ಕರ್ನಾಟಕ

karnataka

ETV Bharat / sports

IPL ಇತಿಹಾಸದಲ್ಲಿ ಸತತ ಎರಡು ಶತಕ ಸಿಡಿಸಿದ ಆಟಗಾರರು ಇವರು.. - ಈಟಿವಿ ಭಾರತ ಕನ್ನಡ

ಇಂಡಿಯನ್​ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲಿ ಸತತ ಎರಡು ಶತಕ ಬಾರಿಸಿ ದಾಖಲೆ ಬರೆದ ಆಟಗಾರರು ಯಾರು ಗೊತ್ತೇ?

ಸತತ ಎರಡು ಶತಕ ಸಿಡಿಸಿದ ಆಟಗಾರರಿವರು
ಸತತ ಎರಡು ಶತಕ ಸಿಡಿಸಿದ ಆಟಗಾರರಿವರು

By

Published : May 24, 2023, 11:41 AM IST

ಮಿಲಿಯನ್​ ಡಾಲರ್ ಚುಟುಕು ಕ್ರಿಕೆಟ್‌​ ಟೂರ್ನಿ ಎಂದೇ ಪ್ರಸಿದ್ಧಿ ಪಡೆದಿದರುವ ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್​) ಪ್ರತಿಭೆಗಳ ಸಾಮರ್ಥ್ಯ ಪ್ರದರ್ಶನಕ್ಕೆ ಮಹತ್ವದ ವೇದಿಕೆ. ಈ ಲೀಗ್​ನಿಂದ ಕ್ರಿಕೆಟ್​​ ಜಗತ್ತಿಗೆ ಪದಾರ್ಪಣೆ ಮಾಡಿದ ಅದೆಷ್ಟೋ ಆಟಗಾರರು ಇಂದು ಅಂತಾರಾಷ್ಟೀಯ ಮಟ್ಟದಲ್ಲಿ ಮಿಂಚು ಹರಿಸುತ್ತಿದ್ದಾರೆ. ಐಪಿಎಲ್​ನಲ್ಲಿ ದೇಶಿ ಮತ್ತು ವಿದೇಶಿ ಆಟಗಾರರು ಒಟ್ಟಿಗೆ ಆಡುವುದರಿಂದ ಭಾರತದ ಯುವ ಪ್ರತಿಭೆಗಳ ಭವಿಷ್ಯ ನಿರ್ಣಯಕ್ಕೆ ವೇದಿಕೆಯೂ ಆಗಿದೆ.

ಚುಟುಕು ಕ್ರಿಕೆಟ್​ ಟೂರ್ನಿಯಲ್ಲಿ ಶತಕ ಸಿಡಿಸಿ ಮೈಲಿಗಲ್ಲು ಸಾಧಿಸಿದ ಆಟಗಾರರು ಕಡಿಮೆ. ಅಂಥದ್ರಲ್ಲಿ ಆಟಗಾರರು ಸತತ ಎರಡು ಪಂದ್ಯಗಳಲ್ಲಿಯೂ ಶತಕ ಬಾರಿಸಿದ್ದು ಅಪರೂಪ. ಸತತ ಪಂದ್ಯಗಳಲ್ಲಿ ಶತಕಗಳನ್ನು ಸಿಡಿಸಿರುವ ಪಟ್ಟಿಗೆ ಸೇರಿರುವ ಆಟಗಾರರ ಮಾಹಿತಿ ಹೀಗಿದೆ..

ಶಿಖರ್​ ಧವನ್​:ಗಬ್ಬರ್​ ಎಂದೇ ಪ್ರಸಿದ್ಧಿ ಪಡೆದಿರುವ ಆರಂಭಿಕ ಬ್ಯಾಟರ್​ ಶಿಖರ್​ ಧವನ್​ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧವನ್ ಅವರು 2020 ರಲ್ಲಿ ಬ್ಯಾಕ್​ ಟು ಬ್ಯಾಕ್​ ಸೆಂಚುರಿ ಬಾರಿಸಿ ಈ ಮೈಲಿಗಲ್ಲು ಸಾಧಿಸಿದ ಮೊದಲಿಗ ಬ್ಯಾಟರ್​ ಎನಿಸಿಕೊಂಡಿದ್ದಾರೆ. 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಧವನ್​, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದರು.

ಜಾಸ್​ ಬಟ್ಲರ್​:2022 ರ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿದ್ದ ಜೋಸ್ ಬಟ್ಲರ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸತತ ಎರಡು ಶತಕ ಸಿಡಿಸಿ ಧವನ್ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರರಾಗಿದ್ದಾರೆ.

ವಿರಾಟ್​ ಕೊಹ್ಲಿ: ರನ್​ ಮಶೀನ್​, ದಾಖಲೆಗಳ ಸರದಾರ ಎಂದೇ ಪ್ರಸಿದ್ಧಿ ಪಡೆದಿರುವ ವಿರಾಟ್​ ಕೊಹ್ಲಿ ಬ್ಯಾಕ್​ ಟು ಬ್ಯಾಕ್​ ಸೆಂಚುರಿ ಬಾರಿಸಿದ ಮೂರನೇ ಆಟಗಾರ. ಪ್ರಸಕ್ತ ಋತುವಿನಲ್ಲೇ ಕೊಹ್ಲಿ ಈ ಪಟ್ಟಿಗೆ ಸೇರಿದ್ದಾರೆ. ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ನಡೆದ 65 ನೇ ಪಂದ್ಯದಲ್ಲಿ ಕೊಹ್ಲಿ ಮೊದಲ ಸೆಂಚುರಿ ಬಾರಿಸಿದ್ದರು. ಇದಾದ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಎರಡನೇ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಮೂಲಕ ಸತತ ಎರಡು ಪಂದ್ಯಗಳಲ್ಲಿಯೂ ಶತಕ ಬಾರಿಸಿದ ಆಟಗಾರರಾಗಿದ್ದಾರೆ.

ಶುಭಮನ್​ ಗಿಲ್:ಯುವ, ಆರಂಭಿಕ ಆಟಗಾರ ಪ್ರತಿಭಾವಂತ ಬ್ಯಾಟರ್​ ಶುಭಮನ್​ ಗಿಲ್ ಪ್ರಸಕ್ತ ಟೂರ್ನಿಯಲ್ಲಿ​ ಉತ್ತಮ ಪ್ರದರ್ಶನ ತೋರಿದ್ದಾರೆ. ಅಲ್ಲದೇ ಸತತ ಎರಡು ಶತಕಗಳನ್ನು ಬಾರಿಸುವ ಮೂಲಕ ದಾಖಲೆ ಬರೆದ ಯುವ ಅಟಗಾರ ಎಂಬ ಹೆಗ್ಗಳಿಕೆ ಇವರದ್ದು. 23 ವರ್ಷದ ಗಿಲ್​ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದರೆ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಎರಡನೇ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ:IPL ಪ್ಲೇಆಫ್‌ನ ಪ್ರತಿ ಡಾಟ್​ ಬಾಲ್​ಗೆ 500 ಸಸಿ: ಬಿಸಿಸಿಐನಿಂದ ಹಸಿರು ಸಂರಕ್ಷಣೆಯ ಮಹತ್ವದ ಯೋಜನೆ

ABOUT THE AUTHOR

...view details