ಮುಂಬೈ:ಸ್ಯಾಮ್ ಕರ್ರಾನ್ ಅರ್ಧಶತಕ ಮತ್ತುಹರ್‌ಪ್ರೀತ್ ಸಿಂಗ್ ಭಾಟಿಯಾ ಅವರು ಅಮೂಲ್ಯ 41 ರನ್ನ ಕೊಡುಗೆಯ ಜೊತೆಗೆ ಇತರೆ ಬ್ಯಾಟರ್ಗಳ ರನ್ ಸಹಾಯದಿಂದ ಪಂಜಾಬ್ ಕಿಂಗ್ಸ್ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟದಿಂದ 214 ರನ್ ಗಳಿಸಿದ್ದಾರೆ. ಮುಂಬೈ ಬೌಲರ್ಗಳ ಮೇಲೆ ಸವಾರಿ ಮಾಡುತ್ತಾ ಬಂದ ಪಂಜಾಬ್ ಹುಡುಗರು ರೋಹಿತ್ ಬಳಗಕ್ಕೆ 215 ರನ್ ಬೃಹತ್ ಗುರಿಯನ್ನು ನೀಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಪಂಜಾಬ್ಗೆ ಕ್ಯಾಮೆರಾನ್ ಗ್ರೀನ್ ಆರಂಭಿಕ ಆಘಾತ ಕೊಟ್ಟರು. 11 ರನ್ ಗಳಿಸಿದ್ದ ಮ್ಯಾಥ್ಯೂ ಶಾರ್ಟ್ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಅಥರ್ವ ಟೈಡೆ ತಂಡ ಮೊತ್ತಕ್ಕೆ 40+ ರನ್ ಕೊಡುಗೆ ನೀಡಿದರು. ಪ್ರಭ್‌ಸಿಮ್ರಾನ್ ಸಿಂಗ್ 26 ರನ್ ಗಳಿಸಿ ಔಟ್ ಆದರೆ, ಅಥರ್ವ ಟೈಡೆ 29ಕ್ಕೆ ವಿಕೆಟ್ ಒಪ್ಪಿಸಿದರು.
ಕಳೆದ ಆವೃತ್ತಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ (10) ಮತ್ತೆ ವೈಫಲ್ಯ ಕಂಡರು. ಆದರೆ ನಂತರ ಬಂದ ಸ್ಯಾಮ್ ಕರ್ರಾನ್ ಮತ್ತು ಹರ್‌ಪ್ರೀತ್ ಸಿಂಗ್ ಭಾಟಿಯಾ ತಂಡಕ್ಕೆ ಆಸರೆಯಾದರು. ಇಬ್ಬರು 80 + ರನ್ನ ಬಿರುಸಿನ ಜೊತೆಯಾಟ ಮಾಡಿದರು. 28 ಬಾಲ್ ಎದುರಿಸಿದ ಹರ್‌ಪ್ರೀತ್ ಸಿಂಗ್ ಭಾಟಿಯಾ ಎರಡು ಸಿಕ್ಸ್ ಮತ್ತು 4 ಬೌಂಡರಿಯಿಂದ 41 ರನ್ ಗಳಿಸಿ ಗ್ರೀನ್ಗೆ ವಿಕೆಟ್ ಕೊಟ್ಟರು. ನಾಯಕ ಸ್ಯಾಮ್ 29 ಬಾಲ್ನಲ್ಲಿ 4 ಸಿಕ್ಸ್ ಮತ್ತು 5 ಬೌಂಡರಿಯಿಂದ 55 ರನ್ ಗಳಿಸಿದರು. ಸ್ಯಾಮ್ ಕರ್ರಾನ್ ಐಪಿಎಲ್ನ 3 ಅರ್ಧಶತಕ ದಾಖಲು ಮಾಡಿದರು.