ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬೌಲರ್ಗಳಾದ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳುವ ನಿರ್ಧಾರ ಕೈಗೊಂಡು ಆಸ್ಟ್ರೇಲಿಯಾಗೆ ವಾಪಸಾಗಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸ್ ತಿಳಿಸಿದೆ.
"ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳಿಗಾಗಿ ಆಸ್ಟ್ರೇಲಿಯಾಕ್ಕೆ ಮರಳುತ್ತಿದ್ದಾರೆ. ಆದ್ದರಿಂದ ಈ ಬಾರಿಯ ಐಪಿಎಲ್ ಸೀಸನ್ಗೆ ಅವರು ಲಭ್ಯವಿರುವುದಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಿಂದ ಸಂಪೂರ್ಣ ಬೆಂಬಲ ನೀಡುತ್ತದೆ" ಎಂದು ಫ್ರ್ಯಾಂಚೈಸ್ ಹೇಳಿಕೆಯಲ್ಲಿ ತಿಳಿಸಿದೆ.
ಲೆಗ್ ಸ್ಪಿನ್ನರ್ ಜಂಪಾ ಅವರನ್ನು 1.5 ಕೋಟಿ ರೂ.ಗೆ ಆರ್ಸಿಬಿ ಖರೀದಿಸಿದರೆ, ವೇಗಿ ರಿಚರ್ಡ್ಸನ್ ಅವರನ್ನ ಆರ್ಸಿಬಿ 4 ಕೋಟಿ ರೂ. ಕೊಟ್ಟು ಖರಿದಿಸಿತ್ತು. ಈ ಬಾರಿಯ ಐಪಿಎಲ್ನಲ್ಲಿ ಜಂಪಾ ಈವರೆಗೂ ಒಂದು ಪಂದ್ಯವನ್ನಾಡಿಲ್ಲ.