ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಳೆದ ಎರಡು ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗುತ್ತಿರುವ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಈ ಸಲವೂ ಆಡುವ 11ರ ಬಳಗದಿಂದ ಅವಕಾಶ ವಂಚಿತರಾಗಿದ್ದಾರೆ. ಮುಂಬೈ ತಂಡ ಆಡಿರುವ 14 ಪಂದ್ಯಗಳ ಪೈಕಿ ಯಾವುದೇ ಪಂದ್ಯದಲ್ಲೂ 11ರ ಬಳಗದಲ್ಲಿ ಚಾನ್ಸ್ ಪಡೆದುಕೊಳ್ಳಲಿಲ್ಲ. ಹೀಗಾಗಿ, ಅರ್ಜುನ್ ತೆಂಡೂಲ್ಕರ್ ನೆಟ್ನಲ್ಲಿ ಅಭ್ಯಾಸ ನಡೆಸಿ, ಬೆಂಚ್ ಕಾಯುವಂತಾಯಿತು. ಇದರಿಂದ ಮನನೊಂದಿರುವ ಅವರಿಗೆ ತಂದೆ ಸಚಿನ್ ಅತ್ಯುತ್ತಮ ಸಲಹೆ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಚಿನ್ ತೆಂಡೂಲ್ಕರ್, ಪುತ್ರನಿಗೆ ಕೇವಲ ಆಟದ ಬಗ್ಗೆ ಗಮನ ಹರಿಸುವಂತೆ ಕಿವಿಮಾತು ಹೇಳಿದ್ದಾರೆ. ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವುದು ತಂಡದ ಒಂದು ಭಾಗ. ಆಟದ ಬಗ್ಗೆ ಮಾತ್ರ ಗಮನ ಹರಿಸು, ಬದಲಾಗಿ ಆಯ್ಕೆಯಾಗುವುದರ ಬಗ್ಗೆ ಅಲ್ಲ ಎಂದು ತಿಳಿಸಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಲೆಫ್ಟ್ ಆರ್ಮ್ ವೇಗದ ಬೌಲರ್ ಆಗಿದ್ದು, ಮೆಗಾ ಹರಾಜಿನಲ್ಲಿ 30 ಲಕ್ಷ ರೂಪಾಯಿ ನೀಡಿ, ಮುಂಬೈ ಫ್ರಾಂಚೈಸಿ ಇವರನ್ನ ಖರೀದಿ ಮಾಡಿತ್ತು. ಆದರೆ, ಆಡುವ 11ರ ಬಳಗದಲ್ಲಿ ಮಾತ್ರ ಅವಕಾಶ ಸಿಕ್ಕಿರಲಿಲ್ಲ. ಈ ಸಲ ರಾಜಸ್ಥಾನ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಬದಲಿ ಆಟಗಾರರಿಗೆ ರೋಹಿತ್ ಶರ್ಮಾ ಮಣೆ ಹಾಕಿದ್ದರು.
ಇದನ್ನೂ ಓದಿ:IPLನಲ್ಲಿಂದು GT vs RR ಮೊದಲ ಕ್ವಾಲಿಫೈಯರ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಗುಜರಾತ್
ಪುತ್ರನ ಆಯ್ಕೆ ವಿಚಾರವಾಗಿ ಖುದ್ದಾಗಿ ವಿಡಿಯೋ ಹರಿಬಿಟ್ಟಿರುವ ಸಚಿನ್ ತೆಂಡೂಲ್ಕರ್, ಅರ್ಜುನ್ ಕೇವಲ ಆಟದ ಬಗ್ಗೆ ಗಮನ ಹರಿಸಬೇಕು. ಹೊರತಾಗಿ ಆಯ್ಕೆಯಾಗುವುದರ ಬಗ್ಗೆ ಅಲ್ಲ. ನಾನು ಆಯ್ಕೆ ಸಮಿತಿಯ ವಿಚಾರದಲ್ಲಿ ಭಾಗಿಯಾಗಲು ಇಷ್ಟಪಡಲ್ಲ. ಅದು ಮ್ಯಾನೇಜ್ಮೆಂಟ್ಗೆ ಬಿಟ್ಟಿರುವ ವಿಚಾರ ಎಂದು ಹೇಳಿದ್ದಾರೆ. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್ ಆಡಿರುವ 14 ಪಂದ್ಯಗಳಿಂದ ಕೇವಲ 4ರಲ್ಲಿ ಗೆಲುವು ದಾಖಲು ಮಾಡಿ, 8 ಪಾಯಿಂಟ್ ಗಳಿಕೆ ಮಾಡಿ, ಅಭಿಯಾನ ಮುಗಿಸಿದೆ.