ಕರ್ನಾಟಕ

karnataka

ETV Bharat / sports

IPL ಗಮ್ಮತ್ತು! ತಿಲಕ್‌ ವರ್ಮಾ ಬಾಯಿಗೆ ನಿಂಬೆ ಹುಳಿ ಹಿಂಡಿದ ಸೂರ್ಯಕುಮಾರ್: ವಿಡಿಯೋ - ಸೂರ್ಯಕುಮಾರ್‌ ಯಾದವ್‌

ವಿಮಾನದಲ್ಲಿ ತೆರಳುವಾಗ ಸೂರ್ಯಕುಮಾರ್‌ ಯಾದವ್‌ ಅವರು ತಿಲಕ್‌ ವರ್ಮಾ ಬಾಯಿಗೆ ನಿಂಬೆ ಹಣ್ಣಿನ ಹುಳಿ ಹಿಂಡುವ ಮೂಲಕ ತಮಾಷೆ ಮಾಡಿದ್ದಾರೆ.

Suryakumar Yadavs Lemon Prank
ತಿಲಕ್‌ ವರ್ಮಾ ಬಾಯಿಗೆ ನಿಂಬೆ ಹುಳಿ ಹಿಂಡಿದ ಸೂರ್ಯಕುಮಾರ್

By

Published : May 26, 2023, 9:10 AM IST

ಅಹಮದಾಬಾದ್:‌ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ 2023 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಭರ್ಜರಿ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್ ಆಟಗಾರರು ಜಾಲಿ ಮೂಡ್‌ನಲ್ಲಿದ್ದರು. ಎಲಿಮಿನೇಟರ್‌ನಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 81 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿರುವ ಮುಂಬೈ, ಎಲಿಮಿನೇಟರ್‌ 2 ರಲ್ಲಿ ಗುಜರಾತ್‌ ವಿರುದ್ಧ ಸೆಣಸಾಡಲಿದೆ. ಇದಕ್ಕಾಗಿ ತಂಡ ಚೆನ್ನೈನಿಂದ ಅಹ್ಮದಾಬಾದ್‌ಗೆ ತೆರಳಿದೆ. ವಿಮಾನದಲ್ಲಿ ತೆರಳುವಾಗ ಸೂರ್ಯಕುಮಾರ್‌ ಯಾದವ್‌ ಅವರು ತಿಲಕ್‌ ವರ್ಮಾ ಬಾಯಿಗೆ ನಿಂಬೆ ಹಣ್ಣಿನ ಹುಳಿ ಹಿಂಡುವ ಮೂಲಕ ತಮಾಷೆ ಮಾಡಿದ್ದಾರೆ.

ಗುಜರಾತ್​ ಟೈಟನ್ಸ್​ ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ಕ್ವಾಲಿಫೈಯರ್​ ಪಂದ್ಯ ಇಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಹಾಗಾಗಿ ಚೆನ್ನೈನಿಂದ ಅಹ್ಮದಾಬಾದ್‌ಗೆ ಸ್ಪೈಸ್‌ ಜೆಟ್‌ ವಿಮಾನದಲ್ಲಿ ತೆರಳುವಾಗ ಮುಂಬೈ ಇಂಡಿಯನ್ಸ್‌ ತಂಡದ ತಿಲಕ್‌ ವರ್ಮಾ ಅವರು ಗಾಢ ನಿದ್ದೆಗೆ ಜಾರಿದ್ದರು.

ಇದನ್ನು ನೋಡಿದ ಸೂರ್ಯಕುಮಾರ್‌ ಯಾದವ್‌ ಅವರು ಚೇಷ್ಟೆ ಮಾಡಲು ಮುಂದಾಗಿದ್ದಾರೆ. ಸೂರ್ಯಕುಮಾರ್‌ ಗಗನಸಖಿ ಬಳಿಯಿಂದ ನಿಂಬೆ ಹಣ್ಣನ್ನು ತೆಗೆದುಕೊಂಡು ಗಾಢ ನಿದ್ದೆಯಲ್ಲಿದ್ದ ತಿಲಕ್‌ ವರ್ಮಾ ಬಾಯಲ್ಲಿ ಹಿಂಡಿದ್ದಾರೆ. ಇದರಿಂದ ಎಚ್ಚರಗೊಂಡ ತಿಲಕ್‌ ವರ್ಮಾ, "ಕ್ಯಾ ಹೈ ಈಸ್ ಮೇ (ಇದೇನು)" ಎಂದು ಗಾಬರಿಗೊಂಡರು. ನಿಂಬೆ ಹಣ್ಣಿನ ರುಚಿ ತಿಳಿದ ಬಳಿಕ ಮುಖ ಸಿಂಡರಿಸಿದ್ದಾರೆ. ಸೂರ್ಯಕುಮಾರ್‌ ತಮಾಷೆ ಮಾಡುತ್ತಿದ್ದುದನ್ನು ನೋಡಿದ ಸಹ ಪ್ರಯಾಣಿಕರು, ಗಗನಸಖಿಯರು ಹಾಗೂ ತಂಡದ ಆಟಗಾರರು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

ಎಲಿಮಿನೇಟರ್‌ ಪಂದ್ಯದಲ್ಲಿ ಕ್ಯಾಮರಾನ್‌ ಗ್ರೀನ್ ಹಾಗೂ ಸೂರ್ಯಕುಮಾರ್‌ ಅವರ ಸಮಯೋಚಿತ ಬ್ಯಾಟಿಂಗ್‌ ಹಾಗೂ ಆಕಾಶ್‌ ಮಧ್ವಾಲ್‌ ಆಕ್ರಮಣಕಾರಿ ಬೌಲಿಂಗ್‌ ನೆರವಿನಿಂದ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್‌ ಇಂದು ಕ್ವಾಲಿಫೈಯರ್‌ 2 ರಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಸೆಣಸಾಡಲಿದೆ.

ಯಾರಿಗೆ ಫೈನಲ್‌ ಅದೃಷ್ಟ?:ಪ್ರಸ್ತುತಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇನ್ನು ಕೇವಲ 2 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಮೊದಲ 2ನೇ ಕ್ವಾಲಿಫಯರ್ ಪಂದ್ಯ ನಡೆಯಲಿದೆ. ಭಾನುವಾರ (ಮೇ 28) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಡುವ ತಂಡ ಯಾವುದು? ಎಂಬುದು ಖಚಿತವಾಗಲಿದೆ.

ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ 15 ರನ್‌ಗಳ ಅಂತರದಿಂದ ಸೋಲನುಭವಿಸುವ ಮೂಲಕ ನೇರವಾಗಿ ಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿತು. ಇದೀಗ ಮತ್ತೊಂದು ಅವಕಾಶ ಪಡೆದುಕೊಂಡಿರುವ ಗುಜರಾತ್ ಟೈಟನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಪೈಪೋಟಿ ನಡೆಸಲಿದೆ. ಇಂದು (ಶುಕ್ರವಾರ) ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ಗೆ ಲಗ್ಗೆ ಇಡಲಿದೆ.

ಇತ್ತ ಮುಂಬೈ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಡಿತ್ತು. ಈ ಪಂದ್ಯದಲ್ಲಿ 81 ರನ್‌ಗಳ ಅಂತರದಿಂದ ಗೆದ್ದು ಕ್ವಾಲಿಫಯರ್ ಪಂದ್ಯವನ್ನಾಡಲು ಸಜ್ಜಾಗಿದೆ. ಸಂಜೆ 7:30 ಕ್ಕೆ ಪಂದ್ಯಾರಂಭವಾಗಲಿದ್ದು 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪಂದ್ಯದ ನೇರಪ್ರಸಾರ ಮಾಡಲಿದೆ. ಜಿಯೋಸಿನಿಮಾ ಆ್ಯಪ್‌ ಮೂಲಕ ಲೈವ್‌ಸ್ಟ್ರೀಮಿಂಗ್ ಅನ್ನು ಉಚಿತವಾಗಿ ವೀಕ್ಷಿಸಬಹುದು.

ಇದನ್ನೂ ಓದಿ:ಅನಿಲ್​ ಕುಂಬ್ಳೆ ದಾಖಲೆ ಸರಿಗಟ್ಟಿದ ಆಕಾಶ್​ ಮಧ್ವಲ್​

ABOUT THE AUTHOR

...view details