ಕರ್ನಾಟಕ

karnataka

ETV Bharat / sports

ಕನ್ನಡಿಗ ಕೆ ಎಲ್ ರಾಹುಲ್​ಗೆ ಭಾರತ ಟೆಸ್ಟ್​ ತಂಡದ ಉಪನಾಯಕನ ಪಟ್ಟ

ಗಾಯದ ಸಮಸ್ಯೆಯಿಂದಾಗಿ ರೋಹಿತ್​ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಕನ್ನಡಿಗ ಕೆ ಎಲ್ ರಾಹುಲ್​ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಮೂಲ ತಿಳಿಸಿದೆ..

KL Rahul to don vice-captaincy hat for Test series against SA
ಕೆಎಲ್​ ರಾಹುಲ್ ಟೆಸ್ಟ್ ತಂಡದ ಉಪನಾಯಕ

By

Published : Dec 18, 2021, 2:49 PM IST

Updated : Dec 18, 2021, 3:28 PM IST

ಮುಂಬೈ: ಭಾರತದ ಆರಂಭಿಕ ಬ್ಯಾಟರ್​ ಹಾಗೂ ಕನ್ನಡಿಗ ಕೆ ಎಲ್ ರಾಹುಲ್​ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

ಕಳೆದ ವಾರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಘೋಷಿಸಿದ ಟೆಸ್ಟ್​ ತಂಡದಲ್ಲಿ ಅಜಿಂಕ್ಯ ರಹಾನೆ ಅವರನ್ನು ಉಪನಾಯಕನ ಸ್ಥಾನದಿಂದ ಕೆಳಗಿಳಿಸಿ ಸೀಮಿತ ಓವರ್​ಗಳ ನಾಯಕ ರೋಹಿತ್ ಶರ್ಮಾ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ರೋಹಿತ್ ಶರ್ಮಾ ಹ್ಯಾಮ್​ಸ್ಟ್ರಿಂಗ್​(ಸ್ನಾಯು ಸೆಳೆತ) ಗಾಯಕ್ಕೆ ತುತ್ತಾಗಿದ್ದರಿಂದ ಟೆಸ್ಟ್​ ಸರಣಿಯಿಂದ ಹೊರ ಬಿದ್ದಿದ್ದಾರೆ. ಹಾಗಾಗಿ, ವಿರಾಟ್​ ಕೊಹ್ಲಿಗೆ ಉಪನಾಯಕನಾಗಿ ರಾಹುಲ್​ರನ್ನು ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಮೂಲ ಎಎನ್​ಐಗೆ ತಿಳಿಸಿದೆ.

ಗಾಯಾಳು ರೋಹಿತ್ ಶರ್ಮಾ ಸರಣಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಕೆ ಎಲ್ ರಾಹುಲ್​ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದು ಮೂಲ ತಿಳಿಸಿದೆ. ಟೀಂ ಇಂಡಿಯಾ ಯುವ ನಾಯಕ ರೋಹಿತ್ ಶರ್ಮಾ ಮುಂಬೈನಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಎಡಗಾಲು ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.

ಹಾಗಾಗಿ, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್​ ಸರಣಿಯಿಂದ ಹೊರ ಬಿದ್ದಿದ್ದಾರೆ. ಪ್ರಿಯಾಂಕ್ ಪಾಂಚಾಲ್​ ಅವರು ರೋಹಿತ್ ಶರ್ಮಾ ಬದಲು ತಂಡ ಸೇರಿಕೊಂಡಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ಮೂಲಕ ತಿಳಿಸಿತ್ತು.

ಇದನ್ನೂ ಓದಿ:U-19 ತಂಡಕ್ಕೆ ಉಪಯುಕ್ತ ಸಲಹೆ ನೀಡಿದ ಕಪ್ತಾನ.. ಯುವ ಪ್ಲೇಯರ್ಸ್​​ಗೆ ರೋಹಿತ್​ರಿಂದ ಕ್ರಿಕೆಟ್​​ ಪಾಠ

Last Updated : Dec 18, 2021, 3:28 PM IST

ABOUT THE AUTHOR

...view details