ಅಬುದಾಭಿ:ಇಂಡಿಯನ್ ಪ್ರೀಮಿಯರ್ ಲೀಗ್ನ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸಮನ್ ಇಶನ್ ಕಿಶನ್ ಅಬ್ಬರಿಸಿದ್ದು, ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. 2021ರ ಐಪಿಎಲ್ನಲ್ಲಿ ಮೂಡಿ ಬಂದಿರುವ ಅತಿ ವೇಗದ ಸ್ಫೋಟಕ ಅರ್ಧಶತಕ ಇದಾಗಿದೆ.
ಅಬುದಾಭಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಮುಂಬೈ, ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಮೊರೆ ಹೋಯಿತು. ಹೀಗಾಗಿ 3.4 ಓವರ್ಗಳಲ್ಲಿ ತಂಡ 50ರ ಗಡಿ ದಾಟಿತು.
ಕಿಶನ್ ಸ್ಫೋಟಕ ಅರ್ಧಶತಕ
ಇಂದಿನ ಪಂದ್ಯದಲ್ಲಿ 170 ರನ್ಗಳಿಗಿಂತಲೂ ಹೆಚ್ಚಿನ ರನ್ಗಳಿಂದ ಗೆಲುವ ಅನಿವಾರ್ಯತೆ ನಿರ್ಮಾಣಗೊಂಡಿರುವ ಕಾರಣ ತಂಡದ ಆರಂಭಿಕ ಆಟಗಾರ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ತಾವು ಎದುರಿಸಿದ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಇದರಲ್ಲಿ 8 ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿಕೊಂಡಿದ್ದವು.
ಇದನ್ನೂ ಓದಿರಿ:T20 ವಿಶ್ವಕಪ್.. ಅ.13ಕ್ಕೆ ಟೀಂ ಇಂಡಿಯಾ ಜರ್ಸಿ ಅನಾವರಣ.. ನೀವೂ ಖರೀದಿ ಮಾಡಬಹುದು!