ಬೆಂಗಳೂರು:ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಆರ್ಸಿಬಿ ಪರ ಚೊಚ್ಚಲ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 40,000 ಅಭಿಮಾನಿಗಳ ಮುಂದೆ ಬೌಲಿಂಗ್ ಮಾಡುವಾಗ ಮೊಹಮ್ಮದ್ ಸಿರಾಜ್ ನೀಡಿದ ಸಲಹೆ ಬಗ್ಗೆ ವೈಶಾಕ್ ಹೇಳಿಕೊಂಡರು.
"ಮೊಹಮ್ಮದ್ ಸಿರಾಜ್ ಅವರೊಂದಿಗೆ ಮಾತನಾಡಿದ್ದು ಸಂತಸ ನೀಡಿತು. ಅವರು ಅದ್ಭುತ ಬೌಲರ್. ಸಾಕಷ್ಟು ಸಮಯದಿಂದ ಆರ್ಸಿಬಿಗಾಗಿ ಉತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ಸಿರಾಜ್ ನನಗೆ ಸಲಹೆ ನೀಡಿದರು. ನರ್ವಸ್ ಆದರೆ ಅದರ ಬಗ್ಗೆ ಚಿಂತಿಸಬೇಡ, ನಿನ್ನನ್ನು ನೀನು ನಂಬು. ನೀನಿಷ್ಟು ದಿನ ಏನು ಮಾಡಿದ್ದೀಯೋ ಅದನ್ನೇ ಮಾಡು, ನಿನ್ನ ಬೌಲಿಂಗ್ ಅನ್ನು ನೀನೇ ಮೆಚ್ಚುವಂತೆ ಮಾಡು" ಎಂದು ಸಲಹೆ ನೀಡಿದ್ದಾಗಿ ಹೇಳಿದ್ದಾರೆ.
"ಪಂದ್ಯದಲ್ಲಿ ವೈಶಾಕ್ ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ. ನಾವು ಪಂದ್ಯ ಮತ್ತು ನಿರ್ದಿಷ್ಟವಾಗಿ ಆತನ ಬೌಲಿಂಗ್ ಅನ್ನು ಆನಂದಿಸಿದೆವು. ಏಕೆಂದರೆ ಆತ ಉತ್ತಮ ಲೈನ್ ಮತ್ತು ಲೆಂತ್ನೊಂದಿಗೆ ಬೌಲಿಂಗ್ ಮಾಡಿದ್ದಾನೆ. ಅವನ ಕನಸುಗಳು ನನಸಾದ ದಿನ" ಎಂದು ವೈಶಾಕ್ ಪೋಷಕರು ಪ್ರತಿಕ್ರಿಯಿಸಿದ್ದಾರೆ.