ದುಬೈ:ರನ್ಮಷಿನ್ ವಿರಾಟ್ ಕೊಹ್ಲಿ ಈಗ ರನ್ ಮಾಡಲು ತಡವರಿಸುತ್ತಿರಬಹುದು. ಆದರೆ, ಅವರು ಕ್ರಿಕೆಟ್ಗೆ ನೀಡಿದ ಕೊಡುಗೆ ಎಂದಿಗೂ ಸ್ಮರಣೀಯ. ಏಷ್ಯಾ ಕಪ್ನಲ್ಲಿ ಅವರು ಈ ಕೊರತೆಯನ್ನು ಮೀರಲಿದ್ದಾರೆ ಎಂದು ಭಾರತ ತಂಡದ ಆರಂಭಿಕ ಆಟಗಾರ ಕೆ.ಎಲ್ ರಾಹುಲ್ ಆಶಾಭಾವನೆ ವ್ಯಕ್ತಪಡಿಸಿದರು.
ಏಷ್ಯಾ ಕಪ್ ಪೂರ್ವ ತಯಾರಿಯ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿರಾಟ್ ಇನ್ನೂ ಹಸಿದಿರುವ ಕ್ರಿಕೆಟರ್. ಅವರ ಪ್ರದರ್ಶನ ಇತ್ತೀಚೆಗೆ ಕುಗ್ಗಿದೆ. ಮುಂದೆ ಅವರು ಮತ್ತೆ ಅಬ್ಬರಿಸಲಿದ್ದಾರೆ. ಏಷ್ಯಾ ಕಪ್ ಅದಕ್ಕೆ ವೇದಿಕೆ ನೀಡಲಿದೆ ಎಂದು ರಾಹುಲ್ ಹೇಳಿದರು.
ಮೊದಲ ಪಂದ್ಯವೇ ಪಾಕಿಸ್ತಾನ ವಿರುದ್ಧ ನಡೆಯಲಿದೆ. ಇದಕ್ಕಾಗಿ ನಾವು ಕಾತುರದಿಂದ ಕಾಯುತ್ತಿದ್ದೇವೆ. ಉಭಯ ರಾಷ್ಟ್ರಗಳ ಮಧ್ಯೆ ನಡೆಯುವ ಪಂದ್ಯ ಎಂದಿಗೂ ಕೌತುಕ. ಅದು ಅಭಿಮಾನಿಗಳಲ್ಲದೇ ನಮ್ಮಲ್ಲೂ ಇದೆ. ರೋಚಕ ಪಂದ್ಯಕ್ಕೆ ಎದುರು ನೋಡುತ್ತಿದ್ದೇವೆ ಎಂದರು.
ಪಾಕ್ ಮತ್ತು ಭಾರತ ನಡುವಿನ ಪಂದ್ಯಕ್ಕೆ ಇತಿಹಾಸವಿದೆ. ಈ ಪಂದ್ಯ ತೀವ್ರತೆಯಿಂದ ಕೂಡಿರುತ್ತದೆ. ಈ ಹಿಂದಿನ ತಪ್ಪು ತಿದ್ದಿಕೊಂಡು ಹೊಸ ಹುರುಪಿನೊಂದಿಗೆ ಮೈದಾನಕ್ಕಿಳಿಯಲಿದ್ದೇವೆ ಎಂದು ರಾಹುಲ್ ಹೇಳಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಟಿ - 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 10 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತ್ತು. ಅಲ್ಲದೇ, ಇದು ವಿಶ್ವಕಪ್ ಇತಿಹಾಸದಲ್ಲೇ ಮೊದಲ ಪರಾಜಯವಾಗಿತ್ತು.
ಓದಿ:ಭಾರತ ಫುಟ್ಬಾಲ್ ಸಂಸ್ಥೆ ಮೇಲಿನ ನಿಷೇಧ ತೆರವು.. ನಿಗದಿಯಂತೆ ಭಾರತದಲ್ಲೇ ಮಹಿಳಾ ವಿಶ್ವಕಪ್