ಹೈದರಾಬಾದ್ : ಚೆನ್ನೈನಲ್ಲಿ ಗುರುವಾರ ನಡೆದ ಐಪಿಎಲ್ 2021 ಹರಾಜಿನಲ್ಲಿ ಭಾರತದ ಶ್ರೇಷ್ಠ ಬ್ಯಾಟ್ಸ್ ಮೆನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು 20 ಲಕ್ಷ ರೂಪಾಯಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಖರೀದಿಸಿದೆ.
ಮುಂಬೈ ಇಂಡಿಯನ್ಸ್ ಸೇರಿದ ನಂತರ ಅರ್ಜುನ್ ತೆಂಡೂಲ್ಕರ್ ಹೇಳಿದ್ದೇನು? - ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿ
ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಅನ್ನು ಮುಂಬೈ ಇಂಡಿಯನ್ಸ್ ಟೀಂ ಖರೀದಿಸಿದೆ. ಮುಂಬೈ ಇಂಡಿಯನ್ಸ್ ಸೇರಿದ ನಂತರ ಅರ್ಜುನ್ ತೆಂಡೂಲ್ಕರ್ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಎಡಗೈ ವೇಗದ ಬೌಲರ್ ಮತ್ತು ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ಸೇರಿದ ನಂತರ ಪ್ರತಿಕ್ರಿಯೆ ನೀಡಿದ್ದು, 'ನಾನು ಬಾಲ್ಯದಿಂದಲೂ ಮುಂಬೈ ಇಂಡಿಯನ್ಸ್ ನ ದೊಡ್ಡ ಅಭಿಮಾನಿ. ನನ್ನ ಮೇಲೆ ವಿಶ್ವಾಸ ತೋರಿಸಿದ್ದಕ್ಕಾಗಿ ತರಬೇತುದಾರರು, ಸಪೋರ್ಟ್ ಸ್ಟಾಫ್ ಮತ್ತು ತಂಡದ ಮಾಲೀಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಇನ್ನು ಅರ್ಜುನ್ ತೆಂಡೂಲ್ಕರ್ ಅವರನ್ನ ಕೌಶಲ್ಯದ ಆಧಾರದ ಮೇಲೆ ತಂಡ ಆಯ್ಕೆ ಮಾಡಿದೆ. ಅವರ ತಂದೆ ಸಚಿನ್ ಅವರ ಟ್ಯಾಗ್ ಲೈನ್ ನೋಡಿ ತೆಗೆದುಕೊಂಡಿಲ್ಲ. ಅರ್ಜುನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ಅವರಿಗೆ ಸಹಯಾಕವಾಗಲಿದೆ ಎಂದು ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಹೇಳಿದ್ದಾರೆ.