ಪಡೆದು ಆಡಿದ್ದರು. 2020ರಲ್ಲಿ ಅಷ್ಟೇ ಮೊತ್ತಕ್ಕೆ ಪಂಜಾಬ್ ಕಿಂಗ್ಸ್ಗೆ ವರ್ಗಾವಣೆಗೊಂಡಿದ್ದರು.
ಲಖನೌ ಸೂಪರ್ ಜೈಂಟ್ಸ್ ಖರೀದಿಸಿರುವ ಆಟಗಾರರು:
- ದೀಪಕ್ ಹೂಡಾ- ಭಾರತೀಯ ಆಲ್ ರೌಂಡರ್ ₹5,75,00,000
- ಅವೇಶ್ ಖಾನ್- ಭಾರತೀಯ ಬೌಲರ್ ₹10,00,00,000
- ಜೇಸನ್ ಹೋಲ್ಡರ್- ವಿದೇಶಿ ಆಲ್ ರೌಂಡರ್ ₹8,75,00,000
- ಅಂಕಿತ್ ಸಿಂಗ್ ರಜಪೂತ್- ಭಾರತೀಯ ಬೌಲರ್ ₹50,00,000
- ಮಾರ್ಕ್ ವುಡ್ -ವಿದೇಶಿ ಬೌಲರ್ ₹7,50,00,000
- ಕ್ವಿಂಟನ್ ಡಿ ಕಾಕ್- ವಿದೇಶಿ ವಿಕೆಟ್ ಕೀಪರ್ ₹6,75,00,000
- ಮನೀಶ್ ಪಾಂಡೆ- ಭಾರತೀಯ ಬ್ಯಾಟ್ಸ್ಮನ್ ₹4,60,00,000
- ಕೆ.ಗೌತಮ್- ಭಾರತೀಯ ಆಲ್ ರೌಂಡರ್ ₹90,00,000
- ಕೃನಾಲ್ ಪಾಂಡ್ಯ- ಭಾರತೀಯ ಆಲ್ ರೌಂಡರ್ ₹8,25,00,000
ಇದನ್ನೂ ಓದಿ:ವಿಂಡೀಸ್ ಸ್ಟಾರ್ ಒಡಿಯನ್ ಸ್ಮಿತ್ಗೆ ಬಂಪರ್ ಲಾಟರಿ: ₹6 ಕೋಟಿಗೆ ಪಂಜಾಬ್ ಪಾಲು