ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಜಗತ್ತಿನಲ್ಲಿ ವಿಶ್ವ ದಾಖಲೆ: 8ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿ ಶತಕ ಸಿಡಿಸಿದ ಐರ್ಲೆಂಡ್ ಪ್ಲೇಯರ್​

ಕ್ರಿಕೆಟ್​ ಜಗತ್ತಿನಲ್ಲಿ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣವಾಗುವುದು ಸರ್ವೆ ಸಾಮಾನ್ಯ. ಸದ್ಯ ಕ್ರಿಕೆಟ್​ ಶಿಶು ಐರ್ಲೆಂಡ್ ತಂಡದ ಪ್ಲೇಯರ್​ವೋರ್ವ ಹೊಸದೊಂದು ವಿಶ್ವದಾಖಲೆ ಬರೆದಿದ್ದಾರೆ.

Simi Singh
Simi Singh

By

Published : Jul 17, 2021, 3:47 AM IST

ದುಬ್ಲಿನ್​(ಐರ್ಲೆಂಡ್​): ಕ್ರಿಕೆಟ್​ ಇತಿಹಾಸದಲ್ಲಿ ಈ ಹಿಂದೆ ನಿರ್ಮಾಣವಾಗದಂತಹ ರೆಕಾರ್ಡ್​​ವೊಂದು ಐರ್ಲೆಂಡ್ ಪ್ಲೇಯರ್​​ನಿಂದ ದಾಖಲಾಗಿದೆ. ಕ್ರಿಕೆಟ್​ ಶಿಶು ಐರ್ಲೆಂಡ್​ ತಂಡದ ಬೌಲಿಂಗ್​ ಅಲ್​ರೌಂಡರ್​ ಸಿಮಿ ಸಿಂಗ್​​ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಹೊಸ ದಾಖಲೆ ಬರೆದ ಸಿಮಿ ಸಿಂಗ್​​

ದಕ್ಷಿಣ ಆಫ್ರಿಕಾ ನೀಡಿದ್ದ 346ರನ್​ಗಳ ಗುರಿ ಬೆನ್ನತ್ತಿದ್ದ ಐರ್ಲೆಂಡ್​ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿತ್ತು. ಈ ವೇಳೆ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ ಮಾಡಲು ಕಣಕ್ಕಿಳಿದಿದ್ದ ಬೌಲಿಂಗ್​ ಆಲ್​ರೌಂಡರ್​ ಸಿಮಿ ಸಿಂಗ್​ 91 ಎಸೆತಗಳಲ್ಲಿ 14 ಬೌಂಡರಿ ಸೇರಿದಂತೆ ಅಜೇಯ 100ರನ್​​ಗಳಿಕೆ ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್​ ಇತಿಹಾಸದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಇಲ್ಲಿಯವರೆಗಿನ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಪ್ಲೇಯರ್ ಕೂಡ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದು, ಈ ರೀತಿಯ ಸಾಧನೆ ನಿರ್ಮಾಣ ಮಾಡಿಲ್ಲ. ಇದೇ ಮೊದಲ ಬಾರಿಗೆ ಐರ್ಲೆಂಡ್​ ಕ್ರಿಕೆಟರ್ ನೂತನ ದಾಖಲೆ ನಿರ್ಮಿಸಿದ್ದಾರೆ. ಈ ಪ್ಲೇಯರ್​​ ಈಗಾಗಲೇ ಟಿ-20 ಕ್ರಿಕೆಟ್​ನಲ್ಲೂ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಅರ್ಧಶತಕ ಸಿಡಿಸಿರುವ ಸಾಧನೆ ಮಾಡಿದ್ದಾರೆ. ಸಿಮಿ ಸಿಂಗ್ ಮೂಲತಃ ಭಾರತದವರಾಗಿದ್ದು, ಪಂಜಾಬ್​ನಲ್ಲಿ ಜನಸಿದ್ದಾರೆ.

ಇದನ್ನೂ ಓದಿರಿ: ODI ಕ್ರಿಕೆಟ್​ನಲ್ಲಿ ಇತಿಹಾಸ ಬರೆದ ಐರ್ಲೆಂಡ್​... ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಜಯ

ದಕ್ಷಿಣ ಆಫ್ರಿಕಾ-ಐರ್ಲೆಂಡ್​ ವಿರುದ್ಧ ನಡೆದ ಮೂರನೇ ಪಂದ್ಯದಲ್ಲಿ ಹರಿಣಗಳ ತಂಡ 70ರನ್​ಗಳ ಗೆಲುವು ದಾಖಲು ಮಾಡಿ ಸರಣಿ 1-1 ಅಂತರದಿಂದ ಸಮಬಲ ಮಾಡಿಕೊಂಡಿವೆ. ಮೊದಲನೇ ಪಂದ್ಯ ಮಳೆಯಿಂದ ರದ್ಧುಗೊಂಡಿತ್ತು. ಎರಡನೇ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಬಲಿಷ್ಠ ಆಫ್ರಿಕಾ 43ರನ್​ಗಳ ಸೋಲು ಕಂಡಿತ್ತು. ಈ ಮೂಲಕ ಹರಿಣಗಳ ವಿರುದ್ಧ ಚೊಚ್ಚಲ ಏಕದಿನ ಪಂದ್ಯ ಗೆದ್ದಿರುವ ಸಾಧನೆ ಮಾಡಿತು.

ABOUT THE AUTHOR

...view details