ಪುಣೆ:ಪಂಜಾಬ್ ಕಿಂಗ್ಸ್ ತಂಡದ ಸ್ಟೈಲೀಶ್ ಎಡಗೈ ಆಟಗಾರ ಶಿಖರ್ ಧವನ್ 70 ರನ್ ಮತ್ತು ಮಯಾಂಕ್ ಅಗರ್ವಾಲ್ 52 ರನ್ ಹಾಗೂ ಜಿತೇಶ್ ಶರ್ಮಾರ 30 ರನ್ಗಳ ನೆರವಿನಿಂದ ಎದುರಾಳಿ ತಂಡಕ್ಕೆ 199ರನ್ಗಳ ಸವಾಲಿನ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಕೊನೆಯ ಓವರ್ನಲ್ಲಿ ಎಡವಿ ಸೋಲು ಕಂಡಿತು. ಮುಂಬೈ ಇಂಡಿಯನ್ಸ್‌ಗೆ ಇದು ಸತತ ಐದನೇ ಸೋಲಾಗಿದೆ.
ಪಂಜಾಬ್ ಇನ್ನಿಂಗ್ಸ್:ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಅರಂಭಿಕರಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ಗೆ ಅನುಭವಿ ಶಿಖರ್ ಧವನ್ ಜೊತೆಯಾಗಿ 97 ರನ್ಗಳನ್ನು ಕಲೆ ಹಾಕಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಮಯಾಂಕ್ ಈ ಪಂದ್ಯದಲ್ಲಿ ಆರಂಭದಿಂದಲೇ ಅಬ್ಬರಿಸಿದ್ದರು. ಅವರು 32 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 52 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇವರ ನಂತರ ಬಂದ ಟಿ20 ಸ್ಪೆಷಲಿಸ್ಟ್ಗಳಾದ ಜಾನಿ ಬೈರ್ಸ್ಟೋವ್ 12 ರನ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ 2 ರನ್ ಕಲೆ ಹಾಕುವ ಮೂಲಕ ಬ್ಯಾಟಿಂಗ್ನಲ್ಲಿ ವಿಫಲರಾದರು.
ಓದಿ:4,6,6,6,6...! 'ಬೇಬಿ ಎಬಿಡಿ' ಸಿಡಿಲಬ್ಬರದ ಬ್ಯಾಟಿಂಗ್
ಆದರೆ ದಿಢೀರ್ 3 ವಿಕೆಟ್ ಕಳೆದುಕೊಂಡರು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಶಿಖರ್ ಧವನ್ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 70 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿ ಥಂಪಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 15 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ಗಳ ಸಹಿತ ಅಜೇಯ 30 ರನ್ಗಳಿಸಿದರು. ಇವರಿಗೆ ಸಾಥ್ ನೀಡಿದ ಶಾರುಕ್ 6 ಎಸೆತಗಳಲ್ಲಿ 2 ಸಿಕ್ಸರ್ಗಳ ಸಹಿತ 15 ರನ್ ಗಳಿಸಿ ತಂಡದ ಮೊತ್ತವನ್ನು 200ರ ಸನಿಹಕ್ಕೆ ತಂದರು.
ಒಟ್ನಲ್ಲಿ ಪಂಜಾಬ್ ತಂಡ ನಿಗದಿತ 20 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 198ರನ್ಗಳಿಸಿತ್ತು. ಮುಂಬೈ ಇಂಡಿಯನ್ಸ್ ಪರ ಬೇಸಿಲ್ ಥಂಪಿ 47ಕ್ಕೆ 2 ವಿಕೆಟ್, ಜಸ್ಪ್ರೀತ್ ಬುಮ್ರಾ 28ಕ್ಕೆ 1 ವಿಕೆಟ್, ಮುರುಗನ್ ಅಶ್ವಿನ್ 34ಕ್ಕೆ 1 ವಿಕೆಟ್, ಜಯದೇವ್ ಉನಾದ್ಕಟ್ 44ಕ್ಕೆ 1 ವಿಕೆಟ್ ಪಡೆದರು.