ಕರ್ನಾಟಕ

karnataka

ETV Bharat / sports

IPL 2021: ರಾಯಲ್ಸ್ ವಿರುದ್ದ ಚಾಲೆಂಜರ್ಸ್ ಚಾಲೆಂಜ್​​​​: ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಸಂಜು ಪಡೆ ಚಿತ್ತ - ಐಪಿಎಲ್ ಪಂದ್ಯ

ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆದ್ದ ಆರ್​​ಸಿಬಿ ಪಾಯಿಂಟ್ ಟೇಬಲ್​ನಲ್ಲಿ ಮೂರನೇ ಸ್ಥಾನದಲ್ಲಿದ್ದು, ಈಗ ಪ್ಲೇ ಆಫ್ ಹಾದಿ ಸುಗಮಗೊಳಿಸಿಕೊಳ್ಳುವ ಚಿತ್ತದಲ್ಲಿದೆ.

Rajasthan Royals and Royal Challengers Bengaluru match today
IPL 2021: ರಾಯಲ್ಸ್ ಮತ್ತು ಚಾಲೆಂಜರ್ಸ್ ಹಣಾಹಣಿ: ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಸಂಜು ಪಡೆ ಚಿತ್ತ

By

Published : Sep 29, 2021, 10:24 AM IST

Updated : Sep 29, 2021, 11:06 AM IST

ದುಬೈ:ವಿರಾಟ್ ಕೊಹ್ಲಿ ಬಳಗ ಈಗಾಗಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ್ದು, ಇಂದು ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸುವ ವಿಶ್ವಾಸದಲ್ಲಿದೆ. ಇಂದು ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ಸ್ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದರೆ ಪ್ಲೇ ಆಫ್ ಹಂತಕ್ಕೆ ಹಾದಿ ಮತ್ತಷ್ಟು ಸರಾಗವಾಗಲಿದೆ. ಆದರೆ, ರಾಜಸ್ಥಾನ ರಾಯಲ್ಸ್​ಗೆ ಇದು ಅನಿವಾರ್ಯವಾಗಿ ಗೆಲ್ಲಬೇಕಾದ ಪಂದ್ಯ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಎರಡು ಪಂದ್ಯಗಳನ್ನು ಸೋತಿದ್ದು, ಹ್ಯಾಟ್ರಿಕ್ ಸೋಲಿನ ಭೀತಿಯೂ ಕಾಡುತ್ತಿದೆ.

ಆರ್​​ಸಿಬಿ ಕೂಡಾ ಸೋಲುಗಳಿಂದ ತತ್ತರಿಸಿದ್ದು, ಮುಂಬೈ ವಿರುದ್ಧ ಜಯ ಕಂಡಿದ್ದು ವಿಶ್ವಾಸ ಹೆಚ್ಚಿಸಿಕೊಂಡಿದೆ. ಕೆಕೆಆರ್ ಮತ್ತು ಸಿಎಸ್​ಕೆ ವಿರುದ್ಧ ಸೋಲು ಕಂಡಿರುವ ಆರ್​ಸಿಬಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಗ್ಲೇನ್ ಮ್ಯಾಕ್ಸ್​ವೆಲ್ ಕೂಡಾ ಉತ್ತಮ ಆಟವಾಡುತ್ತಿದ್ದಾರೆ. ಎ ಬಿ ಡಿವಿಲಿಯರ್ಸ್ ಫಾರ್ಮ್​​ಗೆ ಬರಬೇಕಿದ್ದು, ಪಡಿಕ್ಕಲ್ ಕೂಡಾ ಉತ್ತಮ ಪ್ರದರ್ಶನ ತೋರಬೇಕಿದೆ.

ಬೌಲಿಂಗ್​ ವಿಭಾಗದಲ್ಲಿ ಹರ್ಷಲ್ ಪಟೇಲ್ ಅದ್ಭುತವಾಗಿ ಆಡುತ್ತಿದ್ದು, ಯಜುವೇಂದ್ರ ಚಾಹಲ್ ಆಟದೊಂದಿಗೆ ಮೊಹಮ್ಮದ್ ಸಿರಾಜ್ ಇನ್ನೂ ಕೌಶಲ್ಯ ತೋರಬೇಕಿದೆ. ಇನ್ನು ಪಾಯಿಂಟ್ ಟೇಬಲ್ ವಿಚಾರಕ್ಕೆ ಬರುವುದಾದರೆ ಮೂರನೇ ಸ್ಥಾನದಲ್ಲಿ ಆರ್​ಸಿಬಿ ಇದ್ದು, ಇಂದಿನ ಪಂದ್ಯ ಗೆದ್ದರೆ ಪ್ಲೆ ಆಫ್​ ಖಚಿತಪಡಿಸಿಕೊಳ್ಳಲಿದೆ.

ಇದನ್ನೂ ಓದಿ:ವಿಶ್ವಕಪ್​ಗೆ ತಿಂಗಳಿರುವಾಗ ಇಶಾನ್, ಸೂರ್ಯಕುಮಾರ್ ಕಳಪೆ ಫಾರ್ಮ್​; ಟೀಂ ಇಂಡಿಯಾಗೆ ಅಯ್ಯರ್​!

Last Updated : Sep 29, 2021, 11:06 AM IST

ABOUT THE AUTHOR

...view details